Site icon Vistara News

ಆನೇಕಲ್‌ ಕ್ವಾರಿಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರು ಪಾಲು; ದೂಧ್‌ಗಂಗಾದಲ್ಲಿ ಮುಳುಗಿ ಯುವಕ ಸಾವು

two boys are drowned in anekal

ಆನೇಕಲ್/ಬೆಳಗಾವಿ: ಪ್ರತ್ಯೇಕ ಕಡೆ ಈಜಲು ಹೋಗಿದ್ದ ಪ್ರಕರಣಕ್ಕೆ ಸಬಂಧಿಸಿದಂತೆ ಇಬ್ಬರು ಬಾಲಕರು ಹಾಗೂ ಒಬ್ಬ ಯುವಕ ನೀರು (Drowns) ಪಾಲಾಗಿದ್ದಾರೆ. ಆನೇಕಲ್ ತಾಲೂಕಿನ ಹುಲಿಮಂಗಲದ ಕ್ವಾರಿಯಲ್ಲಿ ಬಾಲಕರಿಬ್ಬರು ಮೃತಪಟ್ಟರೆ, ಸದಲಗಾ ಪಟ್ಟಣದ ಹೊರವಲಯದ ದೂಧ್‌ಗಂಗಾ ನದಿಯಲ್ಲಿ ಯುವಕನೊಬ್ಬ ನೀರುಪಾಲಾಗಿದ್ದಾನೆ.

ಆನೇಕಲ್ ತಾಲೂಕಿನ ಹುಲಿಮಂಗಲದ ಕ್ವಾರಿಯಲ್ಲಿ ಈಜಲು ಹೋಗಿದ್ದ ಹಾಸನ ಮೂಲದ ತೀರ್ತೇಶ್ (12) ಮತ್ತು ಫೈಸಲ್ ಖಾನ್ 14 ಮೃತಪಟ್ಟಿದ್ದಾರೆ. ಇವರು ಎಲೆಕ್ಟ್ರಾನಿಕ್ ಸಿಟಿ ಬಳಿಯ ಮಾರಗೊಂಡನ ಹಳ್ಳಿಯಲ್ಲಿ ವಾಸವಾಗಿದ್ದರು. ಮಂಗಳವಾರ ಸಂಜೆ 5 ಗಂಟೆಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಆದರೆ, ವಿಷಯ ತಡವಾಗಿ ಗೊತ್ತಾಗಿದ್ದು, ಮೃತ ದೇಹಗಳಿಗಾಗಿ ಶೊಧ ಕಾರ್ಯ ಮುಂದುವರಿದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಶೋಧ ನಡೆಸುತ್ತಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: snake catcher: ಹಾವು ಕಚ್ಚಿ ಮೃತಪಟ್ಟ ಸ್ನೇಕ್ ನರೇಶ್ ಮನೆ ಹಾವುಗಳ ಗೂಡು; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ನಾಗರಹಾವು!

ದೂಧ್‌ಗಂಗಾ ನದಿಯಲ್ಲಿ ಮುಳುಗಿ ಮೃತಪಟ್ಟ ಗಿರಗಾಂವ್ ಗ್ರಾಮದ ನಿವಾಸಿ ಸಾಗರ ದಿನಕರ್ ವಾಳಕೆ.

ನದಿಗೆ ಈಜಲು ತೆರಳಿದ್ದ ಯುವಕ ನೀರುಪಾಲು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ದೂಧ್‌ಗಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ. ಗಿರಗಾಂವ್ ಗ್ರಾಮದ ನಿವಾಸಿ ಸಾಗರ ದಿನಕರ್ ವಾಳಕೆ (22) ಮೃತ ಯುವಕ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದ ಪಾಪಿ ತಂದೆಗೆ ಶಿಕ್ಷೆ

ಆನೇಕಲ್: ಸ್ವಂತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದ ಪಾಪಿ ತಂದೆಗೆ ಶಿಕ್ಷೆ ಪ್ರಕಟವಾಗಿದೆ. ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ಹೊರಬಿದ್ದಿದ್ದು, ಅಪರಾಧಿ ರಾಮಾಂಜಿನಪ್ಪಗೆ 3 ವರ್ಷ ಸಜೆ, 10 ಸಾವಿರ ದಂಡವನ್ನು ವಿಧಿಸಿ ಆದೇಶಿಸಲಾಗಿದೆ.

ನ್ಯಾಯಾಧೀಶರಾದ ಪಿ.ವೆಂಕಟೇಶ್ ತೀರ್ಪು ನೀಡಿದ್ದು, ನೊಂದ ಬಾಲಕಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸಾಕ್ಷ್ಯ ಸಂಗ್ರಹಿಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ: Congress Guarantee: ನೀವು ಹೇಳಿದಂತೆ ಗ್ಯಾರಂಟಿ ಯೋಜನೆ ಜಾರಿ ಆಗೋಲ್ಲ: ಸಿಎಂ ಸಿದ್ದರಾಮಯ್ಯಗೆ ಆರ್ಥಿಕ ಇಲಾಖೆ ಖಡಕ್‌ ಮಾತು

ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್‌ ಈಗ ತೀರ್ಪು ಪ್ರಕಟಿಸಿದೆ. ರಾಮಾಂಜಿನಪ್ಪ ತನ್ನ ಸ್ವಂತ ಮಗಳ ಮೇಲೆಯೇ ಪೈಶಾಚಿಕ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 3 ವರ್ಷಗಳ ಕಾಲ ಸಜೆಯನ್ನು ವಿಧಿಸಿ ತೀರ್ಪು ನೀಡಿದೆ.

Exit mobile version