ತುಮಕೂರು : ತುಮಕೂರು ಜಿಲ್ಲಾ BJPಯಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಹೆಚ್ಚುತ್ತಿದೆ. ಆರು ತಿಂಗಳಲ್ಲಿ ಈಗಾಗಲೇ ಇಬ್ಬರು ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡಿದ್ದು, ಮುಂದಿನ ವರ್ಷ ವಿಧಾನಸಭೆ ಚುನಾವಣೆಗಳು ಹತ್ತಿರುವಾಗುತ್ತಿರುವಂತೆ ಪಕ್ಷದ ಕಾರ್ಯಕರ್ತರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ | ತುಮಕೂರು ಕಾರ್ಯಕ್ರಮದಿಂದ ಬಿಜೆಪಿ ನಿರೀಕ್ಷಿಸಿರುವ 7 ಲಾಭಗಳು
ವೈಯಕ್ತಿಕ ಕಾರಣ ನೀಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಸುರೇಶ್ ಗೌಡ 6 ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ಬಳಿಕ ಜಿಲ್ಲಾಧ್ಯಕ್ಷರಾಗಿ ಲಕ್ಷ್ಮೀಶ್ ನೇಮಕವಾಗಿದ್ದರು. ನೇಮಕವಾದ ನಾಲ್ಕು ತಿಂಗಳಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನವಷ್ಟೇ ಅಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಹಿಡಿತ ಸಾಧಿಸುವ ಕೆಲವು ರಾಜಕೀಯ ಮುಖಂಡರಿಗೆ ಬೇಸತ್ತು ರಾಜಿನಾಮೆ ಕೊಡಲು ಮುಂದಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಕಳೆದ ಒಂದು ತಿಂಗಳಿಂದ ಪಕ್ಷದ ಯಾವುದೇ ಸಭೆ, ಸಮಾರಂಭಗಳಿಗೆ ಹಾಜರಾಗದೇ ಲಕ್ಷ್ಮೀಶ್ ಹಿಂದೆ ಸರಿದಿದ್ದರು. ಸದ್ಯ ತುಮಕೂರು ಜಿಲ್ಲಾ ಬಿಜೆಪಿ ನಾಯಕರಲ್ಲಿ ಬಿನ್ನಮತ ಹೆಚ್ಚಾಗಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಹುಡುಕಾಟ ಆರಂಭವಾಗಿದೆ.
ಇದನ್ನೂ ಓದಿ | ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರದ ಆದ್ಯತೆ: ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ