Site icon Vistara News

ಬಿ.ಸಿ. ನಾಗೇಶ್ ಮನೆ ಮೇಲೆ NSUI ದಾಳಿಗೆ ಆಲದ ಮರ Club Houseನಲ್ಲಿ ನಡೆದಿತ್ತಂತೆ ಸಂಚು

B.C nagesh

ತುಮುಕೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನೆ ಮೇಲೆ NSUI ದಾಳಿಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ತಿಪಟೂರಿನ  ಕೆ.ಆರ್. ಬಡಾವಣೆಯಲ್ಲಿನ ನಾಗೇಶ್‌ ಅವರ ಮನೆಗೆ ಒಂದು ಡಿ.ಎ.ಆರ್. ತುಕಡಿ ಸೇರಿದಂತೆ ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಸ್ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿದೆ. ಇದೇ ವೇಳೆ, ನಾಗೇಶ್‌ ಮನೆ ಮೇಲೆ ದಾಳಿಗೆ ಕ್ಲಬ್‌ಹೌಸ್‌ ಮೊಬೈಲ್‌ ಆ್ಯಪ್‌ನಲ್ಲಿ ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಅಂಶ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶಶಾಂಕ್‌ ಅಲೆಮಾರಿ ಜೀವನ ಎಂಬ ಕ್ಲಬ್‌ ಹೌಸ್‌ ಐಡಿ

ಸಚಿವ ಬಿ.ಸಿ. ನಾಗೇಶ್ ಮನೆಯಲ್ಲಿ ದಾಂಧಲೆ ನಡೆಸಲು ಆಲದ ಮರ ಎಂಬ ಕ್ಲಬ್ ಹೌಸ್ ಗ್ರೂಪಲ್ಲಿ ಪ್ಲಾನ್‌ ನಡೆದಿದೆ. ಮೇ‌ 31ರ ರಾತ್ರಿ ಕ್ಲಬ್‌ ಹೌಸ್‌ನಲ್ಲಿ ಮಾತುಕತೆ ಆಗಿತ್ತು. ಶಶಾಂಕ್‌ ಅಲೆಮಾರಿ ಜೀವನ ಎಂಬ ಐಡಿಯ ಮೂಲಕ ಕ್ಲಬ್‌ಹೌಸ್‌ನಲ್ಲಿ ಮಾತನಾಡಿದ್ದ ಆರೋಪಿಗಳು ಕನ್ನಡ ನಾಡಿನ ಹಿತ ಕಾಯೋದು ನಮ್ಮೆಲ್ಲರ ಕೆಲಸ ಎಂದು ಹೇಳಿಕೊಂಡು ಚರ್ಚೆ ಮಾಡಿದ್ದರು. ಇದೇ ಕಾರಣಕ್ಕೆ ನಾಗೇಶ್‌ ಮನೆ ಮೇಲೆ ದಾಳಿ ನಡೆಸುವ ತೀರ್ಮಾನ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ

ಇದನ್ನೂ ಓದಿ | ಬಿ.ಸಿ ನಾಗೇಶ್ ಮನೆಗೆ ಮುತ್ತಿಗೆ ಪ್ರಯತ್ನ; NSUI  ಕಾರ್ಯಕರ್ತರ ಬಂಧನ: ಗೃಹ ಸಚಿವರಿಂದ ಖಂಡನೆ

ಪ್ರತ್ಯಕ್ಷದರ್ಶಿ ಹೇಳಿಕೆ

ಸುಮಾರು 30-40 ಜನ ಏಕಾಏಕಿ ಗೇಟ್ ಒದ್ದು ಒಳಗೆ ಬಂದರು ಕೂಗುತ್ತಾ ಚೀರಾಡುತ್ತಾ ಒಳಗೆ ಬಂದರು. ಮೂರ್ನಾಲ್ಕು ಜನ ಮನೆ ಒಳಗಡೆ ನುಗ್ಗಲು ಪ್ರಯತ್ನಿಸಿದ್ದರು ನಾವು ತಡೆದು ಅಂಗಳದಲ್ಲೇ ತಡೆದೆವು. ಸಚಿವರು ಮತ್ತು ಆರ್‌ಎಸ್‌ಎಸ್‌ ವಿರುದ್ದ ಘೋಷಣೆ ಕೂಗಿದರು. ಆರ್‌ಎಸ್‌ಎಸ್‌ ಸಮವಸ್ತ್ರಕ್ಕೆ ಬೆಂಕಿ ಹಚ್ಚಿದರು ಎಂದು ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಹಾಗೂ ನಾಗೇಶ್‌ ಮನೆಕೆಲಸವರಾದ ಆನಂದ್‌ ಹೇಳಿಕೆ ನೀಡಿದ್ದಾರೆ‌

ಜಿಲ್ಲೆಯಾದ್ಯಂತ ಪ್ರತಿಭಟನೆ

ಕಾಂಗ್ರೆಸ್ ವಿರುದ್ದ ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು

ತುಮಕೂರು ಜಿಲ್ಲೆಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡಿದೆ. ತಿಪಟೂರು ಪೈ ಹೊಟೇಲ್ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಿದೆ. ಕಾಂಗ್ರೆಸ್ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಬಿ.ಎಸ್. ರಸ್ತೆ ತಡೆ ಮಾಡಿ ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರ ಹಾಕಿದರು. ಕೃತ್ಯಕ್ಕೆ ಕಾಂಗ್ರೆಸ್ ಬೆಷರತ್ ಕ್ಷಮೆ ಕೇಳಬೇಕು. ಕಾಂಗ್ರೆಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ನಾಟಕ‌ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ | ಪಠ್ಯದಲ್ಲಿ ಬ್ರಾಹ್ಮಣೀಕರಣ ಮಾಡುತ್ತಿಲ್ಲ, ಇತಿಹಾಸ ಹಾಗೂ ರಾಷ್ಟ್ರೀಯತೆ ಇದೆ ಎಂದ ಸಚಿವ ನಾಗೇಶ್‌

Exit mobile version