ಬೆಂಗಳೂರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಮ್ ಮತ್ತು ಫಿಟ್‌ನೆಸ್ / ಬ್ಯೂಟೀಶಿಯನ್ / ವಿಡಿಯೋಗ್ರಫಿ / ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಪರಿಶಿಷ್ಟ ಜಾತಿಯ ಯುವ ಜನತೆಯಿಂದ ಅರ್ಜಿ ಆಹ್ವಾನಿಸಿದೆ. ಸ್ವ ಉದ್ಯೋಗ ನಿರ್ವಹಿಸಲು ಈ ತರಬೇತಿ ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ (Training for Youth).
ತರಬೇತಿಯ ವಿವರ
ಜಿಮ್ / ಫಿಟ್‌ನೆಸ್ ತರಬೇತಿ ಶಿಬಿರ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಬೆಂಗಳೂರು ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ವಿದ್ಯಾ ನಗರ / ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜನವರಿ 24ರಿಂದ ಫೆಬ್ರವರಿ 7ರ ತನಕ ಈ ತರಬೇತಿ ನಡೆಯಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವ 18-30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಬ್ಯೂಟೀಶಿಯನ್ ತರಬೇತಿ ಶಿಬಿರ 13 ದಿನಗಳ ಕಾಲ ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಜನವರಿ 26ರಿಂದ ಫೆಬ್ರವರಿ 7ರ ತನಕ ಶಿಬಿರ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಪಾಸ್ / ಫೇಲ್ ಆದವರು ಅರ್ಜಿ ಸಲ್ಲಿಸಬಹುದು. ವಯೋಮಿತಿ: 16-29 ವರ್ಷ.
ವಿಡಿಯೋಗ್ರಫಿ ತರಬೇತಿ ಶಿಬಿರ ಜನವರಿ 27ರಿಂದ ಫೆಬ್ರವರಿ 7ರ ತನಕ ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ವಯೋಮಿತಿ: 18-29 ವರ್ಷ.
ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ 8 ದಿನ ನಡೆಯಲಿದೆ. ಈ ಶಿಬಿರವನ್ನು ಜನವರಿ 31ರಿಂದ ಫೆಬ್ರವರಿ 7ರ ವರೆಗೆ ಆಯೋಜಿಸಲಾಗಿದೆ. ಪದವಿ ವಿದ್ಯಾರ್ಹತೆ ಹೊಂದಿದ 18-29 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಪತ್ರಿಕೋದ್ಯಮ ಓದಿದವರಿಗೆ ಆದ್ಯತೆ.
ಗಮನಿಸಿ
- ತರಬೇತಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ತನಕ ನಡೆಯಲಿದೆ.
- ಶಿಬಿರಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆ ಇದೆ.
- ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಒದಗಿಸಬೇಕು.
- ಹೊರ ಜಿಲ್ಲೆಯ ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
- ವಿಡಿಯೋಗ್ರಫಿ ತರಬೇತಿಗೆ 40 ಮಂದಿ ಮತ್ತು ಉಳಿದ ಮೂರು ತರಬೇತಿಗೆ 50 ಮಂದಿಯವರೆಗೆ ಅವಕಾಶ ಇದೆ.
ಹೆಸರು ನೋಂದಾಯಿಸುವ ವಿಧಾನ
ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ಜನ್ಮ ದಿನಾಂಕದ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲೆಗಳ ಉಪ / ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇಲ್ಲಿ ಹೆಸರು ನೋಂದಾಯಿಸಬೇಕು.
ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 155265 ಅಥವಾ ಮೊಬೈಲ್ ಸಂಖ್ಯೆ: 9740419829 ಸಂಪರ್ಕಿಸಿ.
ಇದನ್ನೂ ಓದಿ: Scholarships: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಎಲ್‌ಐಸಿ ಸ್ಕಾಲರ್‌ಶಿಪ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ