Site icon Vistara News

ಚರಂಡಿ ನೀರು ಹರಿವಿನ ವಿಚಾರದಲ್ಲಿ ಕುಟುಂಬಗಳ ಫೈಟ್: ಯುವಕ ದಾರುಣ ಸಾವು

young man murder

#image_title

ತುಮಕೂರು: ಜಾಗದ ವಿಚಾರದಲ್ಲಿ ಅಕ್ಕ ಪಕ್ಕದ ಜಮೀನು ಮಾಲೀಕರು, ಕುಟುಂಬಗಳ ಒಳಗಿನ ಸಣ್ಣಪುಟ್ಟ ವೈಮನಸ್ಸುಗಳು ಇತ್ತೀಚೆಗೆ ದೊಡ್ಡ ಮಟ್ಟದ ಮಾರಾಮಾರಿಗೆ (family fight) ಕಾರಣವಾಗುತ್ತಿವೆ. ಜನರು ಬಡಿಗೆ ಎತ್ತಿಕೊಂಡು, ಕತ್ತಿ ಚೂರಿ ಹಿಡಿದುಕೊಂಡು ಹೊಡೆದಾಡಲು ಮುಂದಾಗುತ್ತಿರುವ ವಿದ್ಯಮಾನಗಳು ಅಲ್ಲಲ್ಲಿ ನಡೆಯುತ್ತಿವೆ. ಅಂಥಹುದೇ ಒಂದು ಹೊಡೆದಾಟ ತುಮಕೂರಿನಲ್ಲಿ ನಡೆದಿದ್ದು ಯುವಕನೊಬ್ಬ ದಾರುಣವಾಗಿ (young man death) ಪ್ರಾಣ ಕಳೆದುಕೊಂಡಿದ್ದಾನೆ.

ಚರಂಡಿ‌ ನೀರು ಹರಿದುಹೋಗುವ ವಿಚಾರದಲ್ಲಿ ಎರಡು ಕುಟುಂಬದ ನಡುವೆ ಹುಟ್ಟಿಕೊಂಡ ಜಗಳ ಹೊಡೆದಾಟಕ್ಕೆ ತಿರುಗಿದ್ದು, ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕ ಈಗ ಮೃತಪಟ್ಟಿದ್ದಾನೆ.

ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ಯುವಕನನ್ನು ವಸಂತಕುಮಾರ್‌ (24) ಎಂದು ಗುರುತಿಸಲಾಗಿದೆ.

ಶಿವಬಸವಯ್ಯ ಮತ್ತು ಬಸವಲಿಂಗಯ್ಯರ ಕುಟುಂಬದ ನಡುವೆ ನಡೆದ ಗಲಾಟೆ ನಡೆದಿತ್ತು. ಬಸವಲಿಂಗಯ್ಯ ಕುಟುಂಬ ಶಿವಬಸವಯ್ಯರ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ ಶಿವಬಸವಯ್ಯರ ಪುತ್ರ ವಸಂತಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಅವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಬಸವಲಿಂಗಯ್ಯ, ಕುಮಾರ್, ವಿಜಯ್‌ ಸೇರಿದಂತೆ ಒಟ್ಟು 8 ಜನರ ವಿರುದ್ದ ದೂರು ದಾಖಲಾಗಿದೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಲಾರಿ ಹರಿದು ವೃದ್ದೆ ಸಾವು

ಬೆಂಗಳೂರು: ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಂಗೇರಿಯ ವಿದ್ಯಾಪೀಠ ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಲಕ್ಷ್ಮಮ್ಮ (70) ಎಂಬವರು ಮೃತಪಟ್ಟಿದ್ದಾರೆ.

ಮೇ 26ರಂದು ಲಕ್ಷ್ಮಮ್ಮ ಅವರು ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದುದಲ್ಲದೆ, ಲಾರಿಯ ಚಕ್ರ ಆಕೆಯ ಕಾಲಿನ ಮೇಲೆ ಹರಿದಿತ್ತು. ಗಂಭೀರ ಗಾಯಗೊಂಡ ಲಕ್ಷ್ಮಮ್ಮ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೆಂಗೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : Uttara Kannada News : ಚಿನ್ನಾಭರಣ ಖರೀದಿ ಸೋಗಿನಲ್ಲಿ ಕಳ್ಳತನ; 3 ಚಾಲಾಕಿ ಮಹಿಳೆಯರ ಬಂಧನ

Exit mobile version