Site icon Vistara News

Kalaburagi News: ಕಾಗಿಣಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

Two persons drowned in ganga river

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ (Kalaburagi News) ಬೀರನಳ್ಳಿ ಗ್ರಾಮದ ಕಾಗಿಣಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. ಕಾಶಿನಾಥ್ (16) ಮತ್ತು ಭೀಮಾಶಂಕರ (15) ಮೃತ ವಿದ್ಯಾರ್ಥಿಗಳು. ಶುಕ್ರವಾರ ಕಾಗಿಣಾ ನದಿಗೆ ಮೂವರು ವಿದ್ಯಾರ್ಥಿಗಳು ಈಜಾಡಲು ತೆರಳಿದ್ದರು. ಇವರಲ್ಲಿ ಈಜು ಬಾರದ ಹಿನ್ನೆಲೆಯಲ್ಲಿ ಇಬ್ಬರು ನೀರುಪಾಲಾಗಿದ್ದು, ಒಬ್ಬ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾನೆ. ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ಯುವತಿ ಮೃತ್ಯು

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಆಯತಪ್ಪಿ ಕೆಳಗೆ (Road Accident) ಬಿದ್ದಿದ್ದಾಳೆ. ತೀವ್ರವಾಗಿ ಗಾಯಗೊಂಡ ಯುವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾಳೆ.

ಬೇಲೂರಿನಿಂದ ಚಿಕ್ಕಮಗಳೂರು ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತಿತ್ತು. ಕೋಟೆ ಬಸ್ ನಿಲ್ದಾಣದ ಬಳಿ ಇಳಿಯಲು ಬಾಗಿಲು ಬಳಿ ಯುವತಿ ನಿಂತಿದ್ದಳು. ಬಸ್ ನಿಲ್ಲಿಸುವ ಮೊದಲೇ ಆಯತಪ್ಪಿ ಯುವತಿ ಕೆಳಗೆ ಬಿದ್ದಿದ್ದಾಳೆ.

ಇದನ್ನೂ ಓದಿ | JDU Leader Shot Dead: ಮನೆ ಬಳಿಯೇ ಜೆಡಿಯು ನಾಯಕನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಅಲ್ಲಿದ್ದ ಸಾರ್ವಜನಿಕರು ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಕೆಳಗೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಹೆಸರು, ಯಾವ ಊರು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಸ್‌ನಿಂದ ಯುವತಿ ಬಿದ್ದ ದೃಶ್ಯವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Karnataka Election 2023: ಸಿದ್ದರಾಮನಹುಂಡಿಯಲ್ಲಿ ಕಾರ್-ಬೈಕ್ ಡಿಕ್ಕಿ ಜಗಳಕ್ಕೆ ಗಲಭೆ ಬಣ್ಣ ಕಟ್ಟಿದ ಬಿಜೆಪಿ; ಯತೀಂದ್ರ ಆರೋಪ

ಬೆಂಗಳೂರಿನಲ್ಲಿ ಹಿಟ್ ಆ್ಯಂಡ್‌ ರನ್‌, ಬೈಕ್ ಸವಾರ ಸಾವು

ಬೆಂಗಳೂರಿನ ಮಡಿವಾಳ ಸಮೀಪದ ಮೈಕೋ ಬಂಡೆ ಬಳಿ ಅಪಘಾತ ಸಂಭವಿಸಿ (hit and run) ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿರುವ ಹಿಟ್‌ ಆ್ಯಂಡ್‌ ರನ್‌ ದುರ್ಘಟನೆಯಿದು. ವೇಗವಾಗಿ ಬಂದ ಕಂಟೇನರ್ ಲಾರಿ, ಬೈಕಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಾಯಗೊಂಡ ಸವಾರ ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಮೃತರ ಹೆಸರು ಮತ್ತಿತರ ವಿವರ ತಿಳಿದುಬರಬೇಕಿದೆ. ಘಟನೆ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯ ಪತ್ತೆಗಾಗಿ ಸಿಸಿ ಟಿವಿ ಪರಿಶೀಲನೆ ನಡೆಸಲಾಗುತ್ತಿದೆ.

Exit mobile version