ಶಿರಾ: ಲೋಕಸಭಾ ಚುನಾವಣೆ-2024ರ (Lok Sabha Election-2024) ಅಂಗವಾಗಿ ಮತದಾರರಲ್ಲಿ (Voters) ಯಾವುದೇ ಭಯಬೇಡ ನಿಮ್ಮ ಜತೆ ನಾವಿದ್ದೇವೆ, ಮುಕ್ತವಾಗಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಿ ಎನ್ನುವ ಮುಂಜಾಗ್ರತೆಗಾಗಿ ಶಿರಾ ನಗರ ಹಾಗೂ ತಾಲೂಕಿನ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಪೊಲೀಸ್ ಇಲಾಖೆ ವತಿಯಿಂದ ಪಥಸಂಚಲನ (Tumkur News) ನಡೆಸಲಾಯಿತು.
ಶಿರಾ ಉಪ ವಿಭಾಗದ ಡಿವೈಎಸ್‌ಪಿ ಬಿ.ಕೆ. ಶೇಖರ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಅರೆ ಸೇನಾ ಪಡೆ ಜತೆ ಪೊಲೀಸ್ ಸಿಬ್ಬಂದಿಗಳು ನಗರ ಸೇರಿದಂತೆ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಇದನ್ನೂ ಓದಿ: Job Alert: ಗಮನಿಸಿ; ಜಲಮಂಡಳಿಯ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಸಂಪೂರ್ಣ ವಿವರ
ನಗರ ಪೊಲೀಸ್ ಠಾಣೆಯಿಂದ ಪ್ರಾರಂಭವಾದ ಪಥಸಂಚಲನವು ನಗರದ ವಿವಿಧ ಕಡೆ ಸಂಚರಿಸಿ, ಲೋಕಸಭಾ ಚುನಾವಣೆ ಅಂಗವಾಗಿ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸುವ ಕುರಿತು ಜಾಗೃತಿ ಮೂಡಿಸಲಾಯಿತು,
ಶಿರಾ ಗ್ರಾಮಾಂತರ ಪೊಲೀಸ್ ವೃತ್ತ ವ್ಯಾಪ್ತಿಯಲ್ಲೂ ಆಯಾ ಠಾಣಾ ಅಧಿಕಾರಿ, ಸಿಬ್ಬಂದಿಗಳಿಂದ ಪಥಸಂಚಲನ ನಡೆಸಲಾಯಿತು.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಂದಿನಿ ಪ್ರಾಯೋಜಕತ್ವ?
ಶಿರಾ ನಗರ ಠಾಣಾ ಸಿಪಿಐ ಮಂಜೇಶ್ ಗೌಡ, ಶಿರಾ ಗ್ರಾಮಾಂತರ ಸಿಪಿಐ ಎಸ್.ಕೆ. ಶಶಿಧರ್ ಹಾಗೂ ಪಿಎಸ್ಐ ಹಾಗೂ ಸಿಬ್ಬಂದಿಗಳು ಸೇರಿ ನೂರಾರು ಅರೆಸೇನಾ ಪಡೆ ಅವರಿಂದ ಪಥಸಂಚಲನ ನಡೆಯಿತು.