ಮಡಿಕೇರಿ: ಮದೆನಾಡು ಸಮೀಪದ ಕರ್ತೋಜಿ ಬಳಿ ರಸ್ತೆ ಪಕ್ಕದ ಗುಡ್ಡದಲ್ಲಿ ಬಿರುಕು ಕಂಡು ಬಂದಿದ್ದರಿಂದ ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ- ೨೭೫ರಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಮಡಿಕೇರಿ ಸಮೀಪದ ಕಾಟಗೇರಿ ಜಂಕ್ಷನ್ ಬಳಿ ಸಂಚಾರ ದಟ್ಟಣೆ ಉಂಟಾಗಿದೆ.
ಕರ್ತೋಜಿ ಬಳಿ 70 ರಿಂದ 80 ಅಡಿ ಎತ್ತರಲ್ಲಿ ರಸ್ತೆ ಪಕ್ಕದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ರಸ್ತೆಯೇ ಕುಸಿದು ಬೀಳುವ ಆತಂಕ ಎದುರಾಗಿದೆ. ಹೀಗಾಗಿ ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ರಾತ್ರಿ ಬಂದ್ ಮಾಡಲಾಗಿತ್ತು. ಇದರಿಂದಾಗಿ 20ಕ್ಕೂ ಹೆಚ್ಚು ಲಾರಿ ಹಾಗೂ ಪಿಕಪ್ ವಾಹನಗಳು ಸಾಲು ಗಟ್ಟಿ ನಿಂತಿದ್ದರಿಂದ ವಾಹನ ಚಾಲಕರು ಪರದಾಡುವಂತಾಯಿತು.
ಗುಡ್ಡ ಕುಸಿದು ರಾತ್ರಿ ಅಪಾಯ ಸಂಭವಿಸಬಹುದೆಂಬ ಕಾರಣದಿಂದ ಮಂಗಳವಾರ ರಾತ್ರಿ 9ಗಂಟೆಯಿಂದ ಬುಧವಾರ ಬೆಳಗ್ಗೆ 6.30 ರವರೆಗೆ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ ಆದೇಶ ಹೊರಡಿಸಿದ್ದರು. ಬುಧವಾರ ಪರಿಸ್ಥಿತಿ ನೋಡಿಕೊಂಡು ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಇದನ್ನೂ ಓದಿ | Rain News | ರಾಜ್ಯಾದ್ಯಂತ ಇನ್ನೂ 48 ಗಂಟೆ ಭಾರಿ ಮಳೆ; ಕರಾವಳಿ, ಉತ್ತರ ಒಳನಾಡಲ್ಲಿ ಅಬ್ಬರ ಸಾಧ್ಯತೆ!