ಕೊರಟಗೆರೆ: ತಾಲೂಕಿನ ಕೋಳಾಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ (PDO) ಎಚ್.ವಿ. ಕೋಮಲ ಅವರನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಆದೇಶದಂತೆ ತುಮಕೂರು ಜಿ.ಪಂ. ಸಿಇಒ ( ZP CEO) ಅವರ ಸೂಚನೆ ಮೇರೆಗೆ ಕೊರಟಗೆರೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಿ. ದೊಡ್ಡಸಿದ್ದಯ್ಯ ಬುಧವಾರ ಕರ್ತವ್ಯದಿಂದ ಅಮಾನತು (suspension) ಮಾಡಿದ್ದಾರೆ.
ಕೋಳಾಲ ಗ್ರಾ.ಪಂ. ಪಿಡಿಒ ಕೋಮಲ ಎಚ್.ವಿ. ಅವರನ್ನು 2023 ರ ಫೆ. 16 ರಂದು ಕರ್ತವ್ಯದಿಂದ ( ಅಮಾನತು )ಬಿಡುಗಡೆಗೊಳಿಸಲಾಗಿತ್ತು. ಮುಂದುವರೆದು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ 2023 ರ ಫೆ – 22 ರಂದು ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಕಾರಣ ಕೋಮಲ ಅವರನ್ನು ಮುಂದಿನ ಆದೇಶದವರೆಗೆ ಕೋಳಾಲ ಗ್ರಾಮ ಪಂಚಾಯಿತಿಯಲ್ಲಿ ಮುಂದುವರೆಯುವಂತೆ ಸೂಚಿಸಲಾಗಿತ್ತು.
ಇದನ್ನೂ ಓದಿ: Weather Report : ರಾಜ್ಯಾದ್ಯಂತ 5 ದಿನ ಮಿಂಚಿನ ಜತೆ ಹಗುರು ಮಳೆ!
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹಂಚಿಹಳ್ಳಿ ಗ್ರಾ.ಪಂ ಯ ಅಭಿವೃದ್ಧಿ ಅಧಿಕಾರಿಯ ಕಾರ್ಯಭಾರವನ್ನು ವಹಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಕೋಮಲ ಎಚ್.ವಿ ಅವರಿಗೆ ಸೂಚಿಸಲಾಗಿತ್ತು.
ಅಮಾನತ್ತಿನ ಆದೇಶಕ್ಕೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ ಆದೇಶದ ಹಿನ್ನೆಲೆಯಲ್ಲಿ 2023 ರ ಆ. 9 ರ ಬುಧವಾರದಂದು ಕೊರಟಗೆರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಿ.ದೊಡ್ಡಸಿದ್ದಯ್ಯ ರವರು ಎಚ್. ವಿ ಕೋಮಲ ಅವರನ್ನು ಅಮಾನತು ಮಾಡಿದ್ದಾರೆ.
ಇದನ್ನೂ ಓದಿIRCTC Scam Alert: ರೈಲ್ವೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂಬ ಲಿಂಕ್ ಬಂದಿದೆಯಾ? ಹುಷಾರ್ ಇದು ಫೇಕ್ ಲಿಂಕ್
ತೀತಾ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಎಂ. ಅವರು ಹೆಚ್ಚುವರಿಯಾಗಿ ಹಂಚಿಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹುದ್ದೆಯ ಕಾರ್ಯಭಾರವನ್ನು ಕೋಮಲ ಎಚ್.ವಿ ಅವರಿಂದ ವಹಿಸಿಕೊಂಡು ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದೆ.