Site icon Vistara News

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

ವಿಜಯಪುರ: ವಿಜಯಪುರ (Vijayapura news) ರಾಜಗುರು ಫುಡ್ಸ್ ಗೋದಾಮಿನಲ್ಲಿ ಭಾರಿ ಯಂತ್ರ ಕುಸಿದು (godown tragedy) ಅದರಡಿ ಬಿಹಾರ ಕಾರ್ಮಿಕರು ಸಿಲುಕಿದ (Labors death) ಪ್ರಕರಣದಲ್ಲಿ ಮೂವರ ಮೃತದೇಹಗಳು ದೊರೆತಿವೆ. ಇನ್ನೂ ನಾಲ್ಕು ಮಂದಿ ಕಾರ್ಮಿಕರು ಯಂತ್ರದಡಿ ಸಿಲುಕಿದ್ದು, ಅವರು ಬದುಕಿರುವ ಸಾಧ್ಯತೆ ಬಹುತೇಕ ಕ್ಷೀಣವಾಗಿದೆ.

ವಿಜಯಪುರ ಕೈಗಾರಿಕಾ ಪ್ರದೇಶದ (Vijayapura News) ರಾಜಗುರು ಇಂಡಸ್ಟ್ರೀಸ್‌ ಗೋದಾಮಿನಲ್ಲಿ ಮೆಕ್ಕೆ ಜೋಳದ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳಡಿ 10ಕ್ಕೂ ಹೆಚ್ಚು ಕಾರ್ಮಿಕರು ನಿನ್ನೆ ಸಿಲುಕಿದ್ದರು. ಫುಡ್ ಪ್ರೊಸೆಸಿಂಗ್ ಯುನಿಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಹಾರ ಮೂಲದ ಕಾರ್ಮಿಕರಾಗಿದ್ದರು. ಕಳೆದ ಹಲವು ವರ್ಷಗಳಿಂದ ರಾಜಗುರು ಇಂಡಸ್ಟ್ರೀಸ್‌ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು.

ಕಾರ್ಮಿಕರನ್ನು ರಕ್ಷಿಸಲು ನಿರಂತರವಾಗಿ 15 ಗಂಟೆಗಳಿಂದ 4 ಕ್ರೇನ್‌ ಹಾಗೂ ಜೆಸಿಬಿಗಳ ಮೂಲಕ ಸಂಸ್ಕರಣಾ ಘಟಕವನ್ನು ಎತ್ತಿ, ಅದರಡಿ ಸಿಲುಕಿದ ಕಾರ್ಮಿಕರ ಮೃತದೇಹ ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ.

ಇದುವರೆಗೆ ಮೂವರು ಮೃತ ಕಾರ್ಮಿಕರ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇನ್ನೂ ನಾಲ್ಕು ಕಾರ್ಮಿಕರನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರಿದಿದೆ. ಅವರೆಲ್ಲಾ ಬಹುತೇಕ ಬದುಕಿರುವ ಸಾಧ್ಯತೆಗಳು ಕ್ಷೀಣ ಎನ್ನಲಾಗುತ್ತಿದೆ. ಒಟ್ಟು 11 ಕಾರ್ಮಿಕರು ಅವಘಡದಲ್ಲಿ ಸಿಲುಕಿದ್ದರು. ಘಟನಾ ಸಂದರ್ಭದಲ್ಲಿ ಮೂವರು ಬಚಾವ್ ಆಗಿದ್ದರು. ಕಾರ್ಯಾಚರಣೆ ವೇಳೆ ಓರ್ವನನ್ನು ಸಿಬ್ಬಂದಿ ರಕ್ಷಿಸಿದ್ದರು.

ಕಾರ್ಮಿಕರ ಪತ್ತೆಗೆ ಪುಣೆಯಿಂದ 30ಕ್ಕೂ ಅಧಿಕ ಸಿಬ್ಬಂದಿಗಳಿರುವ ಎನ್‌ಡಿಆರ್‌ಎಫ್‌ ತಂಡ ಆಗಮಿಸಿದೆ. ಸ್ಥಳಕ್ಕೆ ಎಸ್‌.ಪಿ. ಋಷಿಕೇಶ ಸೋನಾವಣೆ, ಡಿಸಿ ಟಿ.ಭೂಬಾಲನ್ ಭೇಟಿ ನೀಡಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯೂ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಗೋದಾಮಿನಲ್ಲಿ ಯಂತ್ರ ಕುಸಿತ; ಜೋಳದ ಮೂಟೆಗಳಡಿ ಸಿಲುಕಿದ 10 ಕಾರ್ಮಿಕರು

Exit mobile version