Site icon Vistara News

ವಿರೋಧದ ನಡುವೆ ತುಮಕೂರು ಕುರುಬರ ಸಮಾವೇಶಕ್ಕೆ ಸಿದ್ಧತೆ ಜೋರು, ಭಾಗಿಯಾಗ್ತಾರೆ ಸಿದ್ದರಾಮಯ್ಯ

ಜಿಲ್ಲಾ ಕುರುಬರ ಸಮಾವೇಶ

ತುಮಕೂರು : ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಬಣಗಳ ಕಾದಾಟದ ನಡುವೆ ಶನಿವಾರ ನಗರದ ಶಿರಾ ಗೇಟ್ ಬಳಿಯ ಕಾಳಿದಾಸ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಕುರುಬರ ಸಮಾವೇಶ ಅದ್ಧೂರಿಯಾಗಿ ನಡೆಯಲಿದೆ.

ವಿಶೇಷ ಆಹ್ವಾನಿತರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಸಮಾವೇಶದ ವಿಚಾರವಾಗಿ ಪರ ವಿರೋಧ ವ್ಯಕ್ತವಾಗಿತ್ತು. ಒಂದು ಬಣ ಇದು ಕಾಂಗ್ರೆಸ್ ಸಮಾವೇಶ ಎಂದು ಕಿಡಿ ಕಾರಿತ್ತು.

ಇದನ್ನೂ ಓದಿ | ಸಿದ್ದರಾಮಯ್ಯ- ಈಶ್ವರಪ್ಪ ಬಣಗಳ ನಡುವೆ ಮಾತಿನ ಚಕಮಕಿ

ಇನ್ನು ಸಮಾವೇಶಕ್ಕೆ ಸ್ವಾಮೀಜಿಗಳನ್ನು ಕರೆಯದೆ ನಿರ್ಲಕ್ಷ್ಯ ಮಾಡಿರುವ ಹಿನ್ನಲೆ ಸಮುದಾಯದ ಕೆಲ ನಾಯಕರು ಸಮಾವೇಶಕ್ಕೆ  ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕರೆಸಿ ಅದ್ಧೂರಿ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದ್ದು, ಇದು ಮುಂಬರುವ 2023ರ ವಿಧಾನ ಸಭಾ ಚುನಾವಣೆಯ ಪೂರ್ವ ತಯಾರಿ ಮತ ಕ್ರೋಡಿಕರಣದ ಸಮಾವೇಶ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ | ಸಿದ್ದರಾಮಯ್ಯ ವಿರುದ್ಧ ಚುನಾವಣಾ ನೀತಿ ಸಂಹಿತೆ ದೂರು ದಾಖಲು

Exit mobile version