ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿ ಒಂದೂವರೆ ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಮಹಿಳಾ ಅಭ್ಯರ್ಥಿ ಹಾಗೂ ಆಕೆಯ ಪತಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಹಿಳಾ ಅಭ್ಯರ್ಥಿ ಶಾಂತಿಬಾಯಿ, ಪತಿ ಬಸ್ಯಾ ನಾಯಕ್ ಬಂಧಿತರು. ಮಹಿಳಾ ಅಭ್ಯರ್ಥಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆದು ಪಾಸ್ ಆಗಿದ್ದರು. ಓಎಂಆರ್ ಶೀಟ್ ತಿದ್ದಿ ಪರೀಕ್ಷೆ ಪಾಸ್ ಆಗಿರುವುದು ಬೆಳಕಿಗೆ ಬಂದ ನಂತರ ಈಕೆ, ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದಳು. ಪಾಸ್ ಆಗಲು ಈಕೆ ಕಿಂಗ್‌ಪಿನ್, ನೀರಾವರಿ ಇಲಾಖೆ ಅಸಿಸ್ಟೆಂಟ್ ಇಂಜಿನಿಯರ್ ಮಂಜುನಾಥ ಮೇಳಕುಂದಿಗೆ 50 ಲಕ್ಷ ರೂಪಾಯಿ ಲಂಚ ಕೊಟ್ಟಿದ್ದಳು.
ಆರೋಪಿ ಮಹಿಳೆ ಹಾಗೂ ಆಕೆಯ ಗಂಡ ಹೈದರಾಬಾದ್‌ನಲ್ಲಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ತೆರಳಿದ ಸಿಐಡಿ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿ ಸೋಮವಾರ ಕಲಬುರ್ಗಿ ಸಿಐಡಿ ಕಚೇರಿಗೆ ಕರೆತಂದಿದ್ದಾರೆ.
ಇಲ್ಲಿವರೆಗೆ ಈ ಅಕ್ರಮದಲ್ಲಿ 35 ಜನರನ್ನು ಸಿಐಡಿ ಬಂಧಿಸಿದೆ.
ಇದನ್ನೂ ಓದಿ | PSI recruitment scam: ಎಡಿಜಿಪಿ ಅಮೃತ್ ಪೌಲ್ ಬಂಧನ ಸಾಧ್ಯತೆ