ಬೆಂಗಳೂರು: ಈ ಹಿಂದೆ ಹಲವು ಯುವಕರು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಬಳಿಕ ಆ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುತ್ತಾ ಶೋಕಿ ಮಾಡುತ್ತಿದ್ದರು. ಇದು ಇತರ ಸವಾರರ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುವುದಲ್ಲದೆ, ಅಪಾಯವನ್ನೂ ತಂದೊಡ್ಡುತ್ತಿತ್ತು. ಇದೀಗ ಕೆಲ ಯುವಕರು ಬೈಕ್‌ನಲ್ಲಿ ಬಂದು ದಾರಿಹೋಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ದಾಂಧಲೆ ಮಾಡಿದ್ದಾರೆ. ಇದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡಿಂಗ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇತ್ತೀಚೆಗೆ ಟ್ರೋಲ್ ಪೇಜ್‌ಗಳು ಹೆಚ್ಚಾಗಿದ್ದು, ಬೇರೆಯವರ ಬಗ್ಗೆ ಕಮೆಂಟ್ ಮಾಡುವುದನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲೊಂದು ಟ್ರೋಲ್ ಪೇಜ್ ಅಸಭ್ಯವಾಗಿ ವರ್ತಿಸಿದೆ. ಬೈಕ್ ಏರಿದ ಯುವಕರಿಬ್ಬರು ದಾರಿಹೋಕರ ಜತೆ ಅಸಭ್ಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ.
ಈ ಕಿಡಿಗೇಡಿಗಳು ಬೈಕ್ ಓಡಿಸುತ್ತಾ ಯಾರಾದರು ಹೆಣ್ಣುಮಕ್ಕಳು ನಡೆದುಕೊಂಡು ಹೋಗುತ್ತಿದ್ದರೆ, ಹತ್ತಿರ ಹೋಗಿ ಅವರಿಗೆ ಗಾಬರಿಯಾಗುವಂತೆ ಜೋರಾಗಿ ಕಿರುಚಿ ಪರಾರಿ ಆಗುತ್ತಿದ್ದಾರೆ. ಮಾತ್ರವಲ್ಲದೆ ವೃದ್ಧರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೀಟಲೆ ಮಾಡಿದ್ದಾರೆ. ಅಸಭ್ಯ ಪದ ಬಳಕೆ ಮಾಡುವುದರ ಜತೆಗೆ ಬಾಡಿಶೇಮಿಂಗ್ ಮಾಡಿದ್ದಾರೆ.
ಇದನ್ನೂ ಓದಿ: Bengaluru Auto Bandh: ಬೈಕ್ ಟ್ಯಾಕ್ಸಿಗೆ ವಿರೋಧ; ಇಂದು ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ
ಆ ಯುವಕರು ಇದನ್ನೆಲ್ಲ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಸುಮಾರು 44 ಸೆಕೆಂಡುಗಳ ಈ ವಿಡಿಯೊಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಘಟನೆ ಜಯನಗರ ನ್ಯಾಷನಲ್ ಕಾಲೇಜು ಬಳಿ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಇಂತಹ ಪುಂಡರಿಗೆ ತಕ್ಕಶಾಸ್ತಿ ಮಾಡಬೇಕೆಂಬ ಮಾತುಗಳು ಕೇಳಿ ಬಂದಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ