Site icon Vistara News

Price Rise : ಟೊಮೆಟೊ, ನೀರುಳ್ಳಿ ಬಳಿಕ ತೊಗರಿ ಬೇಳೆ ಬೆಲೆ ಏರಿಕೆಯ ಬಿಸಿ! ದರ ಎಷ್ಟಾಗಬಹುದು?

tur dal Price Rise

ಬೆಂಗಳೂರು: ಇತ್ತೀಚೆಗೆ ಟೊಮೆಟೊ ಬೆಲೆ ಗಗನಕ್ಕೆ ಹಾರಿದ್ದನ್ನು ನಾವೆಲ್ಲರೂ ಕಂಡಿದ್ದೇವೆ. ಇದೀಗ ಅದರ ಬೆನ್ನಲ್ಲೇ ಕರ್ನಾಟಕದಲ್ಲಿ ತೊಗರಿ ಬೇಳೆ ಬೆಲೆ ಗಗನಕ್ಕೆ ಏರುವ ಸಾಧ್ಯತೆ (Price Rise) ಹೆಚ್ಚಾಗಿದೆ. ರಾಜ್ಯದಲ್ಲಿ ಈಗಾಗಲೇ ತೊಗರಿ ಬೇಳೆ ಬೆಲೆ ಕೆಜಿಗೆ 160-170 ತಲುಪಿದ್ದು, ಇನ್ನು ಕೆಲ ದಿನಗಳಲ್ಲಿ ಅದು ಕೆಜಿಗೆ 200 ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಮಹಾರಾಷ್ಟ್ರದ ಕೆಲವು ಭಾಗ ಮತ್ತು ಕರ್ನಾಟಕದ ಕಲಬುರ್ಗಿ ಪ್ರದೇಶದಲ್ಲಿ ತೊಗರಿ ಬೇಳೆ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಬೆಳೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಅದರಿಂದಾಗಿ ರಾಜ್ಯದಲ್ಲಿ ತೊಗರಿ ಬೇಳೆಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಈ ಬಗ್ಗೆ ರಾಜ್ಯದ ಆಹಾರಧಾನ್ಯ ವ್ಯಾಪಾರಿ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಹಿರಿಯ ಉಪಾಧ್ಯಕ್ಷ ರಮೇಶ್ ಚಂದ್ರ ಲಹೋಟಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. “ನಾವು ಆಫ್ರಿಕಾದಿಂದ ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳಬಹುದು. ಆದರೆ ಈಗ ಅಲ್ಲಿಯೂ ಬೇಳೆ ರಫ್ತಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಮೊದಲು ಒಂದು ಟನ್‌ ಬೇಳೆಯನ್ನು 350 ಡಾಲರ್‌ (28,900 ರೂ.)ಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಅದರ ಬೆಲೆ 900 ಡಾಲರ್‌ (74,400 ರೂ.)ಗೆ ಏರಿದೆ. ಹಾಗಿದ್ದರೂ ಮಾರುಕಟ್ಟೆಯಲ್ಲಿ ಆಮದು ಮಾಡಿಕೊಳ್ಳಲಾದ ಬೇಳೆಗಿಂತ ಸ್ಥಳೀಯ ಬೇಳೆಗೇ ಬೆಲೆ ಜಾಸ್ತಿಯಿದೆ” ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್‌-ಜನವರಿ ಸಮಯದಲ್ಲಿ ತೊಗರಿ ಬೇಳೆಯ ಮತ್ತೊಂದು ಬೆಳೆ ಕೈಗೆ ಸಿಗಲಿದೆ. ಅಲ್ಲಿಯವರೆಗೆ ಬೆಲೆ ಏರಿಕೆ ಬಿಸಿ ಮುಂದುವರಿಯಲಿದೆ. ಸದ್ಯ ಮಳೆಯ ಕೊರತೆ ಉಂಟಾಗಿದೆ. ಇದೇ ರೀತಿಯಲ್ಲಿ ಮಳೆ ಕೊರತೆ ಮುಂದಾದರೆ ಈ ಬಾರಿಯ ಬೆಳೆಗೂ ಹಾನಿಯಾಗಲಿದ್ದು, ಮುಂದಿನ ವರ್ಷವೂ ತೊಗರಿ ಬೇಳೆ ಬೆಲೆ ಗಗನದಲ್ಲೇ ಇರಲಿದೆ ಎಂದು ಹೇಳಲಾಗಿದೆ.

Exit mobile version