ತುಮಕೂರು: ಅವರಿಬ್ಬರು ಮೂರು ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಆದರೆ ಅದೇನಾಯಿತೋ ಏನೋ ಪತಿ-ಪತ್ನಿ ಇಬ್ಬರು ಒಂದೇ ವೇಲಿನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ (Tumkur News) ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.
ರೊಪ್ಪ ಗ್ರಾಮದಲ್ಲಿ ವಾಸವಿದ್ದ ಮನು (26) ಹಾಗೂ ಪವಿತ್ರ (24) ಮೃತ ದುರ್ದೈವಿಗಳು. ಮನು, ಪವಿತ್ರ ತಾವು ವಾಸವಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪವಿತ್ರಾಳ ವೇಲಿನಲ್ಲೇ ಬಿಗಿದುಕೊಂಡು ಪತಿ-ಪತ್ನಿ ಅಸುನೀಗಿದ್ದಾರೆ. ದಂಪತಿ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ಮೂರು ವರ್ಷದ ಹಿಂದೆ ಮನು ಹಾಗೂ ಪವಿತ್ರ ಮದುವೆಯಾಗಿದ್ದರು. ಎಂದಿನಂತೆ ಮನೆಯಿಂದ ಹೊರಬಾರದೆ ಇದ್ದಾಗ ಸ್ಥಳೀಯ ಅನುಮಾನಿಸಿ ನೋಡಿದಾಗ ವಿಷಯ ಗೊತ್ತಾಗಿದೆ. ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಬ್ಬರ ಮೃತದೇಹವನ್ನು ಕೆಳಗಿಸಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ