ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರೇಳಿಕೊಂಡು ಅವರ ಆಪ್ತರೊಬ್ಬರು ವಂಚನೆ ಮಾಡಿದ್ದಾರೆ ಎಂಬ ದೂರಲಾಗಿದೆ.
ಬೆಂಗಳೂರಿನ ಕೋಟ್ಯಾಧಿಪತಿ ಅಂತರಾಜ್ ಕುಟುಂಬದವರು ಈ ಆರೋಪ ಮಾಡಿದ್ದು, ಸಿದ್ದರಾಮಯ್ಯ ಅವರ ಆಪ್ತದಾರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೈ.ಸಿ. ಸಿದ್ದರಾಮಯ್ಯ ಅವರು ವಂಚಿಸಿದ್ದಾರೆ ಎಂದು ಹೇಳಿದ್ದಾರೆ.
ವೈ.ಸಿ.ಸಿದ್ದರಾಮಯ್ಯರ ಸಂಬಂಧಕರಿಗೆ ಸೇರಿದ ಬೀ ಹೈವ್ ಗ್ರಾಂಡ್ ತ್ರಿ ಸ್ಟಾರ್ ಹೋಟೆಲ್ ಅನ್ನು ಅಂತರಾಜ್ ಬಾಡಿಗೆ ಪಡೆದಿದ್ದರು. ಹೊಟೇಲ್ ಇಂಟಿರಿಯರ್, ಪಿಠೋಪಕರಣಕ್ಕೆ 1 ಕೋಟಿ ಖರ್ಚು ಮಾಡಿದ್ದರು. ಮುಂಗಡ ಹಣವಾಗಿ 50 ಲಕ್ಷ ರೂಪಾಯಿ ಕೊಟ್ಟಿದ್ದರು.
ಆದರೆ ಹೋಟೆಲ್ ಆರಂಭವಾಗುತಿದ್ದಂತೆ ಅಂತರಾಜ್‌ನನ್ನು ಹೋಟೆಲ್ ಮಾಲೀಕ ಹೊರಹಾಕಿದ್ದ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದಲೇ ಹೋಟೆಲ್ ಉದ್ಘಾಟನೆಗೊಂಡಿತ್ತು. ಅತ್ತ ದುಡ್ಡು ಕೊಡದೇ, ಇತ್ತ ಹೊಟೇಲ್ ನಡೆಸಲೂ ಬಿಡದೇ ವಂಚನೆ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ದುರುಪಯೋಗ ಮಾಡಿಕೊಂಡು ವೈ.ಸಿ. ಸಿದ್ದರಾಮಯ್ಯ ಆವಾಜ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಾಲ ತೀರಿಸುವ ಸಲುವಾಗಿ ಒಂದು ಡ್ಯೂಪ್ಲೆಕ್ಸ್ ಮನೆ, ಇನ್ನೊಂದು ಮೂರು ಅಂತಸ್ತಿನ ಮನೆ ಮಾರಾಟ ಮಾಡಿದ್ದೇವೆ. ಎರಡು ಕಾರು, ಬೈಕ್ ಅನ್ನೂ ಮಾರಿಕೊಂಡಿದ್ದೇವೆ ಎಂದಿರುವ ಅಂತರಾಜ್, ನ್ಯಾಯಕ್ಕಾಗಿ ಹೋಟೆಲ್ ಎದುರು ಕುಟುಂಬ ಸಮೇತ ಧರಣಿ ಕುಳಿತಿದ್ದಾರೆ.
ಇದನ್ನೂ ಓದಿ | SCST reservation | ಸುಗ್ರೀವಾಜ್ಞೆ ಬದಲು ವಿಶೇಷ ಅಧಿವೇಶನ ಕರೆದು ಮೀಸಲು ಹೆಚ್ಚಿಸಿ ಎಂದ ಸಿದ್ದರಾಮಯ್ಯ