ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಜಟಾಪಟಿಯು (Sindhuri VS Roopa) ರಾಜ್ಯಾದ್ಯಂತ ಸುದ್ದಿಯಾಗಿ, ಈಗ ವಿವಾದ ತುಸು ತಣ್ಣಗಾರಿರುವ ಬೆನ್ನಲ್ಲೇ ಇವರಿಬ್ಬರ ಕುರಿತೂ ಸಿನಿಮಾಗಳು ಬರಲಿವೆ ಎಂದು ತಿಳಿದುಬಂದಿದೆ. ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ಅವರ ಬಗ್ಗೆ ಫಿಲಂ ಚೇಂಬರ್‌ನಲ್ಲಿ ಎರಡು ಸಿನಿಮಾ ಟೈಟಲ್‌ಗಳು ನೋಂದಣಿಯಾವಾಗಿವೆ. ಹಾಗಾಗಿ, ಇವರಿಬ್ಬರ ಬಗ್ಗೆ ಸಿನಿಮಾ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನಿತ್ಯಾನಂದ ಪ್ರಭು ಎಂಬುವರು R VS R ಎಂಬ ಟೈಟಲ್‌ಅನ್ನು ನೋಂದಣಿ ಮಾಡಿದ್ದಾರೆ. ಹಾಗೆಯೇ, ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರಿಂದ ಸಿಂಧೂರಿ ಐಎಎಸ್ ಎಂಬ ಟೈಟಲ್ ನೋಂದಣಿಯಾಗಿದೆ. ಈ ಕುರಿತು ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಡಿ.ರೂಪಾ ಅವರು ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಜತೆಗೆ ಅವರ ವಿರುದ್ಧ ಹಲವು ಆರೋಪ ಮಾಡಿದ್ದರು. ಇದಕ್ಕೆ ರೋಹಿಣಿ ಸಿಂಧೂರಿ ಅವರೂ ತಿರುಗೇಟು ನೀಡಿದ್ದರು. ಪ್ರಕರಣ ರಾಜ್ಯಾದ್ಯಾಂತ ಸುದ್ದಿಯಾದ ಬಳಿಕ ಸಿಂಧೂರಿ, ರೂಪಾ ಹಾಗೂ ರೂಪಾ ಪತಿ ಮನೀಶ್ ಮೌದ್ಗಿಲ್ ಅವರನ್ನು ಸರ್ಕಾರ ಯಾವುದೇ ಕಾರ್ಯಕ್ಷೇತ್ರ ನಿಗದಿಪಡಿಸದೆ ವರ್ಗಾವಣೆ ಮಾಡಿದೆ. ಪ್ರಕರಣದ ತನಿಖೆಗೂ ಆದೇಶಿಸಿದೆ.
ಇದನ್ನೂ ಓದಿ: Sindhuri vs Roopa : ಸಿವಿಲ್ ಸೇವಾ ನಿಯಮಾವಳಿ ಉಲ್ಲಂಘನೆ; ರೂಪಾ, ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ