ತುಮಕೂರು: ಟೈಲ್ಸ್ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder case) ಮಾಡಿದ ಭಯಾನಕ ಘಟನೆ ತುಮಕೂರಿನ ಯಲ್ಲಾಪುರದಲ್ಲಿ ನಡೆದಿದೆ.
ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಟೈಲ್ಸ್ ಅಂಗಡಿ ವ್ಯಾಪಾರಿ (Tiles merchant) ಜಾಕೀರ್ (38) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಆರೋಪಿಗಳು ಕೊಲೆ ಮಾಡಿ ತಾವು ಬಂದಿದ್ದ ಬೈಕ್‌ನಲ್ಲೇ ಪರಾರಿಯಾಗಿದ್ದಾರೆ.
ಜಾಕಿರ್ ಅವರು ಅಂಗಡಿಯಲ್ಲಿದ್ದಾಗಲೇ ಹಂತಕರು ಒಳಗೆ ನುಗ್ಗಿ ಕೊಲೆ ಮಾಡಿದ್ದಾರೆ. ಜಾಕಿರ್ ಅವರು ಮೂಲತಃ ಚಿಕ್ಕಮಗಳೂರಿನ ಕಡೂರು ಮೂಲದವರು. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೀರು ತರಲೆಂದು ನದಿಗೆ ತೆರಳಿದ್ದ ಬಾಲಕನ ಹೊತ್ತೊಯ್ದ ಮೊಸಳೆ
ರಾಯಚೂರು: ರಾಜ್ಯದ ಹಲವು ಭಾಗಗಳಲ್ಲಿ ಮೊಸಳೆಗಳ ಹಾವಳಿ (Crocodile attack), ಆತಂಕ ದಿನೇದಿನೆ ಜೋರಾಗುತ್ತಿದೆ. ರಾಯಚೂರಿನಲ್ಲಿ (Raichur News) ಬಾಲಕನೊಬ್ಬ (Crocodile kills boy) ಮೊಸಳೆಗೆ ಬಲಿಯಾಗಿರುವ ವಿದ್ಯಮಾನ ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ರಾಯಚೂರಿನ ಕುರವಕಲಾ ಗ್ರಾಮದಲ್ಲಿ ನೀರಿಗಾಗಿ ನದಿಗೆ ತೆರಳಿದ್ದ ಬಾಲಕನೊಬ್ಬನನ್ನು ಮೊಸಳೆ ಹೊತ್ತೊಯ್ದಿದೆ. ನವೀನ್(9) ಎಂಬ ಬಾಲಕನೇ ಮೊಸಳೆಯ ಕೈಯಲ್ಲಿ ಸಿಕ್ಕಿ ಹಾಕಿಕೊಂಡವನು.
ಬಾಲಕನ ನವೀನ್‌ನ ಕುಟುಂಬದವರ ಜಮೀನು ಕೃಷ್ಣಾ ನದಿಯ ಪಕ್ಕದಲ್ಲಿದೆ. ಕುಟುಂಬದ ಸದಸ್ಯರು ಈ ಜಮೀನಿನಲ್ಲಿ ಕೆಲಸ ಮಾಡಲೆಂದು ಹೋಗಿದ್ದರು. ಅವರ ಜತೆ ನವೀನ್ ಕೂಡಾ ತೆರಳಿದ್ದ. ಈ ನಡುವೆ, ಬಾಯಾರಿಕೆ ಆಯಿತೆಂದು ನವೀನ್‌ನ ಪೋಷಕರು ನೀರು ಕುಡಿಯಲು ನದಿಯ ಬಳಿಗೆ ಹೋಗಿದ್ದರು.
ಈ ಸಂದರ್ಭದಲ್ಲಿ ನವೀನ್ ಕೂಡಾ ಕೃಷ್ಣಾ ನದಿಯ ದಡಕ್ಕೆ ತೆರಳಿದ್ದ. ತಾನೂ ನೀರು ಕುಡಿದಿದ್ದಲ್ಲದೆ, ಬಾಟಲ್‌ಗೆ ನೀರು ತುಂಬಿಸಲು ಮುಂದಾದ. ಈ ವೇಳೆ ಒಮ್ಮಿಂದೊಮ್ಮೆಗೇ ಮೊಸಳೆ ದಾಳಿ ಮಾಡಿದೆ.
ಇದೀಗ ಬಾಲಕನನ್ನು ಹೊತ್ತೊಯ್ದಿರುವ ಮೊಸಳೆ ಮತ್ತು ನವೀನ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಯಾಪಲದಿನ್ನಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಕಾರ್ಯಾಚರಣೆ ನಡೆಯುತ್ತಿದೆ. ಮಗನನ್ನು ಕಣ್ಣೆದುರೇ ಮೊಸಳೆ ಹೊತ್ತೊಯ್ದ ಘಟನೆಯನ್ನು ಕಣ್ಣಾರೆ ಕಂಡ ಕುಟುಂಬದ ಮಂದಿ ಕಂಗಾಲಾಗಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಕೃಷ್ಣಾ ನದಿ ತೀರದ ಕೊರ್ತಕುಂದ ಗ್ರಾಮದಲ್ಲಿ 9 ವರ್ಷದ ಬಾಲಕ ಪವನ್ ಮೇಲೆ ಮೊಸಳೆ ದಾಳಿ ಮಾಡಿತ್ತು. ಆದರೆ ಅವನು ಸ್ಥಳೀಯರ ಸಮಯಪ್ರಜ್ಞೆಯಿಂದ ಪಾರಾಗಿದ್ದ.
ಇದನ್ನೂ ಓದಿ: Murder Case: ಮೈಸೂರಲ್ಲಿ ರೌಡಿಶೀಟರ್ ಮರ್ಡರ್; ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ