ಹಾವೇರಿ: ಮಹಿಳೆಯೊಬ್ಬರು ಬರೋಬ್ಬರಿ 185 ಕೆ.ಜಿ. ತೂಕ ಹೊಂದಿದ್ದರು. ಇದರಿಂದಾಗಿ ಕರುಳು ಹಾಗೂ ಉಸಿರಾಟ ಸಮಸ್ಯೆಯಿಂದ (Tumor Operation) ನರಳುತ್ತಿದ್ದರು. ಹಲವಾರು ಆಸ್ಪತ್ರೆಗೆ ಅಲೆದಾಡಿದರೂ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಲಭಿಸಲಿಲ್ಲ. ಇನ್ನೇನು ಎಲ್ಲವೂ ಮುಗಿದು ಹೋಯಿತು ಎಂದು ಕೈ ಚೆಲ್ಲಿ ಕುಳಿತಿದ್ದವರ ಬದುಕಿಗೆ ಸರ್ಕಾರಿ ಆಸ್ಪತ್ರೆ ವೈದ್ಯರು ಬೆಳಕಾಗಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ 46 ವರ್ಷದ ಚಂದ್ರಮ್ಮ ಪುಟ್ಟಮ್ಮನವರು ಈಗ ಸಾವನ್ನು ಗೆದ್ದು ಬಂದಿದ್ದಾರೆ. ರಕ್ತಹೀನತೆ ಕಾರಣದಿಂದ ಉದರ ಭಾಗದಲ್ಲಿ ದೊಡ್ಡ ಗಡ್ಡೆ ಬೆಳೆದಿತ್ತು. ಮಣಿಪಾಲ್, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ.
ಕಳೆದ 3-4 ವರ್ಷಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚಂದ್ರಮ್ಮಗೆ ದಿಢೀರ್ ಉದರಬಾಧೆ ಕಾಣಿಸಿಕೊಂಡಿತ್ತು. ನವೆಂಬರ್ 16ರಂದು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಂದ್ರಮ್ಮ ದಾಖಲು ಮಾಡಲಾಗಿತ್ತು. ಹೊಟ್ಟೆಯೊಳಗೆ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರಗೆ ತೆಗೆಯಲಾಗಿದೆ. ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ನಿರಂಜನ ಬಣಕಾರ ನೇತೃತ್ವದ ತಂಡದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ವೈದ್ಯರ ತಂಡಕ್ಕೆ ಚಂದ್ರಮ್ಮನ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | RRR MOVIE | ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ಆರ್‌ಆರ್‌ಆರ್ ನಾಮನಿರ್ದೇಶನ