Site icon Vistara News

Karnataka Election 2023: ಏ.15ರಂದು ಬಿ.ಎಸ್‌. ನಾಗರಾಜು ನಾಮಪತ್ರ ಸಲ್ಲಿಕೆ; ಮಾಜಿ ಸಿಎಂ ಎಚ್‌ಡಿಕೆ ಭಾಗಿ

#image_title

ಗುಬ್ಬಿ: ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಚುನಾವಣೆಯ (Karnataka Election 2023) ಕಣ ರಂಗೇರಿದೆ. ಜೆಡಿಎಸ್‌ ಅಭ್ಯರ್ಥಿಯಾಗಿರುವ ಬಿ.ಎಸ್‌. ನಾಗರಾಜು ಅವರು ಏಪ್ರಿಲ್‌ 15ರಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಾರು ಜೆಡಿಎಸ್‌ ಕಾರ್ಯಕರ್ತರು ತನ್ನೊಂದಿಗಿರಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

ತಾಲೂಕಿನ ನಿಟ್ಟೂರಿನ ಶ್ರೀ ಮರಿಯಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದ ಅವರು, “ಪಂಚರತ್ನ ಯೋಜನೆಯ ಮೂಲಕ ಆರೋಗ್ಯ, ಶಿಕ್ಷಣ, ಉದ್ಯೋಗ, ಮಹಿಳೆಯರ ಸಬಲೀಕರಣ ಸೇರಿದಂತೆ ಹತ್ತು ಹಲವು ಸಾರ್ವಜನಿಕ ಕೆಲಸಗಳನ್ನು ಮಾಡಲು ನಮ್ಮ ನಾಯಕರಾದ ಕುಮಾರಸ್ವಾಮಿಯವರು ಯೋಜನೆ ಮಾಡಿದ್ದಾರೆ. ಗುಬ್ಬಿ ತಾಲೂಕಿನಲ್ಲಿ ಜನರ ಪ್ರೀತಿ ವಿಶ್ವಾಸ ನೋಡಿದಾಗ ಈ ಬಾರಿ ಸಹ ಜೆಡಿಎಸ್ ಭದ್ರಕೋಟೆಯಾದ ಈ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಗೆಲುವು ನಿಶ್ಚಿತ ಎಂದು ತಿಳಿಯುತ್ತದೆ. ಮಾಜಿ ಶಾಸಕರಿಗೆ ಈಗಾಗಲೇ ಭಯ ಶುರುವಾಗಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ, ದೇವೇಗೌಡರ ವಿರುದ್ಧವೇ ಮಾತನಾಡಿರುವ ಮಹಾನಾಯಕ ಇಲ್ಲಿನ ಮಾಜಿ ಶಾಸಕ. ನನ್ನ ಬಗ್ಗೆಯೂ ಮಾತನಾಡುವುದು ದೊಡ್ಡದೇನಲ್ಲ. ಚುನಾವಣೆ ಮುಗಿದ ಮೇಲೆ, ಮೇ 13ರ ಫಲಿತಾಂಶ ಎಲ್ಲ ಮಾತುಗಳಿಗೆ ಉತ್ತರವಾಗುತ್ತದೆ” ಎಂದು ತಿಳಿಸಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಗಂಗಸಂದ್ರದ ಮಂಜುನಾಥ್ ಮಾತನಾಡಿ, “ಯಾರ ಹೆದರಿಕೆ, ಬೆದರಿಕೆಗೂ ನಾವು ಬಗ್ಗುವುದಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಜಯ ಸಾಧಿಸುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Karnataka Elections : ಯಾದಗಿರಿಯಲ್ಲಿ ಕಾಂಗ್ರೆಸ್‌- ಬಿಜೆಪಿ ಸಂಘರ್ಷ; ಕಾರ್ಯಕರ್ತರ ನಡುವೆ ಕಲ್ಲು ತೂರಾಟ, ವಾಹನಗಳು ಜಖಂ

ಮುಖಂಡ ಉದಯ್ ಸುರಿಗೆನಹಳ್ಳಿ ಮಾತನಾಡಿ, “ಕುಮಾರಸ್ವಾಮಿ ಅವರದ್ದು ರೈತರ ಪರವಾದ ಆಡಳಿತ ನೀಡುವಂಥ ಪಕ್ಷವಾಗಿದ್ದು, ಈ ಬಾರಿ ಖಂಡಿತವಾಗಿಯೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿವಾಜಿ ರಾವ್, ಎನ್.ಕೆ.ನಾಗೇಶ್ ಪ್ರಸಾದ್, ಗಂಗಣ್ಣ, ಮಧು, ವೇಣು ಗೋಪಾಲ್, ಸೇರಿದಂತೆ ಇನ್ನಿತರರು ಹಾಜರಿದ್ದರು.

Exit mobile version