ತುಮಕೂರು: ಸರ್ಕಾರದ ನಿರ್ಲಕ್ಷ್ಯದಿಂದ, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಏಪ್ರಿಲ್ 21 ರಂದು ಕಳ್ಳತನದ ಆರೋಪದ ಮೇಲೆ ಮಂಚಲದೊರೆಯ 36 ವರ್ಷದ ಗಿರೀಶ್ ಮತ್ತು ಪೆದ್ದನಹಳ್ಳಿಯ 29 ವರ್ಷದ ಗಿರೀಶ್ ಹತ್ಯೆಯಾಗಿತ್ತು. ಇದು ದಲಿತರ ಹತ್ಯೆ ಎಂದೇ ಬಿಂಬಿಸಲ್ಪಟ್ಟಿತ್ತು. ಈ ತನಿಖೆ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ.
ಸರ್ಕಾರದ ನಿರ್ಲಕ್ಷ್ಯದಿಂದ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೆದ್ದನಹಳ್ಳಿ ಗಿರೀಶ್ ಹತ್ಯೆ ಪ್ರಕರಣ ಇದಕ್ಕೆ ಸಾಕ್ಷಿ. ಜಿಲ್ಲೆಯ ಮೂವರು ಸಚಿವರಲ್ಲಿ ಯಾರೊಬ್ಬರೂ ಅವರ ಮನೆಗೆ ಭೇಟಿ ಕೊಟ್ಟಿಲ್ಲ. ಕಾಂಗ್ರೆಸ್‌ನವರು ಕಾಂಗ್ರೆಸ್‌ನವರು ಮಾತ್ರ ಹತ್ಯೆಯಾದ ಗಿರೀಶ್ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಾರೆ. ದಲಿತರ ಹತ್ಯೆಯನ್ನು ಮುಚ್ಚಿಹಾಕಲು ಕೆಳ ಹಂತದ ಅಧಿಕಾರಿಗಳು ಕುತಂತ್ರ ನಡೆಸುತ್ತಿದ್ದಾರೆ.
ಪುರಾವೆಗಳು ಸಾಕಷ್ಟು ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತಿದ್ದಾರೆ. ಸರ್ಕಾರ ಈಗ ಮಾಡುತ್ತಿರುವ ತನಿಖೆ ಮೇಲೆ ನಂಬಿಕೆ ಇಲ್ಲ. ಈ ಪ್ರಕರಣದ ಸ್ವತಂತ್ರ ತನಿಖೆ ಆಗಬೇಕು. ರಾಜಕಾರಣಿಗಳ ಸಹಚರರು ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ವತಂತ್ರ ನ್ಯಾಯಾಂಗ ತನಿಖೆ ಆಗಬೇಕು ಎಂದು ರಂಗನಾಥ್ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ | ರಾಯ್‌ಬರೇಲಿಯಲ್ಲಿ ದಲಿತ ಹುಡುಗನ ಮೇಲೆ ದೌರ್ಜನ್ಯ!