ವಿಜಯಪುರ: ಟ್ರಕ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ (Bike Accident) ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ಬಿಬಿ ಇಂಗಳಗಿ ಗ್ರಾಮದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕ
ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದ ಭೂ ದಾಖಲೆ ಇಲಾಖೆ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಭೂಮಾಪಕರೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹಿರಿಯ ಭೂಮಾಪಕ ಎಂ.ಎಂ.ರಾಮದುರ್ಗ ಬಂಧಿತ ಅಧಿಕಾರಿಯಾಗಿದ್ದಾರೆ.
ಜಮೀನಿನ 11ಇ ಸ್ಕೆಚ್ ಮಾಡಿಕೊಡಲು ಅಧಿಕಾರಿ 10 ಸಾವಿರ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವಿಶ್ವನಾಥ್ ಎಂಬ ರೈತ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಮಂಗಳವಾರ ಕಚೇರಿಯಲ್ಲಿ ರೈತನಿಂದ ಭೂ ಮಾಪಕ ಅಧಿಕಾರಿ 10 ಸಾವಿರ ರೂಪಾಯಿ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
8.9 ಲಕ್ಷ ಮೌಲ್ಯದ 681 ಇ-ಸಿಗರೇಟ್, 805 ವಿದೇಶಿ ಸಿಗರೇಟ್ ವಶಕ್ಕೆ
ಬೆಂಗಳೂರು: ನಗರದ ವಿವಿಧೆಡೆ ಅನಧಿಕೃತವಾಗಿ ಇ-ಸಿಗರೇಟ್, ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, 8.9 ಲಕ್ಷ ಮೌಲ್ಯದ 681 ಇ-ಸಿಗರೇಟ್ ಹಾಗೂ 805 ವಿದೇಶಿ ಸಿಗರೇಟ್‌ಗಳನ್ನು ವಶಕ್ಕೆ. ಪಡೆದಿದ್ದಾರೆ.
ಇದನ್ನೂ ಓದಿ | Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ
ಕೋರಮಂಗಲ, ಮೈಕೋಲೇಔಟ್, ಕಬ್ಬನ್ ಪಾರ್ಕ್ , ಕೆ.ಎಸ್.ಲೇಔಟ್, ಪುಲಿಕೇಶಿ ನಗರ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 8.9 ಲಕ್ಷ ಮೌಲ್ಯದ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಜಪ್ತಿ ಮಾಡಿದ್ದಾರೆ. ಅಂಗಡಿ ಮಾಲೀಕರ ವಿರುದ್ಧ ಇ-ಸಿಗರೇಟ್ ನಿಷೇಧ ಕಾಯ್ದೆ ಹಾಗೂ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿ(ಕೋಟ್ಪಾ) ಪ್ರಕರಣ ದಾಖಲಾಗಿದೆ.