Site icon Vistara News

ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವು, ಜಮೀನು ಮಾಲೀಕ ವಶಕ್ಕೆ

ಕಾಡಾನೆಗಳು

ಶಿವಮೊಗ್ಗ: ವನ್ಯಜೀವಿ ವಲಯದ ಕಾಡಂಚಿನ ತೋಟದಲ್ಲಿ ಐಬೆಕ್ಸ್ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಗಂಡು ಕಾಡಾನೆಗಳು ಮೃತಪಟ್ಟಿವೆ. ಜಿಲ್ಲೆಯ ಶೆಟ್ಟಿಹಳ್ಳಿ ಕಾಡಿನ ಆನೆಸರದಲ್ಲಿ ದುರ್ಘಟನೆ ನಡೆದಿದೆ.

ಚನ್ನಹಳ್ಳಿಯ ಚಂದ್ರನಾಯಕ್ ಎಂಬುವರ ತೋಟದಲ್ಲಿ ಜೋಳದ ಬದುವಿನಂಚಿನಲ್ಲಿ ಅಳವಡಿಸಿದ್ದ ಹೈಬೆಕ್ಸ್ ಲೈನ್ (ವಿದ್ಯುತ್‌ ಬೇಲಿ) ಸ್ಪರ್ಶಿಸಿ ಎರಡು ಕಾಡಾನೆಗಳು ಮೃತಪಟ್ಟಿವೆ. ಭದ್ರಾ ವನ್ಯಜೀವಿ ವಲಯದಿಂದ ವಲಸೆ ಬಂದ ಏಳು ಕಾಡಾನೆಗಳು ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿದ್ದವು. ಇವು ಕಾಡಂಚಿನ ತೋಟದ ಸಮೀಪ ಬಂದಾಗ ವಿದ್ಯುತ್‌ ಸ್ಪರ್ಶಿಸಿ ಅವಘಡ ನಡೆದಿದೆ. ಆಯನೂರು ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಮೀನು ಮಾಲೀಕ ಚಂದ್ರನಾಯಕ್‌ನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Conversion | ಬಲವಂತದ ಮತಾಂತರಕ್ಕೆ ಯತ್ನ ಆರೋಪ, ಹುಬ್ಬಳ್ಳಿಯಲ್ಲಿ 11 ಜನರ ವಿರುದ್ಧ ಕೇಸ್‌ ದಾಖಲು

Exit mobile version