ತುಮಕೂರು: ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಊರ್ಡಿಗೆರೆ ಹೋಬಳಿ ದುರ್ಗದ ಹಳ್ಳಿಯಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕ್ಯಾತ್ಸಂದ್ರ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ನಾಡ ಬಂದೂಕು ತಯಾರಿಸುತ್ತಿದ್ದ ಆರೋಪಿ ಕೃಷ್ಣಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ನಾಡ ಬಂದೂಕು ತಯಾರಿಕೆಯಲ್ಲಿ ಕೃಷ್ಣಪ್ಪ ಮತ್ತು ತಂಡ ತೊಡಗಿತ್ತು. ಆರೋಪಿ ಕೃಷ್ಣಪ್ಪ ಸೇರಿದಂತೆ ಅವನಿಂದ ಬಂದೂಕು ಖರೀದಿಸಿದ ಎಂಟು ಜನರನ್ನು ಕ್ಯಾತ್ಸಂದ್ರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕ್ಯಾತ್ಸಂದ್ರ ಪಿಎಸ್ಐ ಓಂಕಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ನಾಡ ಬಂದೂಕುಗಳ ತಯಾರಿ, ರಿಪೇರಿ ಹಾಗೂ ಸಿಡಿಮದ್ದುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಯನ್ನು ಎಸ್‌ಪಿ ರಾಹುಲ್ ಕುಮಾರ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ: Video: ಉದಯಪುರ ಹಂತಕರನ್ನು ಪೊಲೀಸರು ಬಂಧಿಸಿದ್ದು ಹೇಗೆ?; ಸಾಹಸಿ ಕಾರ್ಯಾಚರಣೆ !