Vastu Tips: ಇದು ಬರೀ ಬೆಳಕಲ್ಲ... ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ - Vistara News

ಧಾರ್ಮಿಕ

Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

Vastu Tips: ಮನೆಯ ಪ್ರತಿಯೊಂದು ಕೋಣೆ ಯಾವ ರೀತಿ ಪ್ರಕಾಶ ಹೊಂದಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ.

VISTARANEWS.COM


on

home
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನೆ ನಿರ್ಮಾಣ ಎನ್ನುವುದು ಬಹುತೇಕರ ಎಷ್ಟೋ ವರ್ಷದ ಕನಸಾಗಿರುತ್ತದೆ. ಅಂತಹ ಮನೆಯಲ್ಲಿ ನೆಮ್ಮದಿಯಿಂದ, ಖುಷಿ ಖುಷಿಯಾಗಿ ಜೀವನ ಕಳೆಯುವಂತಿರಬೇಕು. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ನೆಮ್ಮದಿ, ಸಮೃದ್ಧಿ ಹೊಂದಿದ ಮನೆಗಾಗಿ ಕೆಲವೊಂದು ವಿಚಾರಗಳನ್ನು ಪ್ರಸ್ತಾವಿಸಿದೆ. ಯಾವ ರೂಮ್‌ ಹೇಗಿರಬೇಕು, ಅಲ್ಲಿ ಯಾವ ರೀತಿಯ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಆ ಕುರಿತಾದ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ಹಾಲ್‌

ಇದು ಮನೆಯ ಮುಖ್ಯ ಭಾಗ. ಇಲ್ಲಿ ಗರಿಷ್ಠ ಬೆಳಕು ಇರುವುದು ಮುಖ್ಯ. ಹಾಲ್‌ನ ನೈಋತ್ಯ ಭಾಗದಲ್ಲಿ ಗೋಡೆ ಇದ್ದರೆ ಕುಟುಂಬದ ಸದಸ್ಯರಿಗೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲು ಪ್ರಕಾಶಮಾನವಾದ ಸ್ಪಾಟ್ ಲೈಟ್ ಅಳವಡಿಸಿ. ಜತೆಗೆ ಕುಟುಂಬದ ಭಾವಚಿತ್ರವನ್ನು ಅಲ್ಲಿಡಬಹುದು. ಕಲಾಕೃತಿಗಳು ಅಥವಾ ಸಸ್ಯಗಳಿದ್ದರೆ ಅವುಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸುವುದು ಉತ್ತಮ.

ಬೆಡ್‌ ರೂಮ್‌

ಇಡೀ ದಿನದ ಆಯಾಸ ಕಳೆದು ನೆಮ್ಮದಿಯಿಂದ, ಬೆಚ್ಚಗೆ ವಿಶ್ರಾಂತಿ ಪಡೆಯಲಿರುವ ಜಾಗ ಬೆಡ್‌ ರೂಮ್‌. ನಾವು ಇಲ್ಲಿ ಹೆಚ್ಚಿನ ಸಮಯ ಕಳೆಯುತ್ತೇವೆ. ಇಲ್ಲಿ ಓದುವುದು, ಸಿನಿಮಾ ನೋಡುವುದು, ನಿದ್ದೆ ಮಾಡುವುದು ಸೇರಿದಂತೆ ನಮ್ಮಿಷ್ಟದ ಚಟುವಟಿಕೆಗಳಲ್ಲಿ ನಿರತರಾಗಿರುತ್ತೇವೆ. ಹೀಗಾಗಿ ಈ ಕೋಣೆಯ ಬಗ್ಗೆ ಮುತುವರ್ಜಿ ವಹಿಸುವುದು ಅಗತ್ಯ. ಛಾಯಾಚಿತ್ರಗಳು ಅಥವಾ ವರ್ಣಚಿತ್ರಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸಿ. ಮಲಗುವ ಕೋಣೆಯಲ್ಲಿ ಹಿತಕರ ಬೆಳಕು ಸೂಸುವ ದೀಪ ಬಳಸಿ. ಟೇಬಲ್ ಲ್ಯಾಂಪ್‌ಗಳನ್ನು ಇರಿಸುವುದು ಸೂಕ್ತ.

ಡೈನಿಂಗ್‌ ರೂಮ್‌

ಇಲ್ಲಿ ಸ್ಫಟಿಕದ ಶಾಂಡ್ಲಿಯರ್ ದೀಪಗಳನ್ನು ಅಳವಡಿಸಿಕೊಳ್ಳಬಹುದು. ಇದು ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಲಂಕಾರಿಕ ಹೋಲ್ಡರ್‌ಗಳಲ್ಲಿ ಕ್ಯಾಂಡಲ್‌ ಇರಿಸಬಹುದು. ಇದು ಡೈನಿಂಗ್‌ ರೂಮ್‌ ಅನ್ನು ಆಕರ್ಷಕವಾಗಿಸುತ್ತದೆ. ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳಕು ಬೀರುವ ಬಲ್ಬ್‌ ಅಳವಡಿಸಿ. ಊಟ ಮಾಡುವಾಗ ಮಬ್ಬು ಇರಬಾರದು.

ಅಡುಗೆ ಕೋಣೆ

ಕುಟುಂಬ ಸದಸ್ಯರು ಒಟ್ಟಿಗೆ ಸೇರುವ ಮತ್ತು ತಮಗಾಗಿ ಆಹಾರ ಸಿದ್ಧಪಡಿಸುವ ಸ್ಥಳ ಅಡುಗೆ ಕೋಣೆ. ಇದು ಮನೆಯ ಇನ್ನೊಂದು ಬಹಳ ಮುಖ್ಯವಾದ ಸ್ಥಳವಾಗಿದ್ದು, ಇದನ್ನು ಸಮರ್ಪಕವಾಗಿ ಬೆಳಗಿಸಬೇಕು. ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ನಿರ್ದಿಷ್ಟ ಕಡೆಗಳಲ್ಲಿ ಲೈಟ್‌ ಅಳವಡಿಸಬೇಕು. ಇಲ್ಲಿ ಬೆಳಕು ಮತ್ತು ನೆರಳು ಸಮಾನವಾಗಿ ಹಂಚಿಕೆಯಾಗಬೇಕು. ಇಲ್ಲಿ ಟ್ಯೂಬ್‌ಲೈಟ್‌ಗಳನ್ನು ಬಳಸಬಹುದು. ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ದಾಸ್ತಾನು ಇರಿಸುವ ಜಾಗ ಪ್ರಕಾಶಮಾನವಾಗಿರಲಿ.

ಬಾತ್‌ ರೂಮ್‌

ಬಾತ್‌ ರೂಮ್‌ನ ಎಲ್ಲ ಕಡೆ ಬೆಳಕು ಹರಡುವಂತಿರಬೇಕು. ಮಂದ ಬೆಳಕು ಬೀರಲು ಕಡಿಮೆ ವ್ಯಾಟ್‌ನ ಬಲ್ಬ್ ಬಳಸಬಹುದು. ಸೋಪ್‌, ಪೇಸ್ಟ್‌, ಬ್ರಷ್‌ ಮುಂತಾದ ವಸ್ತುಗಳನ್ನು ಇರಿಸುವ ಸ್ಥಳಗಳ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಿ. ಅಪಾಯಗಳನ್ನು ತಪ್ಪಿಸಲು ಟಬ್ ಅಥವಾ ಶವರ್ ಮೇಲಿನ ಲೈಟ್‌ಗಳು ನೀರು ಮತ್ತು ಆವಿ-ನಿರೋಧಕ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ವಾಸ್ತು ಪ್ರಕಾರ ಲೈಟ್‌ ಅಳವಡಿಕೆಯ ಸಾಮಾನ್ಯ ನಿಯಮಗಳು

  • ಲೈಟ್‌ ಉತ್ತರ ಮತ್ತು ಪೂರ್ವ ಗೋಡೆಗಳ ಮೇಲಿರಿಸುವುದು ಸಕಾರಾತ್ಮಕತೆಯ ಸಂಕೇತ.
  • ಯಾವುದೇ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಲೈಟ್‌ ಅಳವಡಿಸಬೇಡಿ. ಇದನ್ನು ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ.
  • ದಕ್ಷಿಣ ಭಾಗದಲ್ಲಿ ಪ್ರಕಾಶಮಾನವಾದ ದೀಪಗಳನ್ನು ಇರಿಸಿ. ಇದರಿಂದ ವೃತ್ತಿ ಜೀವನದಲ್ಲಿ ಏಳಿಗೆ ಕಾಣಬಹುದು.
  • ದೇವರ ಕೋಣೆ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಲು ಬಿಳಿ ಬಣ್ಣದ ಬೆಳಕನ್ನು ಬಳಸಿ
  • ಮುಖ್ಯ ಬಾಗಿಲಿಗೆ ಹೋಗುವ ದಾರಿ ಸಾಕಷ್ಟು ಪ್ರಕಾಶಮಾನವಾಗಿರಬೇಕು.
  • ಮೆಟ್ಟಿಲು ಇಳಿಯುವ ಸ್ಥಳದಲ್ಲಿಯೂ ಪ್ರಕಾಶಮಾನವಾದ ದೀಪಗಳನ್ನು ಅಳವಡಿಸಿ. ಇದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಅದೃಷ್ಟದ ಬಾಗಿಲು ತೆರೆಯಲು ಈ ಟಿಪ್ಸ್‌ ಫಾಲೋ ಮಾಡುವುದನ್ನು ಮರೆಯಬೇಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Hindu Temples : ದೇಗುಲದ ಹಣ ಚರ್ಚ್‌, ಮಸೀದಿಗೆ ಹೋಗ್ತಿದೆ ಎನ್ನೋದು ಸುಳ್ಳು; ಅರ್ಚಕರ ಸಂಘ

Hindu Temples : ಹಿಂದು ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣ ನಿಜಕ್ಕೂ ಮಸೀದಿ ಮತ್ತು ಚರ್ಚ್‌ ಪಾಲಾಗುತ್ತಿದೆಯಾ? ಹೊಸ ದೇಗುಲ ವಿಧೇಯಕ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆಯಾ? ಇದಕ್ಕೆ ಅರ್ಚಕರು ಏನಂತಾರೆ?

VISTARANEWS.COM


on

Hindu temple Pooja
Koo

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Budget Session) ಮಂಡನೆಯಾದ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕವನ್ನು (Hindu Religious institutes and Endoment Act 2024) ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಕೂಟ (BJP-JDS Coalition) ನಾನಾ ಕಾರಣಗಳನ್ನು ನೀಡಿ ವಿರೋಧಿಸುತ್ತಿರುವ ನಡುವೆಯೇ ರಾಜ್ಯದ ದೇವಾಲಯಗಳ (Hindu Temples) ಅರ್ಚಕರ ಸಂಘ (Priests Association) ಸರ್ಕಾರದ ರಕ್ಷಣೆಗೆ ಬಂದಿದೆ. ಅರ್ಚಕರ ಸಂಘದ ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಮೇಲೆ ಬಿಜೆಪಿ ನಡೆಸುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಅರ್ಚಕರು ವಾದಿಸಿದರು. ಜತೆಗೆ ಪ್ರತಿಯೊಬ್ಬ ಬಿಜೆಪಿ ನಾಯಕರಿಗೂ ಸುಳ್ಳು ಪ್ರಚಾರ ಮಾಡದಂತೆ ಮನವಿ ಮಾಡುವುದಾಗಿ ಹೇಳಿದರು.

ಮುಖ್ಯವಾಗಿ ಹಿಂದೂ ದೇವಾಲಯಗಳ ಹುಂಡಿ ಹಣ ಮಸೀದಿ ಮತ್ತು ಚರ್ಚ್‌ಗಳಿಗೆ ಹೋಗುತ್ತಿದೆ ಎಂಬ ಆರೋಪವನ್ನು ಅರ್ಚಕರ ಸಂಘ ಅಲ್ಲಗಳೆದಿದೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಕರ್ನಾಟಕ ಧಾರ್ಮಿಕ ದೇವಾಲಯಗಳ ಅರ್ಚಕರು, ನಮ್ಮ ರಾಜ್ಯದ ಎ, ಬಿ, ಸಿ ದರ್ಜೆಯ ದೇವಾಲಯಗಳ ಹುಂಡಿ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಆಗುತ್ತಿಲ್ಲ. ನಮ್ಮ ದೇವಾಲಯದ ಹಣ ರಾಜ್ಯ ಸರ್ಕಾರ ಒಳ್ಳೆಯ ಕೆಲಸಕ್ಕೆ ಉಪಯೋಗ ಆಗುತ್ತಿದೆ. ದೇವಾಲಯಗಳ ಹಣ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಮಾತನಾಡಿ, ರಾಜ್ಯದ ಎ ದರ್ಜೆಯ ದೇವಸ್ಥಾನಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಎ ದರ್ಜೆ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅದನ್ನು ಸಹಿಸಲಾಗದ ರೀತಿ ಬಿಜೆಪಿ ನಾಯಕರು ಚರ್ಚ್, ಮಸೀದಿಗಳಿಗೆ ಹಣ ಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಬಿಜೆಪಿಯವರೇ ದಯವಿಟ್ಟು ಅಪಪ್ರಚಾರ ಮಾಡುವುದನ್ನು ಬಿಡಿ ಎಂದು ಮನವಿ ಮಾಡಿದರು.

Hindu Temples priests

ಇದನ್ನೂ ಓದಿ : Hindu Temples : ಇನ್ನು ದೇವಾಲಯ ಆದಾಯದ 10% ಹಣ ಸರ್ಕಾರಕ್ಕೆ; ಹಿಂದೆ ಎಷ್ಟಿತ್ತು?

ಮನೆಗೆ ಹೋಗಿ ಕಾಲಿಗೆ ಬಿದ್ದು ಮನವಿ ಮಾಡುತ್ತೇವೆ ಎಂದ ಅರ್ಚಕರು

ನಾವು ಈ ವಿಚಾರದಲ್ಲಿ ಪ್ರತಿಭಟನೆ ಮಾಡುವುದಿಲ್ಲ. ನೇರವಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿಯೇ ಮನವಿ ಮಾಡಿಕೊಳ್ಳುತ್ತೇವೆ. ನಾವು ಪ್ರತಿ ಬಿಜೆಪಿಯವರ ಮನೆಗೆ ಹೋಗಿ ಮನವಿ ಪತ್ರಗಳನ್ನ ಕೊಟ್ಟು ಕಾಲಿಗೆ ಬಿದ್ದು ವಿರೋಧ ಮಾಡಬೇಡಿ ಅಂತ ಕೇಳಿ ಕೊಳ್ಳುತ್ತೇವೆ. ಇದು ಸರಿಯಲ್ಲ ಅನ್ನೋದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಎಸ್ ದೀಕ್ಷಿತ್ ಹೇಳಿದರು.

ಹೊಸ ಧರ್ಮಾದಾಯ ವಿಧೇಯಕದಲ್ಲಿ ಏನಿದೆ?

ಹಿಂದೆ 25 ಲಕ್ಷ ರೂ. ಒಳಗೆ ಆದಾಯ ಇರುವ ದೇವಸ್ಥಾನಗಳು ಶೇಕಡಾ ಐದರಷ್ಟು ಆದಾಯವನ್ನು ರಾಜ್ಯ ಸರ್ಕಾದ ಧಾರ್ಮಿಕ ಪರಿಷತ್‌ಗೆ ನೀಡಬೇಕಾಗಿತ್ತು. ಆದರೆ ಈಗ ಒಂದು ಕೋಟಿ ರೂ.ವರೆಗಿನ ಆದಾಯವಿದ್ದರೂ ಶೇ. 5ರಷ್ಟು ಪಾಲನ್ನು ಧಾರ್ಮಿಕ ಪರಿಷತ್‌ಗೆ ನೀಡಿದರೆ ಸಾಕು.

ಹಿಂದೆ 25 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದ ದೇಗುಲಗಳ ಆದಾಯದ ಶೇ. 10ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕಾಗಿತ್ತು. ಈಗ ಈ ಮಿತಿಯನ್ನು ಒಂದು ಕೋಟಿಗೆ ಏರಿಸಲಾಗಿದೆ. ಅಂದರೆ ಒಂದು ಕೋಟಿ ರೂ. ಆದಾಯ ಹೊಂದಿದ ಶ್ರೀಮಂತ ದೇಗುಲಗಳು ಮಾತ್ರ ಶೇ. 10 ಆದಾಯ ನೀಡಿದರೆ ಸಾಕಾಗುತ್ತದೆ.

ಸರ್ಕಾರದ ಈ ವಿಧೇಯಕದ ಬಗ್ಗೆ ಸಾಕಷ್ಟು ಅಪಪ್ರಚಾರಗಳು ನಡೆಯುತ್ತಿವೆ. ದೇವಾಲಯಗಳಿಂದ ಶೇಕಡಾವಾರು ಹಣ ಪಡೆಯುವ ಮಿತಿಯನ್ನು ಏರಿಸಿದ್ದರೂ ಪಡೆಯುವ ಹಣದ ಮೊತ್ತವನ್ನೇ ಹೆಚ್ಚಿಸಲಾಗಿದೆ ಎಂದು ಪ್ರಚಾರ ಮಾಡಲಾಗಿದೆ. ಸಿದ್ದರಾಮಯ್ಯ ಅವರನ್ನು ಕನ್ನ ರಾಮಯ್ಯ ಎಂದೆಲ್ಲ ಅವಹೇಳನ ಮಾಡಲಾಗಿದೆ.

ಈ ಕಾರಣಕ್ಕಾಗಿ ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸಲು ಅರ್ಚಕರ ಸಂಘ ಪತ್ರಿಕಾಗೋಷ್ಠಿ ನಡೆಸಿದೆ.

Continue Reading

ರಾಮ ಮಂದಿರ

Ram Mandir: 25 ಕೆಜಿ ಬೆಳ್ಳಿ, 10 ಕೆಜಿ ಚಿನ್ನ; 1 ತಿಂಗಳಿನಲ್ಲಿ ರಾಮ ಮಂದಿರದಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ರೂ.?

Ram Mandir: ಅಯೋಧ್ಯೆ ರಾಮ ಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಿ ಒಂದು ತಿಂಗಳು ಕಳೆದಿದ್ದು, ಇದುವರೆಗೆ 25 ಕೋಟಿ ರೂ.ಗಿಂತ ಅಧಿಕ ನಗದು ಸಂಗ್ರವಾಗಿದೆ. ಜತೆಗೆ ಭಕ್ತರು ಚಿನ್ನ, ಬೆಳ್ಳಿಯನ್ನೂ ರಾಮನಿಗೆ ಅರ್ಪಿಸಿದ್ದಾರೆ.

VISTARANEWS.COM


on

rama
Koo

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ (Ram Mandir) ಬಾಲಕ ರಾಮ (Balak Ram) ವಿಗ್ರಹದ ಪ್ರಾಣ ಪ್ರತಿಷ್ಠೆ (Pran Prathistha) ನೆರವೇರಿದೆ. ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಈ ಸಮಾರಂಭ ನಡೆದಿದೆ. ಅದಾದ ಬಳಿಕ ಜನವರಿ 23ರಿಂದ ಈ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲಕ ರಾಮನ ದರ್ಶನ ಮಾಡುತ್ತಿದ್ದಾರೆ. ರಾಮ ಮಂದಿರ ಸಾವರ್ಜನಿಕ ಭೇಟಿಗೆ ಮುಕ್ತವಾಗಿ ಇದೀಗ ಸುಮಾರು ಇಂದು ತಿಂಗಳು ಕಳೆದಿದ್ದು ಕೋಟ್ಯಂತರ ರೂ. ಮೌಲ್ಯದ ಕಾಣಿಕೆ ಸಂದಾಯವಾಗಿದೆ.

ಒಂದು ತಿಂಗಳಲ್ಲಿ ಸಂಗ್ರಹವಾಗಿದ್ದು ಎಷ್ಟು?

ಚಿನ್ನ, ಬೆಳ್ಳಿ ಸೇರಿದಂತೆ ಅತ್ಯಮೂಲ್ಯ ಕೊಡುಗೆಗಳನ್ನು ಭಕ್ತರು ರಾಮನಿಗೆ ಅರ್ಪಿಸಿದ್ದಾರೆ. 1 ತಿಂಗಳ ಅವಧಿಯಲ್ಲಿ 60 ಲಕ್ಷಕ್ಕೂ ಅಧಿಕ ಭಕ್ತರು ರಾಮಮಂದಿರಕ್ಕೆ ಭೇಟಿ ನೀಡಿದ್ದು, ಒಟ್ಟು 25 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನದ ಆವರಣದಲ್ಲಿ ಅಳವಡಿಸಿರುವ ಕಾಣಿಕೆ ಪೆಟ್ಟಿಗೆ ಹಾಗೂ ಕಾಣಿಕೆ ಕೌಂಟರ್‌ನಲ್ಲಿ ಈ ದೇಣಿಗೆಯನ್ನು ಸ್ವೀಕರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿ ನೀಡಿದ ಮಾಹಿತಿಯ ಪ್ರಕಾರ, ಭಕ್ತರು ಈ ಮೊತ್ತವನ್ನು ನಗದು, ಚೆಕ್ ಮತ್ತು ಡ್ರಾಫ್ಟ್ ಮೂಲಕ ನೀಡಿದ್ದಾರೆ. ವಿದೇಶಿ ಭಕ್ತರು ನೀಡಿರುವ ದೇಣಿಗೆಯ ಮೊತ್ತ ಈ ಲೆಕ್ಕಾಚಾರದಲ್ಲಿ ಸೇರಿಲ್ಲ.

25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನ

ನಗದಲ್ಲದೆ ರಾಮ ಭಕ್ತರು ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ರತ್ನಗಳನ್ನು ಸಹ ದಾನ ಮಾಡಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, 1 ತಿಂಗಳ ಅವಧಿಯಲ್ಲಿ ಸುಮಾರು 25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನವು ಕಾಣಿಕೆಯಾಗಿ ಬಂದಿದೆ. ಇದರಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಕಿರೀಟ, ಹಾರ, ಛತ್ರಿ, ರಥ, ಬಳೆಗಳು ಮತ್ತು ಕಾಲುಂಗುರಗಳು ಸೇರಿವೆ. ಜತೆಗೆ ಆಟಿಕೆಗಳು, ದೀಪಗಳು, ಧೂಪ ದ್ರವ್ಯದ ಸ್ಟ್ಯಾಂಡ್, ಬಿಲ್ಲು ಮತ್ತು ಬಾಣಗಳೂ ಕಾಣಿಕೆ ರೂಪದಲ್ಲಿ ರಾಮನಿಗೆ ಸಂದಾಯವಾಗಿದೆ. ಮಾತ್ರವಲ್ಲ ರಾಮಮಂದಿರಕ್ಕೆ ಭಕ್ತರು ಚಿನ್ನ ಮತ್ತು ಬೆಳ್ಳಿ ಪಾತ್ರೆಗಳನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ: Ayodhya Ram Mandir: ರಾಮ ಲಲ್ಲಾ ಹೆಸರು ಬದಲಾಯಿತು; ಇನ್ನಿವನು ʼಬಾಲಕ ರಾಮʼ

ಮಧ್ಯಾಹ್ನ ಬಿಡುವು

ಸದ್ಯ ರಾಮ ಮಂದಿರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಕ್ತರಿಗೆ ದೇವರ ದರ್ಶನ ಭಾಗ್ಯ ಲಭಿಸಲಿದೆ. ಆರಂಭದಲ್ಲಿ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು. ಬಳಿಕ ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ದರ್ಶನದ ಸಮಯವನ್ನು ಹೆಚ್ಚಿಸಲಾಗಿತ್ತು. ಈ ಮಧ್ಯೆ ಮಧ್ಯಾಹ್ನ 12:30ರಿಂದ 1:30ರ ವರೆಗೆ ಬಾಲಕ ರಾಮನಿಗೆ ವಿಶ್ರಾಂತಿ ಸಮಯವಾಗಿರುವುದರಿಂದ ಈ ವೇಳೆ ಭಕ್ತರಿಗೆ ದರ್ಶನ ಲಭಿಸುವುದಿಲ್ಲ. ʼʼಬಾಲಕ ರಾಮ ಐದು ವರ್ಷದ ಮಗುವಾಗಿದ್ದು, ಇಷ್ಟು ಗಂಟೆಗಳ ಕಾಲ ಎಚ್ಚರವಾಗಿರುವ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಮಧ್ಯಾಹ್ನ 12.30ರಿಂದ 1.30 ರವರೆಗೆ ರಾಮ ವಿಶ್ರಾಂತಿ ಪಡೆಯುತ್ತಾನೆ. ಹೀಗಾಗಿ ನಿತ್ಯ ಮಧ್ಯಾಹ್ನ ಒಂದು ಗಂಟೆ ದೇಗುಲದ ಬಾಗಿಲು ಮುಚ್ಚಲಿದೆʼʼ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಇತ್ತೀಚೆಗೆ ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಲಬುರಗಿ

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Forced Conversion : ಸಚಿವ ಪ್ರಿಯಾಂಕ್‌ ಖರ್ಗೆ ತವರಲ್ಲೇ ಹಿಂದೂಗಳ ಮತಾಂತರದ ಆರೋಪ ಕೇಳಿ ಬಂದಿದೆ. ಆರೋಗ್ಯ ಕೇಂದ್ರದ ಸಾಫ್ಟ್‌ ನರ್ಸ್‌ಗಳಿಂದಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಹಿಂದೂಗಳ ಪ್ರಚೋದಿಸುತ್ತಿದ್ದಾರೆ.

VISTARANEWS.COM


on

By

Staff nurses attempt to convert at health centre in Ratagal village
ಅಶ್ವಿನಿ ಹಾಗೂ ರಾಧಿಕಾ ಎಂಬುವವರು ಮತಾಂತರ ದಂಧೆ
Koo

ಕಲಬುರಗಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಗಲ್ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ (Forced Conversion) ಕೆಲಸ ಮಾಡುವ ಸ್ಟಾಫ್‌ ನರ್ಸ್‌ಗಳಿಂದ ಮತಾಂತರಕ್ಕೆ ಯತ್ನಿಸಿರುತ್ತಿರುವ (Conversion Attempt) ಗಂಭೀರ ಆರೋಪ ಎದುರಾಗಿದೆ.

ಅಶ್ವಿನಿ ಹಾಗೂ ರಾಧಿಕಾ ಎಂಬುವವರು ಮತಾಂತರ ದಂಧೆ ನಡೆಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಬರುವವರನ್ನೇ ಟಾರ್ಗೆಟ್‌ ಮಾಡುವ ಇವರಿಬ್ಬರು ಹಿಂದೂಗಳ ಮೇಲೆ ಕ್ರೈಸ್ತ ಧರ್ಮವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನೂ ಓದಿ: Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತವರಿನಲ್ಲೇ ಮತಾಂತರ ನಡೆಯುತ್ತಿದೆ. ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆದರೆ 1 ಲಕ್ಷ ರೂ. ಹಣ ನೀಡುವುದಾಗಿ ಜನರಿಗೆ ಆಮಿಷವೊಡ್ಡಿದ್ದಾರೆ. ಹಣದ ಆಮಿಷ, ಅನಾರೋಗ್ಯ, ಬಡತನಗಳನ್ನೇ ದಾಳವಾಗಿಸಿಕೊಂಡು ಮತಾಂತರ ಮಾಡುತ್ತಿದ್ದಾರೆ.

ಆರೋಗ್ಯ ಕೇಂದ್ರದಲ್ಲೇ ಬೈಬಲ್ ಓದಿಸುವ ಮೂಲಕ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ. ಸದ್ಯ ಮತಾಂತರಕ್ಕೆ ಸಿಟ್ಟಾಗಿರುವ ಸ್ಥಳೀಯರು ಕೂಡಲೇ ಇವರನ್ನು ಆಸ್ಪತ್ರೆಯಿಂದ ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ರಟಗಲ್ ಪೊಲೀಸ್ ಠಾಣೆಯಲ್ಲಿ ಮತಾಂತರ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ರಟಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Hindu Temples : ಇನ್ನು ದೇವಾಲಯ ಆದಾಯದ 10% ಹಣ ಸರ್ಕಾರಕ್ಕೆ; ಹಿಂದೆ ಎಷ್ಟಿತ್ತು?

Hindu Temples : ರಾಜ್ಯದ ದೇವಾಲಯಗಳ ಆದಾಯದಲ್ಲಿ 10 ಶೇಕಡಾವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂಬ ಆಪಾದನೆ ಇದೆ. ಹಾಗಿದ್ದರೆ ಹಿಂದೆ ಎಷ್ಟಿತ್ತು. ಕಿತ್ತುಕೊಂಡ ಆಪಾದನೆ ನಿಜವೇ?

VISTARANEWS.COM


on

Hindu Temples in Karnataka
Koo

ಬೆಂಗಳೂರು: ರಾಜ್ಯದಲ್ಲಿರುವ ದೇವಾಲಯಗಳ (Hindu Temples) ಹುಂಡಿಗೆ ಸರ್ಕಾರ ಕನ್ನ ಹಾಕಿದೆ. ಶ್ರೀಮಂತ ದೇವಾಲಯಗಳ ಆದಾಯದ ಶೇಕಡಾ 10ರಷ್ಟನ್ನು ಸರ್ಕಾರವೇ (State Government) ನುಂಗಿ ಹಾಕಲು ಹುನ್ನಾರ ನಡೆಸಿದೆ. ಇದು ಬುಧವಾರ ಮಂಡನೆಯಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024ರಲ್ಲಿ (Karnataka Hindu religous and Charitable Endoment act 2024) ಸ್ಪಷ್ಟವಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಆದರೆ, ಸರ್ಕಾರ ಈ ಆಪಾದನೆಯನ್ನು ಅಲ್ಲಗಳೆದಿದೆ. ಹೊಸ ವಿಧೇಯಕದಲ್ಲಿ ದೇಗುಲಗಳಿಂದ ಹಣ ಸಂಗ್ರಹಿಸುವ ಆದಾಯ ಮಿತಿಯನ್ನೇ ಹೆಚ್ಚಿಸಲಾಗಿದೆ. ಇದರಿಂದ ದೇವಾಲಯಗಳಿಗೆ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದೆ.

ಅಂಗೀಕಾರವಾಗಿರುವ ವಿಧೇಯಕದಲ್ಲಿರುವ ಅಂಶಗಳೇನು?

1. ಒಂದು ಕೋಟಿಗಿಂತ ಹೆಚ್ಚು ಆದಾಯ ಇರುವ ದೇವಸ್ಥಾನಗಳ ನಿವ್ವಳ ಆದಾಯದ ಶೇಕಡಾ 10ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು.

2. ಒಂದು ಕೋಟಿಗಿಂತ ಕಡಿಮೆ ಆದಾಯ ಇರುವ ದೇವಾಲಯಗಳ ನಿವ್ವಳ ಆದಾಯದ ಶೇ. 5ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು.

ಅಂದರೆ ಒಂದು ದೇವಸ್ಥಾನದ ಆದಾಯ 1 ಕೋಟಿ ರೂ.‌ ಒಳಗೆ ಇದ್ದರೆ ಆ ದೇವಸ್ಥಾನ ಧಾರ್ಮಿಕ ಪರಿಷತ್‌ ಶೇ. 5ರಷ್ಟು ಮೊತ್ತವನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು. ಆದಾಯ ಒಂದು ಕೋಟಿ ರೂ. ಮೀರಿದ್ದರೆ ಶೇ. 10‌ ಮೊತ್ತವನ್ನು ಪರಿಷತ್‌ಗೆ ನೀಡಬೇಕು.

ಹಾಗಿದ್ದರೆ ಈ ವಿಧೇಯಕ ಅಂಗೀಕಾರಕ್ಕೆ ಮೊದಲು ಹೇಗಿತ್ತು? ಆಗಿರುವ ಬದಲಾವಣೆ ಏನು?

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-1997ರ ಪ್ರಕಾರ, 10 ಲಕ್ಷ ರೂ. ಒಳಗೆ ಆದಾಯ ಇರುವ ದೇವಸ್ಥಾನಗಳು ಶೇಕಡಾ 5ರಷ್ಟು ಮೊತ್ತವನ್ನು ಮತ್ತು 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ ದೇವಾಲಯಗಳು ಶೇ. 10ರಷ್ಟು ಮೊತ್ತವನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕಾಗಿತ್ತು.

2011ರಲ್ಲಿ ತಿದ್ದುಪಡಿಗೆ ಒಳಗಾದ ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದಲ್ಲಿ ಈ ಮಿತಿಯನ್ನು‌ ಹೆಚ್ಚಿಸಲಾಯಿತು. ಇದರ ಪ್ರಕಾರ, 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಮತ್ತು 25 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ದೇವಾಲಯಗಳ ಆದಾಯ ಶೇ. 5ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು ಎಂದು ತಿಳಿಸಲಾಯಿತು.

ಇದನ್ನೂ ಓದಿ : Hindu Temple: ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಡಿ: ಸರ್ಕಾರಕ್ಕೆ ವಿಜಯೇಂದ್ರ ಸಲಹೆ

ಹೊಸದಾಗಿ ಮಾಡಿರುವ ತಿದ್ದುಪಡಿ ಏನು?

2011ರ ವಿಧೇಯಕದ ಪ್ರಕಾರ, 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್‌ ನಿಧಿಗೆ ಸಂಗ್ರಹಿಸುತ್ತಿದ್ದ ನಿಯಮಕ್ಕೆ ತಿದ್ದುಪಡಿ ತಂದು 1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ ಮಾತ್ರ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್‌ ನಿಧಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಹಿಂದೆ 25 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ದೇವಸ್ಥಾನಗಳಿಂದ ಶೇ. 5ರಷ್ಟು ಆದಾಯವನ್ನು ಧಾರ್ಮಿಕ ಪರಿಷತ್‌ ಸಂಗ್ರಹಿಸುತ್ತಿದ್ದರೆ ಈಗ ಒಂದು ಕೋಟಿವರೆಗೆ ಆದಾಯವಿದ್ದರೂ ಶೇ. 5ರಷ್ಟು ಮೊತ್ತವನ್ನು ಮಾತ್ರ ಸರ್ಕಾರಕ್ಕೆ ನೀಡಬೇಕಾಗಿದೆ.

ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡುವ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ ಮಾಹಿತಿ ಹೀಗಿದೆ.

ಈವರೆಗೆ ಯಾವ ಸಂಸ್ಥೆಗಳ ಆದಾಯವು 25 ಲಕ್ಷಕ್ಕಿಂತ ಹೆಚ್ಚಿದೆಯೋ ಅವುಗಳ ಆದಾಯದ ಶೇ.10 ರಷ್ಟು ಹಾಗೂ 25 ಲಕ್ಷಕ್ಕಿಂತ ಕಡಿಮೆ ಇರುವ ಸಂಸ್ಥೆಗಳ ಆದಾಯದಿಂದ ಶೇ.5 ರಷ್ಟನ್ನು ಧಾರ್ಮಿಕ ಪರಿಷತ್‌ಗೆ ಸಂಗ್ರಹಿಸಲಾಗುತ್ತಿತ್ತು. ಇದೀಗ ಈ ನಿಯಮವನ್ನು ತಿದ್ದುಪಡಿ ಮಾಡಿ 10 ಲಕ್ಷದಿಂದ 1 ಕೋಟಿ ರು.ವರೆಗೆ ಆದಾಯವುಳ್ಳ ಸಂಸ್ಥೆಗಳಿಂದ ಕೇವಲ ಶೇ.5 ರಷ್ಟು ಸಂಗ್ರಹಿಸುವುದು. 1 ಕೋಟಿ ರು.ಗೂ ಹೆಚ್ಚು ಆದಾಯ ಇರುವ ಸಂಸ್ಥೆಗಳಿಂದ ಶೇ.10 ರಷ್ಟು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.

Continue Reading
Advertisement
Nitasha Kaul
ದೇಶ24 seconds ago

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Namma Metro Farmer dismiss
ಬೆಂಗಳೂರು9 mins ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

Rajya Sabha Elections Yogendra appointed as KRPP agent Reddy supports to Congress
ರಾಜಕೀಯ13 mins ago

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

Actor Darshan rally police deny permission
ಸ್ಯಾಂಡಲ್ ವುಡ್26 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು32 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ44 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ46 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ54 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ57 mins ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ1 hour ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌