ಬಳ್ಳಾರಿ: ಬಳ್ಳಾರಿಯ ಕುರುಗೋಡಿನ ಬಳಿ ಮಟ್ಕಾ ಹಾಗೂ ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಗಡಿಪಾರು ಮಾಡುವಂತೆ ನ್ಯಾಯಲಯ ಆದೇಶ ಹೊರಡಿಸಿದೆ. ಒಟ್ಟು 18 ಜನರ ವಿರುದ್ಧ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪ ಇತ್ತು. ಪ್ರಸ್ತುತ ಇಬ್ಬರು ಪ್ರಮುಖ ಆರೋಪಿಗಳನ್ನು ಗಡಿಪಾರು ಮಾಡುವಂತೆ ಬಳ್ಳಾರಿ ಜಿಲ್ಲಾಧಿಕಾರಿ ನ್ಯಾಯಾಲದಿಂದ ಆದೇಶಿಸಿದೆ.
ಕುರುಗೋಡು ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 18 ಜನ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಪ್ರಕರಣ ದಾಖಲಾಗಿತ್ತು. ಬಳ್ಳಾರಿ ಪೊಲೀಸರು ಅವರೆಲ್ಲರನ್ನೂ ಗಡಿಪಾರು ಮಾಡುವಂತೆ ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಜಿಲ್ಲೆಯಿಂದ ಗಡಿ ಪಾರು ಮಾಡುವಂತೆ ಆದೇಶ ಹೊರಡಿಸಿದೆ ಹಾಗೂ ಉಳಿದ 16 ಆರೋಪಿಗಳ ವಿರುದ್ಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದೆ.
ಸದ್ಯ ಗಡಿಪಾರು ಆದವರನ್ನು ಕುರುಗೋಡಿನ ಟಾಕೀಸ್ ಸೀನ ಹಾಗೂ ಬಾದನಹಟ್ಟಿ ಅಂಜಿ ಎಂದು ಗುರುತಿಸಲಾಗಿದೆ. ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಬಾದನಹಟ್ಟಿ ಅಂಜಿ ಕಲಬುರಗಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಹಾಗೂ ಟಾಕೀಸ್ ಸೀನಾ ತುಮಕೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ: ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ 705 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ