ಶಿರಾ: ಆಗಸ್ಟ್ 11ರಿಂದ 13ರವರೆಗೆ ಮೂರು ದಿನಗಳ ಕಾಲ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಅಜ್ಜೇರುಗೊಲ್ಲರ ಬೆಡಗಿನ ಶ್ರೀ ಕ್ಯಾತ ಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಯಾತ ಲಿಂಗೇಶ್ವರ ಸೇವಾ ಅಭಿವೃದ್ಧಿ ಸಮಿತಿಯವರು (Shira News) ತಿಳಿಸಿದ್ದಾರೆ.
ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕ್ಯಾತ ದೇವರಹಟ್ಟಿ ಗ್ರಾಮದ ಶ್ರೀ ಕ್ಯಾತ ಲಿಂಗೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕ್ಯಾತ ಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯದ ಜೀರ್ಣೋದ್ಧಾರ ಸಮಾರಂಭದಲ್ಲಿ ಕಾಡುಗೊಲ್ಲರ ಸಾಂಪ್ರಾದಾಯದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಇದನ್ನೂ ಓದಿ: Maldives: ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಗೆ ಭಾರತ ತಂಡವನ್ನು ಆಹ್ವಾನಿಸಿದ ಮಾಲ್ಡೀವ್ಸ್
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಪೂಜಾರಪ್ಪಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದು ಕಮಿಟಿಯವರು ತಿಳಿಸಿದ್ದಾರೆ.
ಇದನ್ನೂ ಓದಿ: Koratagere News: ವೀರಶೈವ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಸಮಿತಿಯ ಜಯರಾಮಯ್ಯ, ಪೂಜಾರಿ ದೊಡ್ಡಯ್ಯ, ಮಹಾಲಿಂಗಪ್ಪ, ಶಿವಣ್ಣ, ಸತೀಶ್ ಬಾಬು, ದಾಸಪ್ಪ, ಚಿತ್ತಯ್ಯ, ಶಿವಲಿಂಗಪ್ಪ, ಕೃಷ್ಣಮೂರ್ತಿ, ಅಪಾರಿ ದೊಡ್ಡಪ್ಪ, ಹೇಮಣ್ಣ, ಮಸ್ಕಲ್ ಲಕ್ಷ್ಮೀಕಾಂತ್, ಪತ್ರಕರ್ತ ಚಿದಾನಂದ್ ಮಸ್ಕಲ್, ಬಡಗಿ ಈರಣ್ಣ, ಕದುರಯ್ಯ, ರಾಮಣ್ಣ, ಶಿವಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.