Site icon Vistara News

Murder Case : ಅವಳು ಬೆಂಗಳೂರು, ಇವನು ದಾವಣಗೆರೆ; ಕುಣಿಗಲ್ ಲಾಡ್ಜ್‌ನಲ್ಲಿ ನಡೀತು ಮಹಿಳೆ ಮರ್ಡರ್‌!

Murder at Kunigal Lodge

ತುಮಕೂರು: ಅವಳು ಬೆಂಗಳೂರು ಮೂಲದವಳು, ಇವನು ದಾವಣಗೆರೆಯವನು. ಅವರಿಬ್ಬರು ಜತೆಯಾಗಿದ್ದು ಕುಣಿಗಲ್‌ನ ದಿವ್ಯಾ ಲಾಡ್ಜ್‌ನಲ್ಲಿ. ಅಲ್ಲೇನಾಯಿತೋ ಗೊತ್ತಿಲ್ಲ. ಈಗ ಅವನು ಅವಳನ್ನು ಲಾಡ್ಜ್‌ನಲ್ಲಿ ಕೊಲೆ ಮಾಡಿ (Murder case) ಬಂದು ಕುಣಿಗಲ್‌ ಪೊಲೀಸ್‌ ಸ್ಟೇಷನ್‌ಗೆ (Kunigal Police Station) ಬಂದು ಕುಳಿತಿದ್ದಾನೆ.

ಇದು ಶನಿವಾರ ಬೆಳಗ್ಗೆ ಕುಣಿಗಲ್‌ನಲ್ಲಿ ನಡೆದ ಒಂದು ಕೊಲೆಯ (Woman murdered in Kunigal Lodge) ಕಥೆ. ಕುಣಿಗಲ್‌ ದಿವ್ಯಾ ಲಾಡ್ಜ್‌ನಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆತ ನೇರವಾಗಿ ಪೊಲೀಸ್‌ ಠಾಣೆಗೆ (Murder accused surrondered at police station) ಬಂದು ಶರಣಾಗಿದ್ದಾನೆ. ಪೊಲೀಸರು ಬಳಿಕ ಶ್ವಾನದಳದೊಂದಿಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ, ತನಿಖೆ ಶುರು ಮಾಡಿದ್ದಾನೆ.

ಅಂದ ಹಾಗೆ ಆಗಿದ್ದೇನೆಂದರೆ…

ಕೊಲೆಯಾದ ಮಹಿಳೆಯ ಹೆಸರು ಲಕ್ಷ್ಮಮ್ಮ, ಕೊಂದವನು ಮಂಜುನಾಥ. ಬೆಂಗಳೂರಿನ ತಾವರೆಕೆರೆ ಮೂಲದ ಲಕ್ಷ್ಮಮ್ಮ ಕುಣಿಗಲ್‌ಗೆ ಬಂದಿದ್ದರೆ, ದಾವಣಗೆರೆ ಮೂಲದ ಮಂಜುನಾಥ್ ಕೂಡಾ ಅಲ್ಲಿ ತಲುಪಿದ್ದ. ಶುಕ್ರವಾರ ಸಂಜೆ ಅಲ್ಲಿ ತಲುಪಿದ್ದ ಅವರಿಬ್ಬರು ರಾತ್ರಿ ಕುಣಿಗಲ್ ಪಟ್ಟಣದ ದಿವ್ಯಾ ಲಾಡ್ಜ್ ನಲ್ಲಿ ರೂಂ ಮಾಡಿದ್ದರು. ನೋಡುವುದಕ್ಕೆ ಗಂಡ-ಹೆಂಡತಿ ಥರ ಇದ್ದಾರೆ ಎಂಬ ಕಾರಣದಿಂದ ಲಾಡ್ಜ್‌ನವರು ಯಾವುದೇ ತಕರಾರು ತೆಗೆಯದೆ ರೂಂ ಕೊಟ್ಟಿದ್ದಾರೆ.

ಅವರು ಅಲ್ಲಿಗೆ ಯಾಕೆ ಬಂದಿದ್ದರು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ರಾತ್ರಿ ಇಡೀ ಅದೇ ಲಾಡ್ಜ್‌ನಲ್ಲಿದ್ದರು. ಶನಿವಾರ ಬೆಳಗ್ಗೆ ಅವರಿಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ಶುರುವಾಗಿದೆ. ಲಕ್ಷ್ಮಮ್ಮನ ಜತೆ ಜಗಳಕ್ಕೆ ಇಳಿದಿದ್ದ ಮಂಜುನಾಥ ಸಿಟ್ಟಿಗೆದ್ದು ಹಲ್ಲೆ ಮಾಡಿದ್ದ. ಬಳಿಕ ಮಹಿಳೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ.

ಕುಣಿಗಲ್‌ನ ದಿವ್ಯಾ ಲಾಡ್ಜ್‌ಗೆ ಶ್ವಾನದಳ ಆಗಮನ

ಬಳಿಕ ಕುಣಿಗಲ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ ಮಂಜುನಾಥ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಹಿಳೆಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಕೋರ್ಟ್‌ಗೆ ಕರೆದೊಯ್ಯುವಾಗ ಎಸ್ಕೇಪ್‌ ಆಗಿದ್ದ ಕೈದಿ ಪೊಲೀಸ್‌ ಬಲೆಗೆ

ಚಾಮರಾಜನಗರ: ಶುಕ್ರವಾರ ಚಾಮರಾಜನಗರ ಉಪಕಾರಾಗೃಹದಿಂದ ತಮಿಳುನಾಡು ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಎಸ್ಕೇಪ್ ಆಗಿದ್ದ ಕೈದಿ ಚಾಮರಾಜನಗರ ತಾಲೂಕು ಮೇಗಲಹುಂಡಿಯ ಸುರೇಶನನ್ನು (28) ಪತ್ತೆ ಹಚ್ಚಿ ಬಂಧಿಸಲಾಗಿದೆ.

ತಮಿಳುನಾಡಿನ ಹಾಸನೂರು ಬಳಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ ಸುರೇಶನಿಗಾಗಿ ಎಲ್ಲ ಕಡೆ ಹುಡುಕಾಟ ನಡೆದಿತ್ತು. ಕೊನೆಗೆ ಅವನನ್ನು ಚಾಮರಾಜನಗರದಲ್ಲಿ ರೈಲಿನಿಂದ ಇಳಿಸಿ ಮರುಬಂಧಿಸಲಾಗಿದೆ.

ಕಳ್ಳತನ ಪ್ರಕರಣಗಳಲ್ಲಿ ಬಂಧಿತನಾಗಿ ಚಾಮರಾಜನಗರ ಜೈಲಿನಲ್ಲಿದ್ದ ಸುರೇಶ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದು, ಆತ ನಂಜನಗೂಡಿಗೆ ಹೋಗುವ ರೈಲು ಹತ್ತಿರಬಹುದು ಎಂಬ ಸಂಶಯವಿತ್ತು. ಯಾಕೆಂದರೆ ಅವನು ತನ್ನ ಊರಾದ ನಂಜನಗೂಡಿಗೇ ಹೋಗಿರಬಹುದು ಎನ್ನುವುದು ಊಹೆಯಾಗಿತ್ತು.

ಕಳೆದ ರಾತ್ರಿ ರೈಲು ಹತ್ತಿ ನಂಜನಗೂಡಿಗೆ ತೆರಳಿದ್ದ ಸುರೇಶನಿಗಾಗಿ ಚಾಮರಾಜ ಪೇಟೆಯಲ್ಲಿ ಬೋನು ಇಡಲಾಗಿತ್ತು. ಶನಿವಾರ ಬೆಳಗ್ಗೆ ರೈಲಿನಲ್ಲಿ ಚಾಮರಾಜನಗರಕ್ಕೆ ಬರುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದ ಸುರೇಶನನ್ನು ಅರೆಸ್ಟ್‌ ಮಾಡಲಾಯಿತು.

ರೈಲಿನಲ್ಲಿ ಸುರೇಶ ಇರುವುದನ್ನು ಖಚಿತಪಡಿಸಿಕೊಂಡು ಮಾರ್ಗಮಧ್ಯೆ ರೈಲು ನಿಲ್ಲಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕವಲಂದೆ ಪೊಲೀಸರ ನೆರವಿನಿಂದ ಕೈದಿಯನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: Rowdy Murder: ರೌಡಿ ಮಹೇಶ್ ಹತ್ಯೆ; ಸಿದ್ದಾಪುರ ಕಿಂಗ್‌ ಪಟ್ಟಕ್ಕಾಗಿ ನಡೆಯಿತು ಕೊಲೆ! ಮತ್ತೆ ಶುರುವಾಯ್ತಾ ಗ್ಯಾಂಗ್‌ವಾರ್‌ ಯುಗ?

Exit mobile version