Site icon Vistara News

Odisha Train Accident: ಒಡಿಶಾದಲ್ಲಿ ರೈಲು ಅಪಘಾತ; ಕಳಸದಿಂದ ತೆರಳಿದ್ದ 110 ಮಂದಿ ಸುರಕ್ಷಿತ

people from Kalasa

#image_title

ಚಿಕ್ಕಮಗಳೂರು: ಒಡಿಶಾದಲ್ಲಿ ನಡೆದ ಶಾಲಿಮಾರ್‌-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಹಾಗೂ ಗೂಡ್ಸ್‌ ರೈಲು ನಡುವಿನ ಅಪಘಾತದಲ್ಲಿ (Odisha Train Accident) 50ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದಾರೆ. ಕೋರಮಂಡಲ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಜಿಲ್ಲೆಯ ಕಳಸ ತಾಲೂಕಿನಿಂದ 110 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Odisha Train Accident: ಒಡಿಶಾದಲ್ಲಿ ಒಂದಲ್ಲ, ಎರಡಲ್ಲ, ಮೂರು ರೈಲುಗಳ ಮಧ್ಯೆ ಭೀಕರ ಅಪಘಾತ

ಕಳಸ, ಸಂಸೆ. ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಮಂದಿ ಎರಡು ದಿನಗಳ ಹಿಂದೆ ಜಾರ್ಖಂಡ್‌ನ ಸಮ್ಮೇದ್‌ ಶಿಖರ್ಜಿ ತೀರ್ಥಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು. ಇವರೆಲ್ಲಾ ಗುರುವಾರ ಬೆಂಗಳೂರಿನಿಂದ ರೈಲು ಮೂಲಕ ತೆರಳಿದ್ದರು. ಆದರೆ ಶುಕ್ರವಾರ ರಾತ್ರಿ ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಶಾಲಿಮಾರ್‌ ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಹಾಗೂ ಗೂಡ್ಸ್‌ ರೈಲು ಡಿಕ್ಕಿಯಾಗಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಳಸ ತಾಲೂಕಿನಿಂದ ತೆರಳಿದ್ದ 110 ಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ಪ್ರಯಾಣಿಕರ ಮಾಹಿತಿ ಕಲೆ ಹಾಕುತ್ತಿರುವ ರೈಲ್ವೆ ಅಧಿಕಾರಿಗಳು

ಒಡಿಶಾದಲ್ಲಿ ಭೀಕರ ರೈಲು ಅಪಘಾತದ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಯಾಣಿಕರ ಮಾಹಿತಿಯನ್ನು ಸಹಾಯವಾಣಿ ಮೂಲಕ ರೈಲ್ವೆ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಬೈಯಪ್ಪನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಸಹಾಯವಾಣಿ ಓಪನ್ ಮಾಡಲಾಗಿದೆ. ಈ ನಿಲ್ದಾಣದಿಂದ ಹೊರಟ ಪ್ರಯಾಣಿಕರ ಮಾಹಿತಿ ಪಡೆಯಲು ಪ್ರಯತ್ನ ಮಾಡಲಾಗುತ್ತದೆ.

Exit mobile version