ತುಮಕೂರು: ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್ ಅವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿಯ ಸುಮಾರು 927 ಎಕರೆ ಪ್ರದೇಶದ ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರಕ್ಕೆ (Hallikar Cattle Breeding Station) ಶುಕ್ರವಾರ ಭೇಟಿ ನೀಡಿದ್ದರು.
ಹಳ್ಳಿಕಾರ್ ತಳಿಯು ನಶಿಸಿ ಹೋಗುತ್ತಿರುವ ಹಾಗೂ ದೇಶದ ಉತ್ತಮ ಉಳುಮೆ ಯೋಗ್ಯ ತಳಿಯಾಗಿದೆ. ಹೀಗಾಗಿ ಈ ಕೇಂದ್ರದ ಮೂಲಭೂತ ಸೌಕರ್ಯ, ಹಳ್ಳಿಕಾರ್ ತಳಿಗಳಿಗೆ ನೀಡುತ್ತಿರುವ ಮೇವು, ಆಹಾರ ಪದ್ಧತಿ, ಸಾಕಾಣಿಕೆ, ರೈತರಿಗೆ ಉಪಯೋಗ ಸೇರಿದಂತೆ ಅನೇಕ ವಿಷಯಗಳ ಕುರಿತು ಎನ್. ರವಿಕುಮಾರ್ ಮಾಹಿತಿ ಪಡೆದರು.
ಇದನ್ನೂ ಓದಿ | BY Vijayendra: ಜಾಹೀರಾತು ಕೊಟ್ಟ ತಕ್ಷಣ ಗ್ಯಾರಂಟಿಗಳು ಜನರಿಗೆ ತಲುಪಿದೆ ಅಂತಲ್ಲ: ಬಿ.ವೈ. ವಿಜಯೇಂದ್ರ
ಹಳ್ಳಿಕಾರ್ ತಳಿಯ ಬಗ್ಗೆ ಪರಿಷತ್ ಕಲಾಪದಲ್ಲಿ ಬಗ್ಗೆ ಚರ್ಚಿಸಿ ಹೆಚ್ಚಿಗೆ ಸಹಾಯಧನ, ಕಾಯಂ ಸಿಬ್ಬಂದಿ, ಹಳ್ಳಿಕಾರ್ ತಳಿಯ ಹೈನೋತ್ಪಾದನಾ ಆಹಾರದ ಬಗ್ಗೆ ಜಾಗೃತಿ, ರೈತರಿಗೆ ಯೋಜನೆಗಳ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆಂದು ಭರವಸೆ ನೀಡಿದರು.