Site icon Vistara News

Bike Wheeling: ವ್ಹೀಲಿಂಗ್‌ ಹುಚ್ಚಾಟ; ಎಗರಿಬಿದ್ದು ಆಸ್ಪತ್ರೆ ಸೇರಿದ ಯುವಕರು

Bike Wheeling in vijayanagara

#image_title

ವಿಜಯನಗರ: ವಿವಿಧೆಡೆ ಯುವಕರು ವ್ಹೀಲಿಂಗ್‌ ಮೂಲಕ ಹುಚ್ಚಾಟ ಮೆರೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ನಡುವೆ ವ್ಹೀಲಿಂಗ್‌ ಮಾಡಲು (Bike Wheeling) ಹೋಗಿ ರಸ್ತೆ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ ಕನ್ಯಕಾ ಪರಮೇಶ್ವರಿ ದೇವಸ್ಥಾನ ಮುಂಭಾಗ ಅವಘಾತ ನಡೆದಿದೆ. ಒಬ್ಬ ಯುವಕ ಮತ್ತೊಬ್ಬ ಯುವಕನನ್ನು ಹಿಂಬದಿ ಕೂರಿಸಿಕೊಂಡು ವ್ಹೀಲಿಂಗ್‌ ಮಾಡುತ್ತಿದ್ದ. ಸ್ವಲ್ಪ ದೂರ ಸಾಗಿದ ಬಳಿಕ ಆಯತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಹೀಗಾಗಿ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರು ಬೈಕ್‌ನಿಂದ ಬಿದ್ದ ದೃಶ್ಯ ಹಿಂದೆ ತೆರಳುತ್ತಿದ್ದ ಸ್ನೇಹಿತರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Fraud Case: ಸರ್ಕಾರಿ ಕೆಲಸಕ್ಕೆಂದು ಕಂಡ ಕಂಡವರ ಬಳಿ ಹೋಗ್ಬೇಡಿ; ಫೇಕ್‌ ಅಪಾಯಿಂಟ್ಮೆಂಟ್‌ ಆರ್ಡರ್‌ ಕೊಡ್ತಾರೆ!

ಚಾಮರಾಜನಗರದಲ್ಲಿ ಮಿತಿ ಮೀರಿದ ವ್ಹೀಲಿಂಗ್ ಹಾವಳಿ

ಚಾಮರಾಜನಗರ: ತಾಲೂಕಿನಲ್ಲಿ ವ್ಹೀಲಿಂಗ್ ಹಾವಳಿ ಮಿತಿ ಮೀರಿದೆ. ಇದರಿಂದ ಅಕ್ಕಪಕ್ಕದಲ್ಲಿ ಹೋಗುವ ವಾಹನ ಸವಾರರು ಆತಂಕದಲ್ಲೇ ಸಂಚರಿಸಬೇಕಾಗುತ್ತಿದೆ. ರಸ್ತೆಯಲ್ಲಿ ಕೆಲ ಯುವಕರು ಮಾಡುವ ಹುಚ್ಚಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೀಗಾಗಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲೂಕಿನ ಮಹಂತಾಳ್ ಪುರ ಗೇಟ್ ರಸ್ತೆಯಲ್ಲಿ ಯುವಕರು ವ್ಹೀಲಿಂಗ್ ಮಾಡಿರುವುದು ಕಂಡುಬಂದಿದೆ. ಬೈಕ್ ನಂಬರ್ ಪ್ಲೇಟ್ ಕಿತ್ತೆಸೆದು ಯುವಕರು ವೀಲಿಂಗ್ ಮಾಡುತ್ತಿದ್ದಾರೆ. ವ್ಹೀಲಿಂಗ್‌ ಹಾವಳಿ ಮಿತಿ ಮೀರಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version