Site icon Vistara News

Tumkur News: ರೈತರ ಮಕ್ಕಳಿಗೆ ಹೆಣ್ಣು ಕೊಡಿಸಿ: ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ರೈತ!

Farmer memorandum letter in Janata Darshan programme

ಶಿರಾ: ರೈತರ (Farmers) ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ, ರೈತರ ಮಕ್ಕಳು ಮದುವೆಯಾಗುವುದು ಬೇಡವೇ? ನಮಗೆ ಸೂಕ್ತ ರೀತಿಯ ನ್ಯಾಯ ಒದಗಿಸಿ ಎಂದು ರೈತರೊಬ್ಬರು ಶಿರಾ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಶನಿವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ (Janata Darshan programme) ಅರ್ಜಿ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ, ನಮ್ಮ ರೈತ ಮಕ್ಕಳಿಗೆ ಮದುವೆ ಮಾಡಿಸಿ, ಓದಿದವರಿಗೆ, ಕೆಲಸ ಇದ್ದವರಿಗೆ ಮಾತ್ರ ಹೆಣ್ಣು ಕೊಡುತ್ತಾರೆ. ರೈತರ ಮಕ್ಕಳಿಗೆ ಜೀವನ ಬೇಡವೇ, ರೈತರ ಮಕ್ಕಳು ಮದುವೆಯಾಗುವುದು ಬೇಡವೇ? ನಮಗೆ ಸೂಕ್ತ ರೀತಿಯ ನ್ಯಾಯ ಒದಗಿಸಿ ಎಂದು ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ರೈತ ಜಯರಾಮಪ್ಪ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: COVID Subvariant JN.1: ಕೊರೊನಾ ಲಕ್ಷಣ ಕಂಡು ಬಂದ್ರೆ ಕಡ್ಡಾಯ ಪರೀಕ್ಷೆ ಮಾಡಿಸಿ: ದಿನೇಶ್‌ ಗುಂಡೂರಾವ್‌

ನನ್ನ ಮೂವರು ಗಂಡು ಮಕ್ಕಳು ಎಸ್‌ಎಸ್‌ಎಲ್‌ಸಿವರೆಗೂ ವಿದ್ಯಾಭ್ಯಾಸ ಮಾಡಿದ್ದು, ವ್ಯವಸಾಯ ಮಾಡುತ್ತಿದ್ದಾರೆ. ಅವರ ಮದುವೆಗಾಗಿ ಕನ್ಯೆ ಹುಡುಕುತ್ತಿದ್ದೇವೆ. ಆದರೆ ಯಾರು ಕೇಳಿದರೂ ಯಾವ ಕೆಲಸದಲ್ಲಿದ್ದಾರೆ ಎಂದು ಕೇಳುತ್ತಾರೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸ ಕಡಿಮೆ ಇದೆ ಎನ್ನುತ್ತಾರೆ. ನಮಗೆ ಸೂಕ್ತ ರೀತಿಯ ನ್ಯಾಯ ಒದಗಿಸಿ ಎಂದು ತುಮಕೂರು ಜಿಲ್ಲಾಧಿಕಾರಿ ಅವರಿಗೆ ಬರೆದ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ರೈತ ಜಯರಾಮಪ್ಪ ಅವರ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Exit mobile version