ತುಮಕೂರು: ತಂದೆಯ ಸಾವಿನಿಂದ ನೊಂದಿದ್ದ ಮಗಳು (woman Ends life) ನೇಣು ಬಿಗಿದುಕೊಂಡು ಆತ್ಮಹತ್ಯೆ. (self Harming) ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಬಳಿಯ ಪಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶೀಲಾ ಎಂಬವರೇ ಮೃತಪಟ್ಟವರು. ಇವರ ತಂದೆ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಜಕ್ಕೂ ಇದು ತಂದೆಯ ಸಾವಿನ ಬೇಸರದಿಂದ ಮಾಡಿಕೊಂಡಿರುವ ಆತ್ಮಹತ್ಯೆಯೇ ಅಥವಾ ಬೇರೆ ಕಾರಣಗಳಿವೆಯೇ ಎನ್ನುವುದು ತಿಳಿದುಬರಬೇಕಾಗಿದೆ.
ಇದನ್ನೂ ಓದಿ: KILLER BMTC : ಬಿಎಂಟಿಸಿ ಬಸ್ ಹರಿದು ದುರಂತ; ಅಪ್ಪನೊಂದಿಗೆ ಶಾಲೆಗೆ ಹೋಗುತ್ತಿದ್ದ ಪುಟ್ಟ ಮಗು ಸಾವು
ಗೊಲ್ಲರದೊಡ್ಡಿ ಅಪಘಾತ ಪ್ರಕರಣ: ಮೂರನೇ ಮಗು ಮೃತ್ಯು
ರಾಮನಗರ: ಆಗಸ್ಟ್ 10ರಂದು ಬುಧವಾರ ರಾತ್ರಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ (Gollaradoddi Accident) ಟಾಟಾ ಏಸ್ ಒಂದು ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ ಮಕ್ಕಳ ಮೇಲೆ ನುಗ್ಗಿ ಸಂಭವಿಸಿದ ಅಪಘಾತದಲ್ಲಿ ಮೂರನೇ ಸಾವು ಸಂಭವಿಸಿದೆ. ಅಂದು ರೋಹಿತ್(5), ಶಾಲಿನಿ(8) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದರೆ, ಒಂದು ವಾರದ ಬಳಿಕ ಗುರುವಾರ ಬೆಳಗ್ಗೆ ಗ್ರಾಮದ ಅನಿಲ್ ಮತ್ತು ವನಿತಾ ದಂಪತಿಯ ಪುತ್ರ ಸುಜಿತ್ ಮೃತಪಟ್ಟಿದ್ದಾನೆ.
ಆಗಸ್ಟ್ 10ರಂದು ಒಂದೇ ವಠಾರದ ಐದು ಮಂದಿ ಮಕ್ಕಳು ಟ್ಯೂಷನ್ ಮುಗಿಸಿ ಮನೆಗೆ ಮರಳುತಿದ್ದಾಗ ವಾಹನವೊಂದು ಅವರ ಮೇಲೆ ಹರಿದು ಹೋಗಿತ್ತು. ಅವರಿಗೆ ಡಿಕ್ಕಿಯಾದ ವಾಹನ ಯಾವುದು ಎನ್ನುವುದನ್ನು ಪೊಲೀಸರು ಹುಡುಕಾಡಿದಾಗ ವಾಯುಪುತ್ರ ಎಂಬ ಹೆಸರಿನ ಟಾಟಾ ಏಸ್ ವಾಹನ ಚಾಲಕ ವರದರಾಜು ಮರುದಿನ ಬೆಳಗ್ಗೆ ಬಂದು ಠಾಣೆಗೆ ಹಾಜರಾಗಿದ್ದ.
ರಾಮನಗರ ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೂ ಮೂವರು ಮಕ್ಕಳು ಗಾಯಗೊಂಡಿದ್ದರು. ಅವರಲ್ಲಿ ಗುರುವಾರ ಮೃತಪಟ್ಟ ಸುಜಿತ್ ಕೂಡಾ ಒಬ್ಬ. ಅಂದು ನಡೆದ ಘಟನೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿದ್ದ ಸುಜಿತ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಅವನಿಗೆ ಮೊದಲು ರಾಮನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಬಿಜಿಎಸ್ ಆಸ್ಪತ್ರೆಯಲ್ಲಿ ಸುಜಿತ್ ತಲೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಿತ್ ಗುರುವಾರ ಬೆಳಗ್ಗೆ ಉಸಿರು ನಿಲ್ಲಿಸಿದ್ದಾನೆ. ಅಪಘಾತದಲ್ಲಿ ಸುಜಿತ್ ತಂಗಿ, ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಗೌತಮಿ ಕೂಡಾ ಗಾಯಗೊಂಡಿದ್ದಾಳೆ. ಆಕೆಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.