ತುಮಕೂರು: ತುಮಕೂರಿನ (Tumkur News) ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಾಲ್ಕೈದು ಮಂದಿ ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder Case) ಮಾಡಿದ್ದಾರೆ. ಮಾರುತಿ ಅಲಿಯಾಸ್ ಪೋಲಾರ್ಡ್ (34) ಕೊಲೆಯಾದ ರೌಡಿಶೀಟರ್ ಆಗಿದ್ದಾನೆ.
ತುಮಕೂರಿನ ಮಧುಗಿರಿ ಮೂಲದ ಮಾರುತಿ ಮಂಚಕಲ್ ಕುಪ್ಪೆ ಬಳಿ ತನ್ನ ಪತ್ನಿ ಜತೆ ವಾಸವಾಗಿದ್ದ. ತಡರಾತ್ರಿ ಬಂಡಿಮನೆ ಕಲ್ಯಾಣ ಮಂಟಪದ ಸಮೀಪ ತನ್ನ ಸ್ನೇಹಿತರ ಜತೆಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಈ ವೇಳೆ ನಾಲ್ಕೈದು ಜನರ ತಂಡ ದಾಳಿ ಮಾಡಿದೆ. ಕುಡಿದ ಮತ್ತಿನಲ್ಲಿ ಇದ್ದರಿಂದ ತಪ್ಪಿಸಿಕೊಳ್ಳಲು ಆಗದ ಮಾರುತಿಗೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.
ಮಾರುತಿ ಕಳೆದ ಏಳೆಂಟು ವರ್ಷಗಳ ಹಿಂದೆ ನಡೆದಿದ್ದ ಹಟ್ಟಿ ಮಂಜ ಕೊಲೆ ಕೇಸ್ ಸೇರಿದಂತೆ ಹಲವು ಕೇಸ್‌ನಲ್ಲಿ ಭಾಗಿಯಾಗಿದ್ದ. ಇದೇ ದ್ವೇಷಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಧುಗಿರಿಯ ಕೊಡಿಗೆನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಸ್ಥಳಕ್ಕೆ ತುಮಕೂರಿನ ತಿಲಕಪಾರ್ಕ್ ಪೊಲೀಸರು, ಎಸ್‌ಪಿ ಅಶೋಕ್, ಎಎಸ್‌ಪಿ ಮರಿಯಪ್ಪ, ಡಿವೈಎಸ್‌ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ತಿಲಕಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೈದ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Road Accident : ತುಮಕೂರಲ್ಲಿ ಅಪಘಾತಕ್ಕೆ ವಿಕಲಚೇತನ ಬಲಿ; ಶಿರಸಿಯಲ್ಲಿ ಖಾಸಗಿ-ಸಾರಿಗೆ ಬಸ್ ಡಿಕ್ಕಿ
ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯ ಶವವು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದ್ದನಾಯಕನಹಳ್ಳಿ ರಸ್ತೆಯಲ್ಲಿ ಪತ್ತೆಯಾಗಿದೆ. ಪಲ್ಲವಿ (31) ಮೃತ ದುರ್ದೈವಿ.
ಪಲ್ಲವಿ ಶಿರಾ ತಾಲೂಕಿನ ಬಡಕನಹಳ್ಳಿ ಮೂಲದವಳು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ತುಮಕೂರು ಎಸ್‌ಪಿ ಆಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ