ತುಮಕೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ (Tumakuru Jail) ಊಟ ಬಿಟ್ಟು ಕೈದಿಗಳು ಪ್ರತಿಭಟಿಸಿದ್ದಾರೆ. ಸಮರ್ಪಕವಾಗಿ ಊಟವೂ ಕೊಡದೆ, ಕಳೆಪೆ ಗುಣಮಟ್ಟದ ಆಹಾರ ಕೊಡುತ್ತಿರುವ ಆರೋಪ ಕೇಳಿಬಂದಿದೆ.
ಭಾನುವಾರ ರಾತ್ರಿಯಿಂದಲೂ ಊಟ ತಿನ್ನದೇ ತುಮಕೂರು ಜಿಲ್ಲಾ ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ವಿಚಾರಣಾಧೀನ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಚಾರಣಾಧೀನ ಕೈದಿಗಳ ಸಂಬಂಧಿಕರು ಹೊರಗೆ ಅಸಮಾಧಾನ ಹೊರಹಾಕಿದ್ದರೆ, ಇತ್ತ ಜೈಲಿನ ಒಳಗೆ ನೂರಾರು ಕೈದಿಗಳು ಪ್ರತಿಭಟಿಸಿದ್ದಾರೆ.
ಇತ್ತ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೈದಿಗಳ ಜತೆ ಮಾತುಕತೆ ನಡೆಸಿದರು.
ಇದನ್ನೂ ಓದಿ | New airline Fly 91 | ಬಾನಂಗಳದಲ್ಲಿ ಹೊಸ ಏರ್‌ಲೈನ್ ಫ್ಲೈ91 ವಿಮಾನ ಹಾರಾಟ ಶೀಘ್ರ ಆರಂಭ