Site icon Vistara News

Narendra modi: ಪ್ರಧಾನಿ ಕಾರ್ಯಕ್ರಮ, ಹೇಗಿದೆ ವೇದಿಕೆ ಭದ್ರತೆ?

modi-in-karnataka-one of your son sitting in delhi PM modi assures banjara community

ತುಮಕೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರು ತುಮಕೂರಿನ ಗುಬ್ಬಿಯಲ್ಲಿ ಎಚ್‌ಎಎಲ್‌ ಘಟಕವನ್ನು ಉದ್ಘಾಟಿಸಲಿದ್ದು, ಇದಕ್ಕಾಗಿ ಭಾರಿ ಭದ್ರತೆಯಲ್ಲಿ ವೇದಿಕೆ ಸಿದ್ಧವಾಗಿದೆ.

ಎಚ್.ಎ.ಎಲ್ ಘಟಕದ ಆವರಣದಲ್ಲಿ ವೇದಿಕೆ ಸಿದ್ಧವಾಗಿದ್ದು, ಮೋದಿಯವರು ಕುಳಿತುಕೊಳ್ಳುವ ವೇದಿಕೆ 10 ಅಡಿ ಎತ್ತರದಲ್ಲಿದೆ. ಎತ್ತರದ ವೇದಿಕೆಯಲ್ಲಿ ಮೋದಿ‌ ಹಾಗೂ ಗಣ್ಯರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಭದ್ರತಾ ದೃಷ್ಟಿಯಿಂದ 80 ಅಡಿ ದೂರದಷ್ಟು ಡಿ ಜೋನ್ ನಿರ್ಮಾಣ ಮಾಡಲಾಗಿದೆ. ಡಿ.ಜೋನ್ ನಂತರ ಮಾಧ್ಯಮ ಹಾಗೂ ವಿವಿಐಪಿ ಆಸನದ ವ್ಯವಸ್ಥೆಯಿದ್ದು, 1500 ಜನ ವಿವಿಐಪಿ, ವಿಐಪಿ ಕುಳಿತುಕೊಳ್ಳಲು ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ.

ವಿಐಪಿ ಆಸನದ ವ್ಯವಸ್ಥೆ ನಂತರ ಜನಸಾಮಾನ್ಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯ ವೇದಿಕೆಯ ಎಡ- ಬಲ ಭಾಗದಲ್ಲೂ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ 2 ಸಾವಿರ ಜನರಿಗೆ ನೋಡಲು ಅನುಕೂಲವಾಗುವಂತೆ 60 ಎಲ್.ಇ.ಡಿ ವಾಲ್‌ಗಳನ್ನು ಅಳವಡಿಸಲಾಗಿದೆ. ಎಲ್ಲರಿಗೂ ಮೋದಿ ಭಾಷಣ ನೋಡಲು, ಕೇಳಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಇಡೀ ಕಾರ್ಯಕ್ರಮದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: Narendra Modi: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ

Exit mobile version