ಮಂಡ್ಯ: ಇಲ್ಲಿನ ಶ್ರೀರಂಗಪಟ್ಟಣದಲ್ಲಿ ಸುರಂಗ ಮಾರ್ಗ (Tunnel Found) ಪತ್ತೆಯಾಗಿದೆ. ಪಟ್ಟಣದ ಜಾಮಿಯಾ ಮಸೀದಿ ಹಿಂಭಾಗದಲ್ಲಿ ಇರುವ ಖಾಲಿ ಜಾಗದಲ್ಲಿ ಸುರಂಗ ಮಾರ್ಗ ಪತ್ತೆಯಾಗಿದೆ. ಈ ಹಿಂದೆಯೂ ಕೂಡ ಶ್ರೀರಂಗಪಟ್ಟಣದ ಹಲವು ಕಡೆ ಸುರಂಗ ಮಾರ್ಗಗಳು ಪತ್ತೆಯಾಗಿದ್ದವು.
ಮಸೀದಿ ಹಿಂಭಾಗದಲ್ಲಿ ಕಟ್ಟಡ ಕಾಮಗಾರಿ ನಡೆಸುವ ವೇಳೆ ಸುರಂಗ ಮಾರ್ಗ ಪತ್ತೆಯಾಗಿದೆ. ಸುರಂಗ ಮಾರ್ಗ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಸುತ್ತಮುತ್ತಲಿನ ಜನರು ಸುರಂಗ ಮಾರ್ಗ ವೀಕ್ಷಣೆ ಮಾಡಲು ಮುಂದಾದರು.
ಬಳಿಕ ಜಾಗದ ಮಾಲೀಕರು ಕಲ್ಲಿನಿಂದ ಸುರಂಗ ಮಾರ್ಗವನ್ನು ಬಂದ್ ಮಾಡಿದ್ದಾರೆ ಎನ್ನಲಾಗಿದೆ.
ಹಿಂದಿನ ಕಾಲದಲ್ಲಿ ರಾಜರು ಸಂಕಷ್ಟದ ಸಮಯದಲ್ಲಿ ಈ ಸುರಂಗ ಮಾರ್ಗಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಸುರಂಗ ಮಾರ್ಗ ಪತ್ತೆಯಾದ ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಯಾರ ಕಾಲದಲ್ಲಿ ಈ ಸುರಂಗ ನಿರ್ಮಾಣವಾಗಿದೆ? ಯಾವ ಉದ್ದೇಶಕ್ಕೆ ನಿರ್ಮಿಸಲಾಗಿತ್ತು ಎಂಬ ಬಗ್ಗೆ ಗೊತ್ತಾಗಬೇಕಿದೆ.
ಇದನ್ನೂ ಓದಿ | ಗಡ್ಕರಿ ಅದ್ಭುತ ಎಂದಿದ್ದ ಹೊಸಪೇಟೆ ಸುರಂಗ ಮಾರ್ಗದಲ್ಲಿ ನೀರು ಸೋರಿಕೆ!