ಮಂತ್ರಾಲಯ: ಮಂತ್ರಾಲಯದ ರಾಯರ ಮಠದಲ್ಲಿ ತುಂಗಾರತಿ ಉತ್ಸವವು ಭಾನುವಾರ ತಡರಾತ್ರಿ ಶ್ರದ್ಧಾ ಭಕ್ತಿಯಿಂದ ನಡೆಯಿತು. (Mantralayam) ಕಾರ್ತಿಕ ಮಾಸದ ನಿಮಿತ್ತ ಪ್ರತಿವರ್ಷ ನಡೆಯುವ ತುಂಗಾರತಿ ಉತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿದ್ದರು.
ತುಂಗಭದ್ರಾ ನದಿ ತೀರದಲ್ಲಿ ರಾಯರ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆಪ್ಪೋತ್ಸವದಲ್ಲಿ ಭಾಗಿಯಾದರು. ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ತೆಪ್ಪೋತ್ಸವ ನಡೆಯಿತು. ಈ ಭಾರಿ ಬಹಳಷ್ಟು ವಿಜೃಂಭಣೆಯಿಂದ ಉತ್ಸವ ನಡೆಯಿತು.