ಶಿರಾ: ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು (Mahashivaratri) ಶ್ರದ್ಧಾ ಭಕ್ತಿಯಿಂದ (Tumkur News) ಆಚರಿಸಲಾಯಿತು.
ಮಹಾಶಿವರಾತ್ರಿ ಅಂಗವಾಗಿ ಶಿವ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ವಿಶೇಷ ದೀಪೋತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆಯಿಂದಲೇ ಭಕ್ತಾದಿಗಳು ಶಿವ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ನಗರದ ಶ್ರೀ ಕೊಳದಪ್ಲೇಶ್ವರ ದೇವಸ್ಥಾನ ಸೇರಿದಂತೆ ಶಿವ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ
ಶಿರಾದ ಶ್ರೀ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮ ಜರುಗಿತು.
ತಾಲೂಕಿನ ಪೂಜಾರಮದ್ದನಹಳ್ಳಿಯ ಸಿದ್ಧಾರೂಢ ಶಿವಾನಂದ ಮಂದಿರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಪಂಚವೃಕ್ಷದಡಿ ಶ್ರೀ ಪಂಚಮುಖಿ ಲಿಂಗ ಸನ್ನಿಧಿಯಲ್ಲಿ ಶಿವಪಂಚಾಕ್ಷರಿ ಜಪ, ಯಜ್ಞ ಕಾರ್ಯಕ್ರಮ ಹಾಗೂ ಭಕ್ತರಿಂದ ಜಲಾಭಿಷೇಕ ನಡೆಯಿತು.
ಇದನ್ನೂ ಒದಿ: Vinay Rajkumar: ವಿನಯ್ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!
ಇನ್ನು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಯಿತು.