ಗುಬ್ಬಿ: ಇಂದಿನ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳಿದ್ದು (Opportunities), ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಖಂಡಿತವಾಗಿಯೂ ಯಶಸ್ಸು (Success) ಗಳಿಸಬಹುದು ಎಂದು ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಡಾ. ಸುರೇಶ್ ಡಿ.ಎಸ್. ತಿಳಿಸಿದರು.
ತಾಲೂಕಿನ ಹೇರೂರಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಟಾರ್ಟ್ ತಾನ್ 2.0 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ಸಂವಹನವು ಇಂದಿನ ದಿನಕ್ಕೆ ಬೇಕಾದ ಬಹಳ ಮುಖ್ಯವಾದ ಮಾರ್ಗಗಳಾಗಿದ್ದು, ಅದನ್ನು ವಿದ್ಯಾರ್ಥಿ ದೆಸೆಯಲ್ಲಿ ಸರಿಯಾದ ರೀತಿಯಲ್ಲಿ ಕಲಿತುಕೊಂಡರೆ ಭವಿಷ್ಯತ್ತಿನಲ್ಲಿ ಉತ್ತಮ ಸ್ಥಾನ ಮಾನಗಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್!
ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ಶಾಂತಲಾ ಮಾತನಾಡಿ, ತಾವೆಲ್ಲರೂ ಕೌಶಲ್ಯತೆ ಹೆಚ್ಚಿನದಾಗಿ ಪಡೆದುಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ
ಕಾರ್ಯಕ್ರಮದಲ್ಲಿ ಡೀನ್, ಶಿಕ್ಷಣ ತಜ್ಞ ಅನಿಲ್ ಕುಮಾರ್ ಜಿ, ಐಎಸ್ಇ ವಿಭಾಗದ ಎಚ್‌ಒಡಿ ತಾರಾ ಡಿ. ಕೆ. ಮತ್ತು ಇನ್ಫಿ ಚಾಲೆಂಜರ್ಸ್ ಕ್ಲಬ್ ಸಂಯೋಜಕ ಅನಿಲ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.