Site icon Vistara News

Harrassment Case : ಐ ಲವ್‌ ಯೂ ಎಂದು ಹೇಳಿ SSLC ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ; ಶಿಕ್ಷಕ ಅರೆಸ್ಟ್‌

Sexual assualt on SSLC Student by teacher

#image_title

ತುಮಕೂರು: ತಾನು ಪಾಠ ಮಾಡುತ್ತಿದ್ದ ವಿದ್ಯಾರ್ಥಿನಿಗೇ ಲೈಂಗಿಕ ಕಿರುಕುಳ (Harrassment Case) ನೀಡಿದ ಆರೋಪದಲ್ಲಿ ಪಾವಗಡ ಪೊಲೀಸರು ಹೈಸ್ಕೂಲ್‌ ಶಿಕ್ಷಕನೊಬ್ಬನನ್ನು ಬಂಧಿಸಿದ್ದಾರೆ (High School teacher Arrest). 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಈ ರೀತಿ ದೌರ್ಜನ್ಯ ಎಸಗಿದ ಆರೋಪಿ ಶಿಕ್ಷಕ ಪಿ.ನಾಗಭೂಷಣ್ ಈಗ ಜೈಲುಪಾಲಾಗಿದ್ದಾನೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸಾಸಲುಕುಂಟೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕನಾಗಿರುವ ಪಿ.ನಾಗಭೂಷಣ್ ಈ ಹಿಂದೆ ಮಧುಗಿರಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮಾಡಿದ ಕೃತ್ಯಕ್ಕೆ ಈಗ ಬಂಧನವಾಗಿದೆ.

ಅಂದು ಮಧುಗಿರಿ ತಾಲೂಕಿನ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ನಾಗಭೂಷಣ್‌. ವಿದ್ಯಾರ್ಥಿನಿಗೆ ಐ ಲವ್ ಯೂ ಎಂದು ಹೇಳಿ ಬಳೆ ತೊಡಿಸಿ ಆಮಿಷವೊಡ್ಡಿ ಬಡವನಹಳ್ಳಿಯಲ್ಲಿ ಬೇರೆ ಕಡೆಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದ. ಆತನ ಮೇಲೆ ಇಲಾಖೆಗೆ ದೂರು ನೀಡಲಾಗಿತ್ತು. ಇದೇ ಆರೋಪದಲ್ಲಿ ಇಲಾಖೆ ಅಮಾನತು ಮಾಡಿತ್ತು. ಬಳಿಕ ಪಾವಗಡ ತಾಲ್ಲೂಕಿನ ಸಾಸಲುಕುಂಟೆ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆ ಮಾಡಲಾಗಿತ್ತು‌. ಆಗ ಆದರೆ ಶಿಕ್ಷಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ಯಾವುದೇ ದೂರು ದಾಖಲಾಗದ ಹಿನ್ನೆಲೆಯಲ್ಲಿ ನಾಗಭೂಷಣ್‌ ಅಮಾನತಿನ ಬಳಿಕ ಪಾವಗಡ ತಾಲ್ಲೂಕಿನ ಸಾಸಲುಕುಂಟೆ ಸರ್ಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದ.

ಇದನ್ನೂ ಓದಿ: Harrassment Case : ಡಿ ಗ್ರೂಪ್‌ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಗೂಸಾ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದರೂ ಶಿಕ್ಷಕನ ಮೇಲೆ ಯಾವುದೇ ಕಾನೂನು ಕ್ರಮ ಆಗದ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ನೊಂದ ಬಾಲಕಿಯ ಪೋಷಕರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. “ನಿನ್ನ ಮಗಳನ್ನು ಎಷ್ಟು ಹಣಕ್ಕೆ ಮಾರಿದ್ದೀಯಾ?’ ಎಂದು ಅವಹೇಳನ ಮಾಡುತ್ತಿದ್ದಾರೆ, ಆದ್ದರಿಂದ ಸದರಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯ ತಾಯಿ ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ.

Exit mobile version