Site icon Vistara News

Earthquake In Turkey: ಟರ್ಕಿ ಭೂಕಂಪದಲ್ಲಿ ಬೆಂಗಳೂರು ಮೂಲದ ಟೆಕ್ಕಿ ಸಾವು, ಅವಶೇಷಗಳ ಅಡಿಯಲ್ಲಿ ಶವ ಪತ್ತೆ

Turkey Earthquake

#image_title

ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಶತಮಾನದ ಭೂಕಂಪದ (Earthquake In Turkey) ತೀವ್ರತೆಗೆ ಮೃತರ ಸಂಖ್ಯೆ 25 ಸಾವಿರ ದಾಟಿದೆ. ಇನ್ನೂ ಅವಶೇಷಗಳ ಅಡಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ಹರಸಾಹಸಪಡುತ್ತಿದೆ. ಹೀಗೆ, ಭೂಕಂಪ ಸಂಭವಿಸಿದ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರಾಖಂಡದ ವ್ಯಕ್ತಿಯು ಮೃತಪಟ್ಟಿದ್ದು, ಅವಶೇಷಗಳ ಅಡಿಯಲ್ಲಿ ಶವ ಪತ್ತೆಯಾಗಿದೆ.

ಬ್ಯುಸಿನೆಸ್‌ ಟ್ರಿಪ್‌ಗಾಗಿ ಟರ್ಕಿಗೆ ತೆರಳಿದ್ದ ಉತ್ತರಾಖಂಡದ ನಿವಾಸಿ ವಿಜಯ್‌ ಕುಮಾರ್‌ (36) ಎಂಬುವರ ಶವವು ಟರ್ಕಿಯ ಮಾಲತ್ಯದಲ್ಲಿರುವ ಹೋಟೆಲ್‌ನ ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದೆ ಎಂದು ಟರ್ಕಿಯಲ್ಲಿರುವ ಭಾರತದ ರಾಯಭಾರ ಕಚೇರಿ ಮಾಹಿತಿ ನೀಡಿದೆ. ವಿಜಯ್‌ ಕುಮಾರ್‌ ಅವರು ಉತ್ತರಾಖಂಡದಲ್ಲಿರುವ ತಮ್ಮ ಮನೆಯಿಂದ ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಕಂಪನಿಗಾಗಿ ಮನೆಯಿಂದಲೇ ಕೆಲಸ (Work From Home) ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪದಲ್ಲಿ 25 ಸಾವಿರ ಜನ ಸಾವು, ಭಾರತೀಯರ ಸ್ಥಿತಿ ಏನು? ರಾಯಭಾರಿಗಳು ಹೇಳುವುದೇನು?

“ವಿಜಯ್‌ ಕುಮಾರ್‌ ಅವರ ಕುಟುಂಬಸ್ಥರು ಶವವನ್ನು ಗುರುತಿಸಿದ್ದಾರೆ. ಸತತ ಕಾರ್ಯಾಚರಣೆ ಮೂಲಕ ಅವರ ಶವ ಹೊರತೆಗೆಯಲಾಗಿದೆ. ಕೂಡಲೇ ಮೃತದೇಹವನ್ನು ಭಾರತಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತದೆ” ಎಂದು ತಿಳಿಸಿದೆ. ಟರ್ಕಿಯಲ್ಲಿ ಭಾರತದ 3 ಸಾವಿರ ಜನ ವಾಸಿಸುತ್ತಿದ್ದು, ರಾಯಭಾರ ಕಚೇರಿಯು ಅವರನ್ನು ಸಂಪರ್ಕಿಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದೆ.

Exit mobile version