ತುಮಕೂರು: ಬೈಕ್ ಸವಾರನಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮೃತ ದುರ್ದೈವಿಯನ್ನು ಕುಮಾರ(23) ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕು ಕ್ಯಾತಸಂದ್ರ ಬಳಿಯ ಜಾಸ್ ಟೋಲ್ ಬಳಿ ಘಟನೆ ನಡೆದಿದೆ. ತುಮಕೂರು ತಾಲೂಕಿನ ಪಂಡಿತನಹಳ್ಳಿ ಗ್ರಾಮದವರಾದ ಕುಮಾರ ದ್ವಿಚಕ್ರ ವಾಹನದಲ್ಲಿ ತುಮಕೂರಿನಿಂದ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು, ಅವರ ತಲೆ ಮೇಲೆಯೇ ಚಕ್ರಗಳು ಹಾದುಹೋಗಿವೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Road accident: ರಸ್ತೆ ದಾಟುತ್ತಿದ್ದ ಪಾದಚಾರಿ ಹಿಟ್ ಅಂಡ್ ರನ್‌ಗೆ ಬಲಿ