Site icon Vistara News

Murder Case : ಮತ್ತೊಬ್ಬಳನ್ನು ಮೋಹಿಸಿದ; ಸರ್ಕಾರಿ ನೌಕರಿ ಆಸೆಗೆ ಬಿದ್ದು ಪತ್ನಿಯನ್ನೇ ಕೊಂದ!

Manjunath and vanishree

ತುಮಕೂರು: ಮಹಿಳೆಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ್ದ ಪತಿಯೊಬ್ಬ ಸರ್ಕಾರಿ ನೌಕರಿ ಆಸೆಗೆ ಬಿದ್ದು ಪತ್ನಿಯನ್ನೇ ಹತ್ಯೆ (Murder Case) ಮಾಡಿದ್ದಾನೆ. ತುಮಕೂರಿನ (Tumkur News) ಮಲ್ಲಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಣಿಶ್ರೀ (32) ಮೃತ ದುರ್ದೈವಿ. ಮಂಜುನಾಥ್‌ ಆರೋಪಿಯಾಗಿದ್ದಾನೆ.

ವಾಣಿಶ್ರೀ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದರು. ಹೆಬ್ಬತ್ತನಹಳ್ಳಿ ಮೂಲದ ಮಂಜುನಾಥ್‌ ವಾಣಿಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದ. ಹೆತ್ತವರ ವಿರೋಧದ ನಡುವೆಯೂ ಮಂಜುನಾಥ್‌ನನ್ನು ವಾಣಿಶ್ರೀ ಮದುವೆ ಆಗಿದ್ದರು.

ಆದರೆ ಈ ಪಾಪಿ ಮಂಜುನಾಥ್‌ ಮದುವೆಗೂ ಮೊದಲೇ ಬೇರೊಬ್ಬ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರವನ್ನು ಮುಚ್ಚಿಟ್ಟು ವಾಣಿಶ್ರೀಯನ್ನು ಪುಸಲಾಯಿಸಿ ಪ್ರೀತಿ-ಪ್ರೇಮದ ಆಟವಾಡಿದ್ದ. ಕಡೆಗೆ ಮದುವೆ ಕೂಡ ಮಾಡಿಕೊಂಡಿದ್ದ. ಮದುವೆ ನಂತರವೂ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದ.

ಪತಿಯ ಅಕ್ರಮ ಸಂಬಂಧದ ಕಣ್ಣಾಮುಚ್ಚಾಲೆ ಹೆಚ್ಚು ಸಮಯ ನಡೆಯಲಿಲ್ಲ. ಪತಿಯ ಮೋಸದಾಟ ವಾಣಿಶ್ರೀಗೆ ತಿಳಿದು ಹೋಗಿತ್ತು. ಇದೇ ಕಾರಣಕ್ಕೆ ಗಂಡ-ಹೆಂಡತಿಯ ನಡುವೆ ಆಗಾಗ ಗಲಾಟೆಯು ಆಗುತ್ತಿತ್ತು ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ.

ಅಕ್ರಮ ಸಂಬಂಧದ ಬಗ್ಗೆ ಎಲ್ಲಿ ಸುದ್ದಿಯಾಗುತ್ತೋ ಎದ್ದು, ಪತ್ನಿಯನ್ನು ಸಾಯಿಸಿದರೆ ತನ್ನ ಹಾದಿ ಸುಗಮವಾಗುತ್ತದೆ ಎಂದುಕೊಂಡಿದ್ದ. ಜತೆಗೆ ಪತ್ನಿಯ ಸರ್ಕಾರಿ ಕೆಲಸ ತನಗೆ ಸಿಗಬಹುದು. ಒಂದು ವೇಳೆ ಸಿಗದೇ ಇದ್ದರೂ, ಅವಳ ಸೆಟ್ಲ್‌ಮೆಂಟ್ ಹಣದಲ್ಲಿ ಆರಾಮಾಗಿ ಇರಬಹುದು ಎಂದುಕೊಂಡಿದ್ದ. ಹೀಗಾಗಿ ಮಗಳನ್ನು ಕೊಂದು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಸದ್ಯ ಪತಿ ಮಂಜುನಾಥ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ಮಂಜುನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Drought in Karnataka : ಬರಪೀಡಿತ ರಾಜ್ಯದತ್ತ ಕರ್ನಾಟಕ; ಬರ್ಬರ ಬರಕ್ಕೆ ತುತ್ತಾದ 216 ತಾಲೂಕು!

ನಡುರಸ್ತೆಯಲ್ಲೇ ಚಿಮ್ಮಿತು ಗ್ರಾ.ಪಂ ಅಧ್ಯಕ್ಷನ ರಕ್ತ; ಹಳೆ ವೈಷಮ್ಯಕ್ಕೆ ಭೀಕರ ಹತ್ಯೆ

ಕಲಬುರಗಿ: ಜನರು ಓಡಾಡುವ ಹೊತ್ತಿನಲ್ಲೆ ಗ್ರಾಮ ಪಂಚಾಯತ್‌ ಅಧ್ಯಕ್ಷನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾರೆ. ಮದರಾ(ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಕೊಲೆಯಾದವರು.

ಅಫಜಲಪುರ ತಾಲೂಕಿನ ಚೌಡಾಪುರ ಬಸ್ ನಿಲ್ದಾಣದ ಬಳಿ ಗೌಡಪ್ಪಗೌಡ ಪಾಟೀಲ್‌ ನಿಂತಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಇವರಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾರೆ. ಆದರೂ ಬಿಡದೇ ಬೆನ್ನಹತ್ತಿ ಕೊಚ್ಚಿ ಕೊಲೆಗೈದಿದ್ದಾರೆ.

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ಹತ್ಯೆ ಮಾಡಿದ ಹಂತಕರ ಹುಡುಕಾಟ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿರುವ ಸಿಸಿ ಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ. ನಡುರಸ್ತೆಯಲ್ಲೇ ಮಚ್ಚು-ಲಾಂಗು ಝಳಪಿಸಿರುವುದನ್ನು ಕಂಡು ಚೌಡಾಪುರ ಜನರು ಆತಂಕಗೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version