Viral Video: ಈ ಮಗುವಿಗೆ ಜೀವಂತ ಹಾವೇ ಆಟದ ಗೊಂಬೆ; ನೆಟ್ಟಿಗರು ಶಾಕ್‌ - Vistara News

ವೈರಲ್ ನ್ಯೂಸ್

Viral Video: ಈ ಮಗುವಿಗೆ ಜೀವಂತ ಹಾವೇ ಆಟದ ಗೊಂಬೆ; ನೆಟ್ಟಿಗರು ಶಾಕ್‌

Viral Video: ಚಿಕ್ಕ ಮಕ್ಕಳು ಹಾವಿನೊಂದಿಗೆ ಆಟವಾಡುತ್ತಿರುವ ವಿಡಿಯೊಗಳು ಈ ಹಿಂದೆಯೂ ಸಾಕಷ್ಟು ಸದ್ದು ಮಾಡಿವೆ. ಈ ವೈರಲ್‌ ವಿಡಿಯೊದಲ್ಲಿಯೂ ಪುಟ್ಟ ಮಗುವೊಂದು ಹಾವನ್ನು ಕೈಯಲ್ಲಿ ಹಿಡಿಯುವ ದೃಶ್ಯ ಸೆರೆಯಾಗಿದೆ.

VISTARANEWS.COM


on

sanke child
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜಗತ್ತಿನ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಸೇರಿವೆ. ಇವುಗಳಲ್ಲಿ ಬಹುತೇಕ ವಿಷ ರಹಿತವಾಗಿದ್ದರೂ ಅನೇಕ ಮಂದಿ ʼಹಾವುʼ ಎನ್ನುವ ಪದ ಕಿವಿಗೆ ಬಿದ್ದರೆ ಸಾಕು ಬೆಚ್ಚಿ ಬೀಳುತ್ತಾರೆ. ಅಂತಹದರಲ್ಲಿ ಇಲ್ಲಿ ಚಿಕ್ಕ ಮಗುವೊಂದು ಜೀವಂತ ಹಾವನ್ನು ಗೊಂಬೆಯಂತೆ ಕೈಯಲ್ಲಿ ಹಿಡಿದು ನಿರ್ಭೀತಿಯಿಂದ ಆಟವಾಡುತ್ತಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ದಂಗಾದ ನೆಟ್ಟಿಗರು

ಅದು ಇನ್ನೂ ಅಂಬೆಗಾಲಿಡುವ ಮಗು. ನೆಲದ ಮೇಲೆ ಕುಳಿತಿದೆ. ಪಕ್ಕದಲ್ಲೇ ಹಾವೊಂದು ಹರಿದಾಡುತ್ತಿದೆ. ಸಾಮಾನ್ಯ ಗೊಂಬೆಯನ್ನು ಎತ್ತಿಕೊಳ್ಳುವಂತೆ ಆ ಮಗು ಹಾವಿನ ಬಾಲ ಹಿಡಿದೆಳೆಯುತ್ತದೆ. ಕಾಲ ಬಳಿಗೆ ಬಂದ ಹಾವಿನ ತಲೆಯನ್ನು ಮಗು ಮುಟ್ಟುತ್ತದೆ. ಬಳಿಕ ಹಾವು ಆಚೆ ಹೋಗಲು ಪ್ರಯತ್ನಿಸುತ್ತದೆ. ಮತ್ತೊಮ್ಮೆ ಹಾವಿನ ಬಾಲವನ್ನು ಕೈಯಲ್ಲಿ ಹಿಡಿದು ಮಗು ಎಳೆಯುತ್ತದೆ. ಬಳಿಕ ಆಚೆ ಈಚೆ ಸರಿದಾಡಿದ ಹಾವು ಕೊನೆಗೆ ಮಗುವಿನಿಂದ ದೂರ ಹೊರಟು ಹೋಗುತ್ತಾರೆ. ಈ ದೃಶ್ಯವನ್ನು ಅನೇಕರು ಉಸಿರು ಬಿಗಿ ಹಿಡಿದು ವೀಕ್ಷಿಸಿದ್ದಾರೆ. ಹಾವು ಮಗುವಿಗೆ ಅಪಾಯ ಮಾಡದಿರುವುದನ್ನು ನೋಡಿ ನೆಮ್ಮದಿಯ ನಿಟ್ಟಿಸಿರು ಬಿಟ್ಟವರು ಎಷ್ಟೋ ಮಂದಿ. ಕೆಲವರು ಮಗುವಿನ ಧೈರ್ಯವನ್ನು ಹೊಗಳಿದರೆ, ಇತರರು ಮಗುವಿನ ಸುರಕ್ಷತೆ ಬಗ್ಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೊವನ್ನು ಲಕ್ಷಾಂತರ ಮಂದಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಹಲವರು ಕಮೆಂಟ್‌ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʼʼಛತ್ತೀಸ್‌ಗಢದಲ್ಲಿ ಹಳ್ಳಿಯೊಂದಿದೆ. ಅಲ್ಲಿನ ಮಕ್ಕಳು ದೊಡ್ಡ ದೊಡ್ಡ ಹಾವುಗಳೊಂದಿಗೆ ಆಟವಾಡುತ್ತಿರುತ್ತಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದು ನೀರು ಹಾವು. ವಿಷ ಹೊಂದಿರುವುದಿಲ್ಲʼʼ ಎಂದು ಹೇಳಿದ್ದಾರೆ ಇನ್ನೊಬ್ಬರು. ʼʼವಿಡಿಯೊ ಮಾಡಿದ್ದು ಯಾರು?ʼʼ ಎಂದು ಮತ್ತೊಬ್ಬರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ವಿಷ ರಹಿತವಾಗಿದ್ದರೂ ಮಕ್ಕಳನ್ನು ಹಾವಿನ ಜತೆ ಆಡಲು ಬಿಡಬಾರದು. ಮುಂದೊಂದು ದಿನ ಅವರು ವಿಷದ ಹಾವು ಕಂಡರೂ ಅಭ್ಯಾಸ ಬಲದಿಂದ ಅದರೊಂದಿಗೆ ಆಟವಾಡಲು ಮುಂದಾಗುವ ಅಪಾಯವಿದೆ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Viral Video: ಗೂಳಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸಬೇಕೆ? ಈತನ ತಂತ್ರ ಫಾಲೋ ಮಾಡಿ!

ಇದು ಮೊದಲ ಸಲವಲ್ಲ

ಹಾವಿನೊಂದಿಗೆ ಮಕ್ಕಳು ಆಟವಾಡುತ್ತಿರುವ ಪ್ರಕರಣ ಈ ಹಿಂದೆಯೂ ಅನೇಕ ಬಾರಿ ವರದಿಯಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮೂರು ವರ್ಷದ ಬಾಲಕನೊಬ್ಬ ಹಾವೊಂದನ್ನು ಎತ್ತಿಕೊಂಡು ಕಡಿದು ಕೊಂದ ಘಟನೆ ನಡೆದಿದೆ. ಅಂಗಳದಲ್ಲಿ ಆಟವಾಡಿಕೊಂಡಿದ್ದ ಬಾಲಕನ ಬಳಿಕೆ ಹಾವೊಂದು ಬಂದಿತ್ತು. ಕುತೂಹಲದಿಂದ ಹಾವನ್ನು ಎತ್ತಿಕೊಂಡು ಸಹಜವಾಗಿಯೇ ಆತ ಕಡಿದು ಬಿಟ್ಟಿದ್ದ. ಬಳಿಕ ಭಯದಿಂದ ಕಿರುಚಿಕೊಂಡಿದ್ದ. ಕೂಡಲೇ ಮನೆಯವರು ಧಾವಿಸಿ ಬಂದಿದ್ದರು. ಅಜ್ಜಿ ಬಾಲಕನ ಬಾಯಿಯಲ್ಲಿದ್ದ ಹಾವನ್ನು ಹೊರ ತೆಗೆದು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕನನ್ನು ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರು ಅಪಾಯವಿಲ್ಲ ಎನ್ನುವುದನ್ನು ತಿಳಿದು ಬಳಿಕ ಡಿಸ್‌ಚಾರ್ಜ್‌ ಮಾಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡ ಹಲವರು ಹಾವಿನ ಬಗ್ಗೆ ಎಚ್ಚರ ವಹಿಸಿ ಎಂದು ಹಲವರು ಕಿವಿ ಮಾತು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ರೈಲಿನಲ್ಲಿ ಅಶ್ಲೀಲವಾಗಿ ಮೈ ಕುಣಿಸಿದ ಮಹಿಳೆ; ರೀಲ್ಸ್ ಮಾಡುವವರ ಕಾಟವಿಲ್ಲದ ಪ್ರಯಾಣ ಅಸಾಧ್ಯ ಎಂದ ನೆಟ್ಟಿಗರು

Viral News: ಮುಂಬೈಯ ಲೋಕಲ್‌ ರೈಲಿನಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮಧ್ಯೆ ಅಶ್ಲೀಲವಾಗಿ ಹೆಜ್ಜೆ ಹಾಕಿ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಆಕೆಗೆ ಛೀಮಾರಿ ಹಾಕುತ್ತಿದ್ದಾರೆ. ʼʼಕಾನೂನಿನ ಭಯವಿಲ್ಲದಿದ್ದರೆ ಹೀಗೆಲ್ಲ ಸಂಭವಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ನೃತ್ಯ ಪ್ರದರ್ಶಿಸುವುದು ತಪ್ಪು. ರೈಲ್ವೆ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದು ಬಹುತೇಕರು ಆಗ್ರಹಿಸಿದ್ದಾರೆ.

VISTARANEWS.COM


on

Viral News
Koo

ಮುಂಬೈ: ಇತ್ತೀಚೆಗೆ ಯುವ ಜನತೆಯಲ್ಲಿ ರೀಲ್ಸ್‌ ಮಾಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ಯಾವ ಮಟ್ಟಿಗೆ ಅತಿರೇಕಕ್ಕೆ ಹೋಗಿದೆ ಎಂದರೆ ಸಾರ್ವಜನಿಕ ಸ್ಥಳಗಳಲ್ಲಿಯೂ ವಿಡಿಯೊ ಮಾಡಲು ಮುಂದಾಗುತ್ತಿದ್ದಾರೆ. ಇತರರಿಗೆ ತೊಂದರೆಯಾಗುತ್ತದೆ, ಕಿರಿಕಿರಿ ಅನುಭವಿಸುತ್ತಾರೆ ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದೆ ರೀಲ್ಸ್‌ಗೆ ಹೆಜ್ಜೆ ಹಾಕುತ್ತಿರುವ ಪ್ರವೃತ್ತಿಗೆ ಬ್ರೇಕ್‌ ಬೀಳುತ್ತಿಲ್ಲ. ರೈಲು, ಮೆಟ್ರೋ, ವಿಮಾನ ಹೀಗೆ ಎಲ್ಲೆಂದರಲ್ಲಿ ಮೈ ಕುಣಿಸಿ ಜನಪ್ರಿಯತೆ ಪಡೆದುಕೊಳ್ಳಲು ಮುಂದಾಗುವವರು ಅಧಿಕ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಮೈ ಚಳಿ ಬಿಟ್ಟು ಅಶ್ಲೀಲವಾಗಿ ಕುಣಿಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಇದೀಗ ಅಂತಹದ್ದೇ ಘಟನೆ ವರದಿಯಾಗಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮುಂಬೈಯ ಲೋಕಲ್‌ ರೈಲಿನಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮಧ್ಯೆ ಅಶ್ಲೀಲವಾಗಿ ಹೆಜ್ಜೆ ಹಾಕಿ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾಳೆ (Viral News).

ಅಧಿಕಾರಿಗಳು ಎಷ್ಟೇ ಎಚ್ಚರಿಸಿದರೂ, ಕ್ರಮ ಕೈಗೊಂಡರೂ ಚಲಿಸುತ್ತಿರುವ ರೈಲು, ಫ್ಲಾಟ್‌ಫಾರ್ಮ್‌ನಲ್ಲಿ ಡ್ಯಾನ್ಸ್‌ ಮಾಡುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಈ ವಿಡಿಯೊದಲ್ಲಿ ಚಲಿಸುತ್ತಿರುವ ಮುಂಬೈ ಲೋಕಲ್‌ ರೈಲು ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ (CSMT)ನಲ್ಲಿ ಮಹಿಳೆಯೊಬ್ಬಳು ತುಂಡು ಬಟ್ಟೆ ತೊಟ್ಟು ಭೋಜ್‌ಪುರಿ ಹಾಡಿಗೆ ಅಶ್ಲೀಲವಾಗಿ ನರ್ತಿಸುತ್ತಿರುವುದು ಕಂಡು ಬಂದಿದೆ. ನೆಟ್ಟಿಗರು ಈ ವಿಡಿಯೊ ನೋಡಿ ಮಹಿಳೆಗೆ ಛೀಮಾರಿ ಹಾಕುತ್ತಿದ್ದಾರೆ.

ಮಹಿಳೆ ರೈಲಿನ ಬೋಗಿಯ ಒಳಗೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಚೋದನಕಾರಿಯಾಗಿ ನೃತ್ಯ ಮಾಡಿ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ʼ’ಮುಂಬೈ ರೈಲಿನಲ್ಲಿ ಭಿಕ್ಷುಕರು ಮತ್ತು ರೀಲ್ಸ್ ಮಾಡುವವರ ಕಾಟವಿಲ್ಲದೆ ಶಾಂತಿಯುತವಾಗಿ ಪ್ರಯಾಣಿಸಲು ಸಾಧ್ಯವಿಲ್ಲʼʼ ಎಂದು ಕ್ಯಾಪ್ಶನ್‌ ನೀಡಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಜತೆಗೆ ಮುಂಬೈ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್‌ ಮಾಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಾಗಿದೆ.

ನೆಟ್ಟಿಗರು ಏನಂದ್ರು?

ʼʼಈ ಮಹಿಳೆ ಎಲ್ಲ ಕಡೆ ಡ್ಯಾನ್ಸ್‌ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾಳೆ. ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆಕೆಯನ್ನು ಬಂಧಿಸಿ ಮುಂಬೈಯಿಂದ ಗಡಿಪಾರು ಮಾಡಬೇಕುʼʼ ಎಂದು ಒಬ್ಬರು ಆಗ್ರಹಿಸಿದ್ದಾರೆ. ʼʼಇಂತಹ ಪ್ರವೃತ್ತಿಗೆ ಕೂಡಲೇ ಕಡಿವಾಣ ಹಾಕಬೇಕುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಕಾನೂನಿನ ಭಯವಿಲ್ಲದಿದ್ದರೆ ಹೀಗೆಲ್ಲ ಸಂಭವಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ನೃತ್ಯ ಪ್ರದರ್ಶಿಸುವುದು ತಪ್ಪು. ರೈಲ್ವೆ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪ್ರಯಾಣಿಕರು ಜವಾಬ್ದಾರಿಯುತ ನಾಗರಿಕರಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು’ʼ ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಿರಿಕಿರಿ ಉಂಟು ಮಾಡುವವರನ್ನು ಬಂಧಿಸಬೇಕು ಎಂದು ಬಹುತೇಕರು ಅಧಿಕಾರಿಗಳನ್ನು ಟ್ಯಾಗ್‌ ಮಾಡಿ ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು?

ಸದ್ಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮುಂಬೈ ಸೆಂಟ್ರಲ್ ಡಿಆರ್‌ಎಂನ ಅಧಿಕೃತ ಎಕ್ಸ್ ಹ್ಯಾಂಡಲ್, ಘಟನೆಯ ತನಿಖೆ ನಡೆಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಮುಂಬೈ ವಿಭಾಗದ ಭದ್ರತಾ ಇಲಾಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ. ʼʼಮಾಹಿತಿಗಾಗಿ ಧನ್ಯವಾದಗಳು. ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ʼ ಎಂದು ಹೇಳಿದೆ.

ಇದನ್ನೂ ಓದಿ: Viral Video: ಅರೆಬರೆ ಬಟ್ಟೆಯಲ್ಲೇ ರೈಲಿನಲ್ಲಿ ಡ್ಯಾನ್ಸ್‌ ಮಾಡಿದ ಯುವತಿ; ಛೀಮಾರಿ ಹಾಕಿದ ಜನ

Continue Reading

ವೈರಲ್ ನ್ಯೂಸ್

Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Viral Video:ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ಪಾಕಿಸ್ತಾನ(Pakistan) ಎಂದರೆ ಭಾರತ ಮಾತ್ರ ಅಲ್ಲ, ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ದ್ವೇಷಿಸುವ ರಾಷ್ಟ್ರ. ಇನ್ನು ನೆರೆಯ ಅಫ್ಘಾನಿಸ್ತಾನ(Afghanistan) ಅಂತೂ ಪಾಕಿಸ್ತಾನದ ಕುಕೃತ್ಯದಿಂದ ಬೇಸತ್ತಿರೋದಂತೂ ಅಕ್ಷರಶಃ ನಿಜ. ಹೀಗಾಗಿಯೇ ಅಲ್ಲಿನ ಜನ ಪಾಕಿಸ್ತಾನ ಅಂದ್ರೆ ಸಾಕು ಕೆಂಡ ಕಾರುತ್ತಾರೆ ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ(Viral Video)ವೊಂದು ಭಾರೀ ಸದ್ದು ಮಾಡುತ್ತಿದ್ದು, ಹೀಗೇ ಮುಂದುವರೆದರೆ ಪಾಕ್‌ ಸಂಪೂರ್ಣವಾಗಿ ನಿರ್ಣಾಮ ಆಗದಂತೂ ನಿಜ ಅಂತಿದ್ದಾರೆ ವಿಡಿಯೋ ನೋಡಿದ ನೆಟ್ಟಿಗರು.

ಏನಿದು ವಿಡಿಯೋ?

ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಯೂಟ್ಯೂಬರ್‌ ಜೊತೆ ಮಾತನಾಡಿದ ಅಲ್ಲಿನ ವೃದ್ಧರೊಬ್ಬರು ಭಾರತ ಮತ್ತು ಅಫ್ಘಾನಿಸ್ತಾನ ಜೊತೆಗೂಡಿದರೆ ಪಾಕ್‌ ಅಂತ್ಯ ಖಂಡಿತ ಎಂಬ ಮಾತನ್ನು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದುಮಾಡುತ್ತಿದೆ. “ಭಾರತ ಮತ್ತು ಅಫ್ಘಾನಿಸ್ತಾನ ಮಿತ್ರ ರಾಷ್ಟ್ರಗಳು. ನಾವು ಸಹೋದರರಿದ್ದಂತೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಸುಗೆ ಎರಡೂ ದೇಶಗಳನ್ನು ಒಗ್ಗೂಡಿಸುತ್ತದೆ. ಹೀಗಾಗಿ ಎರಡೂ ರಾಷ್ಟ್ರಗಳು ಜೊತೆಗೂಡಿದರೆ ನಮ್ಮ ಶತ್ರು ರಾಷ್ಟ್ರವನ್ನು ಬಹಳ ಸುಲಭವಾಗಿ ಸರ್ವನಾಶ ಮಾಡಬಹುದಾಗಿ ಎಂದು ಅವರು ಹೇಳಿದ್ದಾರೆ.

“ನೀವು ಆಕಡೆಯಿಂದ ದಾಳಿ ನಡೆಸಿ.. ನಾವು ಈ ಕಡೆಯಿಂದ ದಾಳಿ ನಡೆಸುತ್ತೇವೆ. ಅಫ್ಘಾನಿಸ್ತಾನ ನಿಮ್ಮ ಜೊತೆ ಯಾವಾಗಲೂ ಇದೆ. ಆಫ್ಗನ್‌ ಜನ ನಿಮ್ಮ ಜೊತೆಗಿದ್ದಾರೆ. ಇಬ್ಬರು ಜೊತೆಗೂಡಿ ದಾಳಿ ನಡೆಸಿದರೆ ಪಾಕ್‌ ಅನ್ನು ಮಟ್ಟ ಹಾಕಬಹುದು. ಅಲ್ಲಿನ ಸಾಮಾನ್ಯ ಜನರೊಡನೆ ನಮಗೇನು ದ್ವೇಷವಿಲ್ಲ. ಬದಲಾಗಿ ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ನಮಗೆ ಅಸಮಾಧಾನ ಇದೆ” ಎಂದು ವೃದ್ಧ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಪಿಒಕೆ ಶೀಘ್ರದಲ್ಲೇ ಮತ್ತೆ ನಮ್ಮದಾಗುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಪಾಕಿಸ್ತಾನವನ್ನು ಯಾರೂ ಇಷ್ಟ ಪಡುವುದಿಲ್ಲ… ಅಫ್ಘಾನಿಸ್ತಾನ ಅತ್ಯಂತ ಹೆಚ್ಚಾಗಿ ದ್ವೇಷಿಸುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೋದಿ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಮತ್ತೊಬ್ಬ ನೆಟ್ಟಿಗ ರಿಯಾಕ್ಟ್‌ ಮಾಡಿದ್ದಾರೆ.

ಇನ್ನು ಈದೇ ವಿಡಿಯೋವನ್ನು ಇಟ್ಟುಕೊಂಡು ಹಲವು ಮೀಮ್ಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

Continue Reading

ವೈರಲ್ ನ್ಯೂಸ್

Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

Viral Video:ಆಫ್ರಿಕಾದ ಸೂಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಗ್ಗ-ಜಗ್ಗಾಟದಲ್ಲಿ ಭಾರತೀಯ ಮತ್ತು ಚೀನಾ ಸೇನೆಗಳು ಎಲ್ಲರ ಗಮನ ಸೆಳೆದಿವೆ. ಈ ಸ್ನೇಹಮಯ ಆಟದಲ್ಲಿ ಎರಡೂ ತಂಡಗಳು ಬಹಳ ಹುಮ್ಮಸ್ಸಿನಿಂದ ಭಾಗಿಯಾಗಿ ಸಂಭ್ರಮ ಪಟ್ಟವು. ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Viral Video
Koo

ಸೂಡಾನ್‌: ಸದಾ, ಯುದ್ಧ, ದಾಳಿ-ಪ್ರತಿದಾಳಿಯಲ್ಲಿ ಬ್ಯುಸಿಯಾಗಿರುವ ಯೋಧರು ರಿಲಾಕ್ಸ್‌ ಮೂಡ್‌ನಲ್ಲಿರುವುದನ್ನು ಕಾಣ ಸಿಗುವುದು ಬಹಳ ವಿರಳ. ಅದರಲ್ಲೂ ಬದ್ಧ ವೈರಿ ರಾಷ್ಟ್ರಗಳ ಯೋಧರು ಪರಸ್ಪರ ಎಂಜಾಯ್‌ ಮೂಮೆಂಟ್‌ನಲ್ಲಿರುತ್ತಾರೆ ಎಂದರೆ ನಂಬೋಕು ಸಾಧ್ಯವಿಲ್ಲ. ಆದರೆ ಇಲ್ಲೊಂದು ವಿಡಿಯೋ ಎಲ್ಲೆಡೆ ವೈರಲ್‌(Viral Video) ಆಗುತ್ತಿದ್ದು, ಭಾರತ(India) ಮತ್ತು ಚೀನಾ(China) ಯೋಧರು ಹಗ್ಗ-ಜಗ್ಗಾಟ(Tug Of War) ಸ್ಪರ್ಧೆಯಲ್ಲಿ ಭಾಗಿಯಾಗಿರುವುದನ್ನು ಕಾಣಬಹುದಾಗಿದೆ.

ಆಫ್ರಿಕಾದ ಸೂಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಗ್ಗ-ಜಗ್ಗಾಟದಲ್ಲಿ ಭಾರತೀಯ ಮತ್ತು ಚೀನಾ ಸೇನೆಗಳು ಎಲ್ಲರ ಗಮನ ಸೆಳೆದಿವೆ. ಈ ಸ್ನೇಹಮಯ ಆಟದಲ್ಲಿ ಎರಡೂ ತಂಡಗಳು ಬಹಳ ಹುಮ್ಮಸ್ಸಿನಿಂದ ಭಾಗಿಯಾಗಿ ಸಂಭ್ರಮ ಪಟ್ಟವು. ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತ ಮತ್ತು ಚೀನಾ ಎರಡೂ ದೇಶಗಳ ಯೋಧರು ಬಹಳ ಸಂಭ್ರಮದಿಂದ ಈ ಹಗ್ಗ-ಜಗ್ಗಾಟ ಆಟದಲ್ಲಿ ಭಾಗಿಯಾಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಆಟದಲ್ಲಿ ಸೋತವರಾರು ಗೆದ್ದವರಾರು ಎಂದು ಕೇಳೋದಾದರೆ.. ಅದರರಲ್ಲಿ ಎರಡು ಮಾತೇ ಇಲ್ಲ ಎಂಬಂತೆ ಭಾರತೀಯ ಯೋಧರು ಚೀನಾ ಯೋಧರನ್ನು ಅತ್ಯಂತ ಸುಭವಾಗಿ ಮಣಿಸಿದ್ದಾರೆ. ಇನ್ನು ಗೆದ್ದು ಬೀಗಿರುವ ಭಾರತ ತಂಡಕ್ಕೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಅಂದರೆ ಸೋಮವಾರ ಮೇಘಾಲಯದಲ್ಲಿ ಭಾರತ ಮತ್ತು ಫ್ರಾನ್ಸ್‌ ಯೋಧರ ನಡುವೆ ಈ ಹಗ್ಗ-ಜಗ್ಗಾಟ ಸ್ಪರ್ಧೆ ನಡೆದಿತ್ತು. ʼಶಕ್ತಿ 2024’ ಎಂಬ ಹೆಸರಿನಲ್ಲಿ ಮೇಘಾಲಯದಲ್ಲಿ ನಡೆಯುತ್ತಿದ್ದ ಜಂಟೀ ಸೇನಾ ಕಾರ್ಯಾಚರಣೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇಘಾಲಯದ ಉಮ್ರೋಯ್‌ನಲ್ಲಿ ಆಯೋಜಿಸಲಾಗಿದ್ದ ಜಂಟಿ ಮಿಲಿಟರಿ ತರಬೇತಿ ಸೋಮವಾರ ಮುಕ್ತಾಯಗೊಂಡಿತು. ಇದು ಭಾರತ ಮತ್ತು ಫ್ರಾನ್ಸ್ ಎರಡರಲ್ಲೂ ಪರ್ಯಾಯವಾಗಿ ನಡೆಯುವ ದ್ವೈವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ಕೊನೆಯ ಆವೃತ್ತಿಯನ್ನು ನವೆಂಬರ್ 2021 ರಲ್ಲಿ ಫ್ರಾನ್ಸ್‌ನಲ್ಲಿ ನಡೆಸಲಾಯಿತು.

ಇದನ್ನೂ ಓದಿ: Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Continue Reading

ವಿದೇಶ

Nawaz Sharif: “ಕಾರ್ಗಿಲ್‌ ಯುದ್ಧ ನಮ್ಮಿಂದಲೇ ಆಗಿರುವ ಅತಿದೊಡ್ಡ ಪ್ರಮಾದ”- 23 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಪಾಕ್‌

Nawaz Sharif: ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

VISTARANEWS.COM


on

Nawaz Sharif
Koo

ಇಸ್ಲಮಾಬಾದ್‌: ಭಾರತದ ಜೊತೆ ಮಾಡಿಕೊಂಡಿದ್ದ 1999 ಲಾಹೋರ್‌ ಒಪ್ಪಂದ(1999 Lahore Declaration)ವನ್ನು ಪಾಕಿಸ್ತಾನವೇ ಮುರಿದಿತ್ತು. ಅದು ನಮ್ಮ ಅತಿ ದೊಡ್ಡ ತಪ್ಪಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌(Nawaz Sharif) ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾರ್ಗಿಲ್‌ ಯುದ್ಧ(Kargil War) ಜನರಲ್‌ ಫರ್ವೇಜ್‌ ಮುಷಾರಫ್‌(Pervez Musharraf) ಕುಕೃತ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Viral Video)ದಲ್ಲಿ ಬಹಳ ಸದ್ದು ಮಾಡುತ್ತಿದೆ.

ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್‌(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್‌ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.

ಫೆಬ್ರವರಿ 21, 1999 ರಂದು ಎರಡು ಬದ್ಧ ವೈರಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ನೆರೆಹೊರ ರಾಷ್ಟ್ರಗಳ ನಡುವಿನ ಶಾಂತಿ ಒಪ್ಪಂದವು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಜನ ಸಂಪರ್ಕವನ್ನು ಉತ್ತೇಜಿಸಲು ಕರೆ ನೀಡಿತು. ಆದಾಗ್ಯೂ, ಕೆಲವು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಆಕ್ರಮಣವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು.

ಮಾರ್ಚ್ 1999 ರಿಂದ, ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದ ಮುಷರಫ್, ಲಡಾಖ್‌ನ ಕಾರ್ಗಿಲ್ ಜಿಲ್ಲೆಯೊಳಗೆ ಪಾಕ್‌ ಸೇನೆಯ ರಹಸ್ಯ ಒಳನುಸುಳುವಿಕೆಗೆ ಆದೇಶಿಸಿದರು. ನವದೆಹಲಿ ಒಳನುಸುಳುವಿಕೆಯನ್ನು ಕಂಡುಹಿಡಿದ ನಂತರ ಪೂರ್ಣ ಪ್ರಮಾಣದ ಯುದ್ಧವು ಸ್ಫೋಟಗೊಂಡಿತು. ಈ ಯುದ್ಧವನ್ನು ಭಾರತ ಗೆದ್ದಿತ್ತು. ಈ ಸಂರ್ಭದಲ್ಲಿ ಷರೀಫ್‌ ಪಾಕಿಸ್ತಾನದ ಪ್ರಧಾನಿ ಆಗಿದ್ದರು.

ಇದನ್ನೂ ಓದಿ:Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

ಇದೀಗ ಇದೇ ವಿಚಾರ ಬಗ್ಗೆ ಪ್ರಸ್ತಾಪಿಸಿರುವ ಷರೀಫ್‌ ಅಂದು ತಮ್ಮ ಸರ್ಕಾರ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಟೆಲಿವಿಷನ್ ಕಾರ್ಪೊರೇಷನ್ (ಪಿಟಿವಿ) ಪ್ರಸಾರ ಮಾಡಿದ ನವಾಜ್ ಷರೀಫ್ ಅವರ ಭಾಷಣದ ಒಂದು ಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Continue Reading
Advertisement
panjurli daiva sharat shetty murder
ದಕ್ಷಿಣ ಕನ್ನಡ8 mins ago

Panjurli Daiva: ಶರತ್‌ ಶೆಟ್ಟಿ ಕೊಲೆ ಆರೋಪಿ ಶರಣಾಗತಿ; ಎಳೆತಂದು ನಿಲ್ಲಿಸಿತೇ ಪಂಜುರ್ಲಿ ದೈವ?

Money Guide
ಮನಿ-ಗೈಡ್11 mins ago

Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಹೀಗೆ ಲಿಂಕ್‌ ಮಾಡಿ

Prajwal Revanna Case
ಕರ್ನಾಟಕ13 mins ago

Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Gold Rate Today
ಚಿನ್ನದ ದರ42 mins ago

Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಏರಿಕೆ; ಖರೀದಿಗೆ ಮುನ್ನ ದರ ಗಮನಿಸಿ

World Digestive Health Day
ಆರೋಗ್ಯ42 mins ago

World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ರಾಹುಲ್‌ ಗಾಂಧಿ rahul gandhi ippb account 2
ಪ್ರಮುಖ ಸುದ್ದಿ51 mins ago

ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

All Eyes on Rafah
ವಿದೇಶ58 mins ago

All Eyes on Rafah: ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ರೋಹಿತ್‌ ಪತ್ನಿ ಪೋಸ್ಟ್‌; ಫುಲ್‌ ಟ್ರೋಲ್‌- ಏನಿದು ʼಆಲ್‌ ಐಸ್‌ ಆನ್‌ ರಫಾʼ?

Sujay Hegde Manasare actor Engagement with Prerana
ಕಿರುತೆರೆ1 hour ago

Sujay Hegde: ನಿಶ್ಚಿತಾರ್ಥ ಮಾಡಿಕೊಂಡ ‘ಮನಸಾರೆ’ ಧಾರಾವಾಹಿಯ ನಟ ಸುಜಯ್ ಹೆಗಡೆ

Viral News
ವೈರಲ್ ನ್ಯೂಸ್2 hours ago

Viral News: ರೈಲಿನಲ್ಲಿ ಅಶ್ಲೀಲವಾಗಿ ಮೈ ಕುಣಿಸಿದ ಮಹಿಳೆ; ರೀಲ್ಸ್ ಮಾಡುವವರ ಕಾಟವಿಲ್ಲದ ಪ್ರಯಾಣ ಅಸಾಧ್ಯ ಎಂದ ನೆಟ್ಟಿಗರು

Rahul Gandhi
ದೇಶ2 hours ago

Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ18 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌