ಬೆಂಗಳೂರು: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಶಿಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ಸರ್ಕಾರ ನೀಡಿದೆ. ವಿಜಯನಗರವು ಬಳ್ಳಾರಿಯಿಂದ ಬೇರ್ಪಟ್ಟು ನೂತನ ಜಿಲ್ಲೆಯಾಗಿ ರಚನೆಗೊಂಡಿತ್ತು. ಆದರೆ, ಕೆಲವು ಶಿಕ್ಷಕರು ವರ್ಗಾವಣೆ ವಿಷಯದಲ್ಲಿ ತಾಲೂಕು ವ್ಯಾಪ್ತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈಗ ಪ್ರಾಥಮಿಕ ಶಾಲಾ ಶಿಕ್ಷಕರು ಮೂಲ ಜಿಲ್ಲೆಗೆ ಹೋಗಲು ಅಭಿಮತ ವರ್ಗಾವಣೆಗೆ (Transfer) ಅವಕಾಶ ಕಲ್ಪಿಸಲಾಗಿದೆ.
ಎರಡೂ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸ್ವಂತ ತಾಲೂಕುಗಳಿಗೆ ತೆರಳಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆಗೆ ಹಾಗೂ ವಿಜಯನಗರ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ವರ್ಗಾವಣೆ ಹೊಂದಲು ಬಯಸುವ ಶಿಕ್ಷಕರಿಂದ “ಅಭಿಮತ ಪತ್ರ” ಸಂಗ್ರಹಿಸಿ ವರ್ಗಾವಣೆ ಮಾಡಲು ಸರ್ಕಾರವು ಅನುಮತಿ ನೀಡಿದೆ. ಹೀಗಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ | Madrasa | ಉ.ಪ್ರದೇಶದಂತೆ ರಾಜ್ಯದಲ್ಲೂ ಮದ್ರಸಾ ಬಂದ್? ಚಟುವಟಿಕೆಗಳ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಸಮಿತಿ ರಚನೆ