Site icon Vistara News

Police atrocity : ಮೂಡಿಗೆರೆ‌ ಪೊಲೀಸರಿಂದ ಅಮಾಯಕನ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಸಿಬ್ಬಂದಿ ಸಸ್ಪೆಂಡ್‌

mudigere police

#image_title

ಚಿಕ್ಕಮಗಳೂರು: ಮೂಡಿಗೆರೆ‌ ಠಾಣೆಯಲ್ಲಿ ಅಮಾಯಕನ ಮೇಲೆ ಹಲ್ಲೆ ಮಾಡಲಾಗಿದೆ (Police atrocity) ಎಂಬ ದೂರು ಕೇಳಿಬಂದಿದ್ದು, ಇದರನ್ನು ಆಧರಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.

ದಾರದಹಳ್ಳಿ ನಿವಾಸಿ ಮಂಜು ಎಂಬುವವರ ಮೇಲೆ ಮೂಡಿಗೆರೆ ಪೊಲೀಸರು ಹಲ್ಲೆ ಮಾಡಿದ್ದರೆಂಬ ಆರೋಪವಿತ್ತು. ಇದೀಗ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ಗಳಾದ ವಸಂತ್, ಲೋಹಿತ್ ಅಮಾನತಾಗಿದ್ದಾರೆ. ಮೂಡಿಗೆರೆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆದರ್ಶ್ ವಿರುದ್ಧ ಇಲಾಖೆ ತನಿಖೆಗೆ ಆದೇಶವನ್ನೂ ನೀಡಲಾಗಿದೆ ಎಂದು ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ದಾರದಹಳ್ಳಿ ನಿವಾಸಿಯಾಗಿರುವ ಮಂಜುವನ್ನು ಮೇಲೆ ಕಳ್ಳತನದ ಆರೋಪದ ಮೇಲೆ ಠಾಣೆಗೆ ಕರೆ ತಂದಿದ್ದ ಪೊಲೀಸರು ಮನಸೋ ಇಚ್ಛೆ ಠಾಣೆಯಲ್ಲಿ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಮಂಜು ಪತ್ನಿ ಯಶೋಧ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್‌ಗೆ ದೂರು ನೀಡಿದ್ದರು.

ಗಂಭೀರವಾಗಿ ಹಲ್ಲೆಗೊಳಗಾದ ಮಂಜು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವಾಲಯದ ಹುಂಡಿ ಹಣ ಕಳ್ಳತನಕ್ಕೆ ಯತ್ನ, ಸಿಕ್ಕಿ ಬಿದ್ದ ಆರೋಪಿ

ಮಂಡ್ಯ: ದೇಗುಲದ ಹುಂಡಿ ಹಣ ಕದಿಯಲು ಬಂದು ಊರ ಜನರ ಕೈಗೆ ಆರೋಪಿ ಸಿಕ್ಕಿಬಿದ್ದ ಘಟನೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೋಟಿ ಬೆಟ್ಟ ಗ್ರಾಮದಲ್ಲಿ (Theft in temple) ನಡೆದಿದೆ.
ಇಲ್ಲಿನ ಪ್ರಸಿದ್ದ ಕಂಬದ ನರಸಿಂಹ ಸ್ವಾಮಿ ದೇಗುಲದಲ್ಲಿ ತಡರಾತ್ರಿ ಹುಂಡಿ ಹಣ ಕದಿಯಲು ಆರೋಪಿ ಬಂದಿದ್ದ.
ಹುಂಡಿ ಹಣ ಕದಿಯಲು ಕಿಟಕಿ ಸರಳು ಮುರಿದು ದೇಗುಲ ಪ್ರವೇಶಿಸಿದ್ದ. ಈ ವೇಳೆಗೆ ದೇಗುಲದ ಟ್ರಸ್ಟ್ ನ‌ ಸದಸ್ಯರಿಗೆ ದೇಗುಲದ ಸಿಸಿಟಿವಿ ಪರಿಶೀಲನೆ ವೇಳೆ ಕಳ್ಳ ಬಂದಿರುವುದು ಗೊತ್ತಾಗಿದೆ.
ದೇಗುಲದ ಸಿಸಿಟಿವಿ ಟ್ರಸ್ಟ್ ನ ಸದಸ್ಯರಿಗೆ ವೈಫೈ ಸಂಫರ್ಕದ ಮೂಲಕ ಮೊಬೈಲ್ ಗೆ ಲಿಂಕ್ ಆಗಿರುವುದರಿಂದ ಸಂದೇಶ ಸಿಕ್ಕಿತು. ದೇಗುಲಕ್ಕೆ ಬಂದು ಕಳ್ಳತನಕ್ಕೆ‌ ಯತ್ನಿಸಿದ ವ್ಯಕ್ತಿಗೆ ಗ್ರಾಮಸ್ಥರ‌ ಧರ್ಮಧೇಟು ಲಭಿಸಿತು. ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Communal harmony : ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು, ಅನಾಥೆಗೆ ಗೌರವದ ಅಂತ್ಯ ಸಂಸ್ಕಾರ

Exit mobile version