Site icon Vistara News

ಎಸ್.ಎಸ್. ಮಲ್ಲಿಕಾರ್ಜುನ ಫಾರ್ಮ್‌ ಹೌಸ್‌ನಲ್ಲಿ ಪತ್ತೆಯಾಗಿದ್ದ ಕಾಡು ಪ್ರಾಣಿಗಳಲ್ಲಿ ಎರಡು ಸಾವು

SS MALLIKARJUN

ದಾವಣಗೆರೆ: ತಾಲೂಕಿನ ಆನಗೋಡು ಬಳಿಯಿರುವ ಕಿರು ಮೃಗಾಲಯಕ್ಕೆ ಸ್ಥಳಾಂತರವಾಗಿದ್ದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಫಾರ್ಮ್‌ ಹೌಸ್‌ನಲ್ಲಿ ಪತ್ತೆಯಾಗಿದ್ದ ಕಾಡು ಪ್ರಾಣಿಗಳಲ್ಲಿ ಎರಡು ಪ್ರಾಣಿಗಳು ಮೃತಪಟ್ಟಿವೆ. ಒಂದು ಕೃಷ್ಣಮೃಗ ಮತ್ತು ಕಾಡು‌ಹಂದಿ‌ ಮೃತಪಟ್ಟಿವೆ.

ಜಿಂಕೆ‌, ಕೃಷ್ಣಮೃಗ ಸೇರಿ ವಿವಿಧ ಜಾತಿಯ ಪ್ರಾಣಿಗಳನ್ನು ಕಿರುಮೃಗಾಲಯಕ್ಕೆ ಬಿಡಲಾಗಿತ್ತು. ಅಲ್ಲದೆ, ಕೆಲವು ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ‌ ಬಿಡಲಾಗಿತ್ತು. ಅವುಗಳಲ್ಲಿ ಈಗ ೨ ಪ್ರಾಣಿಗಳು ಮೃತಪಟ್ಟಿವೆ.

ಡಿ.21 ರಂದು ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಅವರ ಫಾರ್ಮ್‌ ಹೌಸ್‌ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದ ವೇಳೆ ಪ್ರಾಣಿಗಳು ಪತ್ತೆಯಾಗಿದ್ದವು. ಬಳಿಕ ಇವುಗಳನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ನಂತರ ಕೋರ್ಟ್ ಸೂಚನೆ ಮೇರೆಗೆ ಕಿರುಮೃಗಾಲಯಕ್ಕೆ ಬಿಡಲಾಗಿತ್ತು.

ಆದರೀಗ ಅವುಗಳಲ್ಲಿ‌ ಕೃಷ್ಣಮೃಗ ಮತ್ತು ಒಂದು ಕಾಡು‌ ಹಂದಿ‌ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಮೃತ ಪ್ರಾಣಿಗಳ‌ ಕಳೇ‌ಬರವನ್ನು ವಿಲೇವಾರಿ ಮಾಡಲಾಗಿದೆ. ವಾತಾವರಣ ಬದಲಾವಣೆಯಾದ ಹಿನ್ನೆಲೆಯಲ್ಲಿ ಅವುಗಳು ಮೃತಪಟ್ಟಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Woman found dead | ವಿಕಲಚೇತನ ಮಹಿಳೆಯ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ

ಈ ಹಿನ್ನೆಲೆಯಲ್ಲಿ ಇನ್ನುಳಿದ ಪ್ರಾಣಿಗಳನ್ನು ಕಾಡಿಗೆ ಬಿಡಲು‌ ಅರಣ್ಯ ಇಲಾಖೆ ಮುಂದಾಗಿದ್ದು, ಅನುಮತಿ ಕೋರಿ ನ್ಯಾಯಾಲಯಕ್ಕೆ‌ ಅರ್ಜಿ ಸಲ್ಲಿಸಿದೆ. ಕೋರ್ಟ್ ಅನುಮತಿ ಸಿಕ್ಕರೆ ಇನ್ನುಳಿ‌ದ ಪ್ರಾಣಿಗಳು ಕಾಡು ಸೇರಲಿವೆ.

Exit mobile version