ಶಿರಾ: ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಿಂದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ (Mathematician Srinivasa Ramanujan) ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಡಾ.ಪಿ.ಎಚ್. ಮಹೇಂದ್ರಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಮಕ್ಕಳು ಪ್ರತಿಭಾವಂತರು ಮತ್ತು ಉತ್ತಮ ವ್ಯಕ್ತಿತ್ವ ಪಡೆದವರಾಗಿರುತ್ತಾರೆ. ಈ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಮೂಲಭೂತ ಸೌಲಭ್ಯಗಳು, ವೈಜ್ಞಾನಿಕವಾಗಿ ಮತ್ತು ನಿರ್ಮಾಣಾತ್ಮಕವಾಗಿ ಆಲೋಚಿಸುವ ರೀತಿಯನ್ನು ಕಲಿಸಿ ಕೊಡಬೇಕಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Job Alert: ಎನ್‌ಐಸಿಎಲ್‌ನ ಆಫೀಸರ್ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಿ
ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಬಹು ಅಮೂಲ್ಯ ಚಟುವಟಿಕೆಗಳನ್ನು ಮಾಡಿಸುತ್ತಿರುವುದು ಸಂತಸವನ್ನುಂಟು ಮಾಡಿದೆ, ನಾವು ಮಕ್ಕಳನ್ನು ಭವಿಷ್ಯದ ನಾಗರೀಕರು ಎನ್ನುತ್ತೇವೆ, ಆದರೆ ಅವರನ್ನು ಪ್ರತಿಭಾವಂತ ನಾಗರೀಕರನ್ನಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕರು ಮಕ್ಕಳಿಗೆ ಬಹು ಅಮೂಲ್ಯ ಪ್ರೇರಣೆ ನೀಡುತ್ತಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಹಲವಾರು ವೈಜ್ಞಾನಿಕ ಉಪಕರಣಗಳ ಗಣಿತದ ಪ್ರಾತ್ಯಕ್ಷಿಕೆಯನ್ನು ವಿವರಿಸಿದರು.
ಇದನ್ನೂ ಓದಿ: Vastu Tips: ಮನೆಯ ವಾಸ್ತು ದೋಷಗಳನ್ನು ಹೀಗೆ ಹೋಗಲಾಡಿಸಿ
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಅಣ್ಣೇಶ್, ವಿಜ್ಞಾನ ಶಿಕ್ಷಕ ಮಂಜುನಾಥ್, ರಾಜಣ್ಣ, ಪಾರ್ವತಿ, ಬಸವರಾಜ್, ಗೋವಿಂದಪ್ಪ, ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.