ಪಾವಗಡ: ತಾಲೂಕಿನ ಟೌನ್ ಪೊಲೀಸ್ ಠಾಣೆಯ ಅವರಣದಲ್ಲಿ ಶುಕ್ರವಾರ ರೌಡಿಶೀಟರ್‌ಗಳ ಪರೇಡ್ (Rowdysheeters Parade) ನಡೆಸಲಾಯಿತು.
ಮಧುಗಿರಿ ಡಿವೈಎಸ್ಪಿ ಎನ್.ಬಿ. ರಾಮಚಂದ್ರಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ ನಿಮ್ಮನ್ನು ನೇರವಾಗಿ ಗಡಿಪಾರು ಮಾಡುತ್ತೇವೆ ಎಂದು ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜೀವನ ಬದಲಾಯಿಸಿಕೊಳ್ಳಿ, ಸಮಾಜದಲ್ಲಿ ಗೌರವದಿಂದ ಬಾಳಿ ಎಂದು ಡಿವೈಎಸ್ಪಿ ಎನ್.ಬಿ. ರಾಮಚಂದ್ರಪ್ಪ, ಇದೇ ವೇಳೆ ರೌಡಿಶೀಟರ್‌ಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ: Assembly Election 2023: ಮಧ್ಯಪ್ರದೇಶದಲ್ಲಿ ಶೇ.71.16, ಛತ್ತೀಸ್‌ಗಢದಲ್ಲಿ ಶೇ.68.15 ಮತದಾನ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ 79 ಜನರ ಮೇಲೆ ರೌಡಿಶೀಟರ್ ಪ್ರಕರಣ ಇದ್ದು, ಅವರುಗಳಲ್ಲಿ ಇಂದು ಕೇವಲ 44 ಜನ ಮಾತ್ರ ಪರೇಡ್‌ನಲ್ಲಿ ಭಾಗವಹಿಸಿದ್ದಾರೆ, ಉಳಿದವರನ್ನು ಸಹ ಮುಂದಿನ ದಿನದಲ್ಲಿ ಕರೆಯಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Viral Video: ಈ ಮಗುವಿಗೆ ಜೀವಂತ ಹಾವೇ ಆಟದ ಗೊಂಬೆ; ನೆಟ್ಟಿಗರು ಶಾಕ್
ಈ ಸಂದರ್ಭದಲ್ಲಿ ಪಾವಗಡ ಟೌನ್ ಪೊಲೀಸ್ ಠಾಣೆಯ ಸಿಪಿಐ ಸುರೇಶ್, ಗ್ರಾಮೀಣ ಠಾಣೆಯ ಸಿಪಿಐ ಗಿರೀಶ್, ಎಸ್ಐ ಗುರುನಾಥ್ ಸೇರಿದಂತೆ ಇತರೆ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.